Advertisement
ಅದಕ್ಕೇನು ಮಾಡಬೇಕು?ವಾರಕ್ಕೆ 2-3 ಬಾರಿ ಅಂದರೆ 30ರಿಂದ 40 ನಿಮಿಷದಷ್ಟು ಅವಧಿ ವಾಕಿಂಗ್ ಮಾಡಿದರೆ ನಿಮ್ಮ ಕಣ್ಣಿನ ನರಗಳ ಮೇಲೆ ಬೀಳುವ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಸಿಹಿಮೂತ್ರ ಖಾಯಿಲೆ ಮಿತಿಮೀರಿ ಅದು ಕುರುಡಿಗೆ ಕಾರಣವಾಗುವ ವಿಷಯ ನಿಮಗೆ ಗೊತ್ತಲ್ಲ, ಹೆಚ್ಚಿನ ಸಂದರ್ಭದಲ್ಲಿ ಸರಿಯಾದ ಆಹಾರ ತೆಗೆದುಕೊಳ್ಳದೇ ಅಥವಾ ಎಕ್ಸರ್‌ಸೈಜ್ ಮಾಡದೇ ಇರುವುದೇ ಇದಕ್ಕೆ ಕಾರಣವಾಗಿರುತ್ತದೆ. ವಯೋಸಹಜವಾಗಿ ದೇಹ ಹಣ್ಣಾಗುತ್ತ ಅದೇ ಕಣ್ಣು ಹೋಗುವುದಕ್ಕೂ ಕಾರಣವಾಗುತ್ತದೆ. ಆದರೆ, ನಿರಂತರವಾಗಿ ದೇಹವನ್ನು ಎಕ್ಸರ್‌ಸೈಜ್ ಮೂಲಕ ಚೆನ್ನಾಗಿ ಇಟ್ಟುಕೊಂಡರೆ ಖಂಡಿತ ಕಣ್ಣು ಸುಂದರವಾಗಿ ಇರಲು ಸಾಧ್ಯ.
ಅಷ್ಟಕ್ಕೂ ಎಕ್ಸರ್‌ಸೈಜ್ ಅಂದರೆ ಏನು? ಬೆವರಿಳಿಸು, ಕುಳಿತೇಳು, ಭಾರ ಎತ್ತು, ಮೈ ಬಗ್ಗಿಸಿ ಸಾಮು ತೆಗೆ- ಇದಲ್ಲ ಅರ್ಥ. ಎಕ್ಸರ್‌ಸೈಜ್ ಅಂದರೆ ನಿಮ್ಮ ಲೈಫ್ ಸ್ಟೈಲ್ ಕೂಡ. ಅಂದರೆ ನೀವೇನು ತಿನ್ನುತ್ತೀರಿ, ಎಷ್ಟು ಹೊತ್ತು ದೇಹಕ್ಕೆ ವ್ಯಾಯಾಮ ಒದಗಿಸುತ್ತೀರಿ, ಹೇಗೆ ನಿಮ್ಮ ದೇಹವನ್ನು ನೋಡಿಕೊಳ್ಳುತ್ತೀರಿ- ಇವೆಲ್ಲ ಮುಖ್ಯ. ಕೆಲ ಅಧ್ಯಯನಗಳು ಹೇಳುವ ಪ್ರಕಾರ- ನೀವು ಎಷ್ಟು ದೇಹವನ್ನು ಎಲ್ಲಾ ರೀತಿಯಲ್ಲೂ ಚೆನ್ನಾಗಿಟ್ಟುಕೊಳ್ಳುತ್ತೀರೋ ಅಷ್ಟು ನಿಮ್ಮ ಕಣ್ಣಿನ ಮೇಲೆ ಬೀಳುವ ಒತ್ತಡ ಕಮ್ಮಿಯಾಗುತ್ತದೆ. ಸಂಗೀತ, ನೃತ್ಯ ಹಿನ್ನೆಲೆ ಇರುವ ಏರೋಬಿಕ್ಸ್ ಮಾಡುವುದರಿಂದ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸುತ್ತದೆ.