ಬೆಂಗಳೂರು: ಕಾಂಗ್ರೆಸ್‌ನಲ್ಲಿ ಜಾತ್ರೆ ಶುರುವಾಗಿಲ್ಲ, ಬದಲಾಗಿ ಅಂತಿಮ ಯಾತ್ರೆ ರೆಡಿ ಯಾ ಗುತ್ತಿ ದೆ ಎಂದು ಬಿಜೆಪಿ ರಾಜ್ಯಾ ಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಶನಿವಾರ ಹಾಸನದ ಮುಖಂಡ ಯೋಗಾ ರಮೇಶ್ ಪಕ್ಷ ಸೇರ್ಪಡೆ ಕಾರ್ಯ ಕ್ರಮದಲ್ಲಿ ಮಾತ ನಾಡಿದ ಅವರು, ಕಾಂಗ್ರೆಸ್‌ನಲ್ಲಿ ಜಾತ್ರೆ ಶುರುವಾಗಿದೆ ಎಂದು ಡಿ.ಕೆ.ಶಿವ ಕುಮಾರ್ ಹೇಳುತ್ತಾರೆ. ಆದರೆ, ಅದು ಜಾತ್ರೆಯಲ್ಲ ಶವಯಾತ್ರೆ.
ಕಾಂಗ್ರೆಸ್ ಮುಳುಗುವ ಹಡಗು, ಬಿಜೆಪಿ ಬೆಳಗುವ ಹಡಗು. ಬೇರೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಹತ್ತಾರು ನಾಯಕರು ಬರುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕೊರತೆ ಇದೆ ಎಂದು ತಿಳಿಸಿದರು.
ಕೈನಲ್ಲಿ ಬೀದಿ ಜಗಳ ಆರಂಭ: ಕಾಂಗ್ರೆಸ್‌ನಲ್ಲಿ ಬೀದಿ ಜಗಳ ಆರಂಭವಾಗಿದೆ. ರಾಜ್ಯಾಧ್ಯಕ್ಷರಾಗಿ ವರ್ಷ ಕಳೆದರೂ ಪದಾಧಿಕಾರಿಗಳು ನೇಮಕಗೊಂಡಿಲ್ಲ. ಇರುವವರೇ ಫೆವಿಕಾಲ್ ಹಾಕಿಕೊಂಡು ಕೂತಿದ್ದಾರೆ. ಮುಂದಿನ ಚುನಾವಣೆ ಯಲ್ಲಿ ಕಾಂಗ್ರೆಸ್ ಬೀದಿಯಲ್ಲಿ ಎರಡು ಹೋಳಾಗಲಿದೆ ಎಂದರು.
ಕಾಂಗ್ರೆಸ್ ಸೇರಿ ತಪ್ಪು ಮಾಡಿದೆ: ಪಕ್ಷ ಸೇರ್ಪಡೆಯಾದ ಯೋಗ ರಮೇಶ್ ಮಾತನಾಡಿ, ಹಾಸನದಲ್ಲಿ ಜೆಡಿಎಸ್ ಸಂಘಟನೆ ಮೀರಿ ಪಕ್ಷ ಬೆಳೆಸುವ ಕೆಲಸ ಮಾಡಿದೆವು. ಲೋಕಸಭೆ ಚುನಾವಣೆ ವೇಳೆ ಎ.ಮಂಜು ಬಿಜೆಪಿಗೆ ಬಂದರು. ಆಗ ನಾನು ಕಾಂಗ್ರೆಸ್ ಸೇರಿ ತಪ್ಪು ಮಾಡಿದೆ ಅನಿಸಿತು. ಅಂದು ನಾನು ಪಕ್ಷದಲ್ಲಿ ಉಳಿದಿದ್ದರೆ ನೂರಕ್ಕೆ ನೂರು ಲೋಕಸಭೆ ಸ್ಥಾನ ಗೆಲ್ಲಬಹುದಿತ್ತು ಎಂದು ತಿಳಿಸಿದರು.
ಕಾಂಗ್ರೆಸ್ ಸೇರಿದ್ದು ಕಹಿ ಘಟನೆ: ಕಾಂಗ್ರೆಸ್ ಸೇರಿದ್ದು ನನ್ನ ಜೀವನದ ಕಹಿ ಘಟನೆ ಎಂಬುದು ನಂತರ ನನಗೆ ಅರಿವು ಆಗಿ ಮತ್ತೆ ಬಿಜೆಪಿ ಸೇರುವ ನಿರ್ಧಾರ ಮಾಡಿದೆ. ಎಲ್ಲರ ಸಹಕಾರದಿಂದ ಪಕ್ಷ ಸೇರಿದ್ದೇನೆ, ಮುಂದೆ ಪಕ್ಷ ಬಲಪಡಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು. ಮಾಜಿ ಸಚಿವ ಎ.ಮಂಜು ಪಕ್ಷದಿಂದ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಎದುರಾಳಿಯಾಗಿದ್ದ ಯೋಗಾ ರಮೇಶ್ ಬಿಜೆಪಿ ಸೇರ್ಪಡೆಯಾಗಿದಾರೆ.
ಎ ಮಂಜುಗೆ ಸೆಡ್ಡು ಹೊಡೆದು, ಯೋಗ ರಮೇಶ್ ಅವರನ್ನು ನಾಯಕರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ಅರಕಲಗೂಡು ಕ್ಷೇತ್ರದಿಂದ ಯೋಗಾ ರಮೇಶ್ ಸ್ಪರ್ಧೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.