Advertisement
ಕೋವಿಡ್ ನಿಯಂತ್ರಿಸಲು ಬಿಜೆಪಿ ಏನು ಮಾಡುತ್ತಿದೆ?
Related Articles
Advertisement
ಬೆಡ್ ಬ್ಲಾಕಿಂಗ್ ಹಗರಣ ನಿಮ್ಮ ಸರ್ಕಾರದ ವಿರುದ್ಧ, ನಿಮ್ಮ ಸಂಸದರೇ ಆರೋಪ ಮಾಡುತ್ತಿದ್ದಾರಲ್ಲಾ?
ಹಾಗೇನಿಲ್ಲ. ಸರ್ಕಾರದ ವಿರುದ್ಧ ಆರೋಪ ಅಲ್ಲ ಅದು. ಎಲ್ಲಿ ಸಮಸ್ಯೆಯಾಗುತ್ತಿದೆ ಅನ್ನುವುದನ್ನು ಅವರು ಸರ್ಕಾರದ ಗಮನಕ್ಕೆತಂದಿದ್ದಾರೆ. ಕೆಳ ಮಟ್ಟದಲ್ಲಿ ಆಗುವ ಸಮಸ್ಯೆಗಳು ಕೆಲವು ಬಾರಿ ಸರ್ಕಾರದ ಗಮನಕ್ಕೆ ಬರುವುದಿಲ್ಲ. ಅದನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಅದು ಸರ್ಕಾರದ ವಿರುದ್ಧವಲ್ಲ.
ಒಂದೇ ಕೋಮಿನವರನ್ನು ಟಾರ್ಗೆಟ್ ಮಾಡಿದ್ದಾರೆ ಅಂತ ಕಾಂಗ್ರೆಸ್‌ನವರು ಆರೋಪ ಮಾಡ್ತಿದ್ದಾರೆ?
ಒಂದೇ ಕೋಮಿನವರು ಅಂತೇನಿಲ್ಲ. ಬೇರೆ ಕೆಲವು ಅಧಿಕಾರಿಗಳೂ ಇದ್ದಾರೆ. ಅವರನ್ನೂ ಅಮಾನತು ಮಾಡಲಾಗಿದೆ. ಕಾಂಗ್ರೆಸ್‌ನವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಒಂದೇ ಜಾತಿಯವರು ಹೆಚ್ಚಿನವರಿದ್ದಾರೆ. ಕೋಮು ಭಾವನೆ ಹುಡುಕುವುದು ಸರಿಯಲ್ಲ.
ಚಾಮರಾಜನಗರ ದುರಂತ ಸರ್ಕಾರದ ನಿರ್ಲಕ್ಷ್ಯದಿಂದಲೇ ನಡೆಯಿತು ಎಂಬ ಆರೋಪ ಕೇಳಿ ಬರುತ್ತಿದೆ?
ಹಾಗೇನಿಲ್ಲ, ಪ್ರಕರಣ ಬೆಳಕಿಗೆ ಬಂದ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅಲ್ಲಿಯೇ ಉಳಿದು ಸರಿಪಡಿಸುವ ಕೆಲಸ ಮಾಡಿದ್ದಾರೆ. ಮೈಸೂರು ಮತ್ತುಚಾಮರಾಜನಗರ ಜಿಲ್ಲೆಗಳ ನಡುವಿನ ಗೊಂದಲದಿಂದ ಹೀಗಾಗಿದೆ ಅಂತ ಇದೆ.
ಜಿಂದಾಲ್‌ಗೆ ಜಮೀನು ನೀಡಿರುವ ಬಗ್ಗೆ ಪಕ್ಷದ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರಲ್ಲ?
ಈ ಬಗ್ಗೆ ನಾನೂ ಸಿಎಂ ಜೊತೆ ಮಾತನಾಡಿದ್ದೇನೆ. ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆಂದು ಹೇಳಿದ್ದಾರೆ. ಶಾಸಕರ ಸಲಹೆಗಳನ್ನು ಸಿಎಂ ಪಡೆದುಕೊಂಡಿದ್ದಾರೆ.
ಉಪ ಚುನಾವಣೆ ಫಲಿತಾಂಶದ ಬಗ್ಗೆ ಹೈಕಮಾಂಡ್ ಬೇಸರ ವ್ಯಕ್ತಪಡಿಸಿದೆಯಂತೆ?
ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ್ದೇವೆ. ಬಸವಕಲ್ಯಾಣ ನಮ್ಮದಾಗಿರಲಿಲ್ಲ. ಅಲ್ಲಿ ಗೆದ್ದಿದ್ದೇವೆ. ಮಸ್ಕಿಯಲ್ಲೂ ನಮ್ಮ ಪಕ್ಷದ ಅಭ್ಯರ್ಥಿ ಗೆದ್ದಿರಲಿಲ್ಲ. ಬೆಳಗಾವಿಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದೇವೆ. ಈ ಬಗ್ಗೆ ಬೂತ್ ಮಟ್ಟದಲ್ಲಿ ಮಾಹಿತಿ ಪಡೆಯಲು ಸೂಚಿಸಿದ್ದಾರೆ. ಕೋವಿಡ್ ಮುಗಿದ ನಂತರ ಈ ಬಗ್ಗೆ ಮಾಹಿತಿ ಪಡೆದು ವರದಿ ಮಾಡಲಾಗುವುದು.
ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿದೆ ಅಂತ ಕಾಂಗ್ರೆಸ್ ನಾಯಕರು ಆರೋಪಿ ಸುತ್ತಿದ್ದಾರಲ್ಲ?
ರಾಜ್ಯ ಸರ್ಕಾರ ಉತ್ತಮ ಕ್ರಮ ತೆಗೆದುಕೊಳ್ಳುತ್ತಿದೆ. ಎರಡನೇ ಅಲೆಯಿಂದಕರ್ನಾಟಕ ಅಷ್ಟೇ ಅಲ್ಲ, ಕೇರಳ, ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿಯೂ ಕೈ ಮೀರಿ ಹೋಗುತ್ತಿದೆ. ಏಕಾಏಕಿ ಬಂದಿರುವುದರಿಂದ ನಿಯಂತ್ರಣ ಕಷ್ಟವಾಗುತ್ತಿದೆ. ಕಾಂಗ್ರೆಸ್‌ನವರು ಆರೋಪಿಸುವ ಬದಲು ಸಲಹೆ-ಸೂಚನೆ ನೀಡಲಿ. ಕಾಂಗ್ರೆಸ್ ಹೆಚ್ಚಿನ ಅವಧಿ ಅಧಿಕಾರ ನಡೆಸಿದೆ. ಆಸ್ಪತ್ರೆಯಲ್ಲಿ ಬೆಡ್, ವೆಂಟಿಲೇಟರ್, ಆಕ್ಸಿಜನ್, ಕೊರತೆ ಆಗಲು ಇವರೇ ಕಾರಣ. ಸರ್ಕಾರ ಈಗ ಅಗತ್ಯ ಇರುವ ಕ್ರಮ ಕೈಗೊಳ್ಳುತ್ತಿದೆ. ಸರ್ಕಾರದ ಕಾರ್ಯವೈಖರಿ ಬಗ್ಗೆ ತೃಪ್ತಿಯಿದೆ. ಇನ್ನಷ್ಟು ಕ್ರಮ ತೆಗೆದುಕೊಳ್ಳಬೇಕು.
ಲಾಕ್‌ಡೌನ್ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಅಂತ ಆರೋಪವಿದೆ?
ಕಳೆದ ವರ್ಷ ಲಾಕ್‌ಡೌನ್ ಘೋಷಣೆ ಮಾಡಿ ದ್ದರಿಂದ ಎಷ್ಟು ಸಮಸ್ಯೆ ಆಯಿತು ಅಂತ ಎಲ್ಲರ ಗಮನದಲ್ಲಿದೆ. ಹೀಗಾಗಿ ಈ ಬಾರಿ ಮುಖ್ಯಮಂತ್ರಿ ಯೋಚಿಸಿ ತೀರ್ಮಾನತೆಗೆದುಕೊಂಡಿದ್ದಾರೆ. ಬಿಗಿ ಕ್ರಮ ಕೈಗೊಂಡರೆರೈತರು ಬೆಳೆದ ಬೆಳೆ ಬೀದಿಯಲ್ಲಿ ಚೆಲ್ಲುವಂತಾಗುತ್ತದೆ. ಸರ್ಕಾರ ಎಲ್ಲವನ್ನೂ ಗಮನಿಸಿ ನಿರ್ಧಾರ ತೆಗೆದುಕೊಂಡಿದೆ.
ಲಾಕ್‌ಡೌನ್ ನಿಂದ ತೊಂದರೆಗೊಳಗಾದವರಿಗೆ ಪರಿಹಾರನೀಡಬೇಕೆಂಬ ಬೇಡಿಕೆ ಇದೆ. ಸರ್ಕಾರಕ್ಕೆ ನೀವೇನಾದರೂ ಸಲಹೆ ನೀಡಿದ್ದೀರಾ?
ಈ ಬಗ್ಗೆ ನಾವೂ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಸಂಕಷ್ಟಕ್ಕೆ ಸಿಲುಕಿರುವ ವರ್ಗ ಹಾಗೂ ಸಮುದಾಯಗಳ ನೆರವಿಗೆ ಬರಲು ಸರ್ಕಾರ ಖಂಡಿತ ಕ್ರಮ ಕೈಗೊಳ್ಳುತ್ತದೆ. ಸಿಎಂ ಸಚಿವರು ಮತ್ತು ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ.
-ಸಂದರ್ಶನ: ಶಂಕರ ಪಾಗೋಜಿ