ಹುಬ್ಬಳ್ಳಿ: ವಿಜಯಪುರ ಮಹಾನಗರ ಪಾಲಿಕೆ, ಕೊಳ್ಳೆಗಾಲ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆದಿದ್ದು, ಬಿಜೆಪಿಗಿರುವ ಬೆಂಬಲಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಳ್ಳೆಗಾಲದಲ್ಲಿ ಆರು ಸ್ಥಾನ, ವಿಜಯಪುರದಲ್ಲಿ ನಮ್ಮ ಪಕ್ಷವೇ ಅಧಿಕಾರ ಬಂದಿದೆ. ಇದಕ್ಕಾಗಿ ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಜನರು ಮೆಚ್ಚಿದ್ದಾರೆ ಎನ್ನುವುದಕ್ಕೆ ಇದು ಉದಾಹರಣೆಯಾಗಿವೆ.
ಕಾಂಗ್ರೆಸ್ ಶೇ.40 ಕಮಿಷನ್ ಆರೋಪವನ್ನು ಜನರು ನಂಬಿಲ್ಲ. ಕೈ ಅನ್ನು ತಿರಸ್ಕಾರ ಮಾಡಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ರಾಹುಲ್ ಗಾಂಧಿ ಭಾರತ ಜೋಡೋ ಪಾದಯಾತ್ರೆ ಮಾಡಿರುವ ಕ್ಷೇತ್ರದಲ್ಲಿಯೇ ಬಿಜೆಪಿಗೆ ಹೆಚ್ಚು ಮತಗಳು ಬಂದಿವೆ. ಭಾರತ ಜೋಡೋದಿಂದ ಯಾವುದೇ ಪರಿಣಾಮ ಬೀರಿಲ್ಲ. ಡಿಕೆಶಿ, ಸಿದ್ದರಾಮಯ್ಯ ಜೋಡಿ ಒಂದಾಗಲಿಲ್ಲ. ಆದರೆ, ಬಿಜೆಪಿ ಕಾರ್ಯಕರ್ತರು, ಮುಖಂಡರು ಶಾಸಕರು ಒಟ್ಟಾಗಿ ಕೆಲಸ ಪರಿಣಾಮದಿಂದ ಈ ಫಲಿತಾಂಶ ಬಂದಿದೆ. ಶೇ. 40 ಕಮಿಷನ್ ಆರೋಪ ಇದು ಕಾಂಗ್ರೆಸ್ ಎಜೆಂಟರ್ ಕಥೆಯಾಗಿದೆ ಎಂದಿದ್ದರು.
ಇದನ್ನೂ ಓದಿ:ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆಸ್ಪತ್ರೆಗೆ ದಾಖಲು
ಲೋಕಾಯುಕ್ತಕ್ಕೆ ಕಾಂಗ್ರೆಸ್ ನವರು ಜೀವ ತೆಗೆದಿದ್ದರು, ಆದರೆ ಬಿಜೆಪಿ ಅದಕ್ಕೆ ಮರು ಜೀವ ನೀಡಿದೆ. ಕಾಂಗ್ರೆಸ್ ನವರು ಭ್ರಷ್ಟಾಚಾರದ ಬಗ್ಗೆ ದೂರು ನೀಡಲಿ ಇದು ಸಿದ್ದರಾಮಯ್ಯ ಅವರ ಒಳತಂತ್ರಗಾರಿಕೆ. ಸಿದ್ದರಾಮಯ್ಯ ಅವರು ಬೇಕಾದರೆ ಲೋಕಾಯುಕ್ತಕ್ಕೆ ದೂರು ಕೊಡಲಿ. ಅತಿ ಹೆಚ್ಚು ಗುತ್ತಿಗೆದಾರರು ಕಾಂಗ್ರೆಸ್ ನ ಎಜೆಂಟ್ ರಾಗಿ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರರು ಕಾಂಗ್ರೆಸ್ ಪಕ್ಷದ ಸೀಟ್ ಕೇಳಲು ಹೋಗುತ್ತಿದ್ದಾರೆ. ಅದಕ್ಕೆ ಅವರು ಭ್ರಷ್ಟಾಚಾರ ಆರೋಪ ಮಾಡಿ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿ ಅವರು ಈ ಆರೋಪ ಮಾಡುತ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಚರ್ಚೆ ವಿಚಾರ ನಡೆದಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿಕೆಗೆ ಕಟೀಲು ಪ್ರತಿಕ್ರಯಿಸಿದ ಅವರು, ಜಗದೀಶ ಶೆಟ್ಟರ ನಮ್ಮ ಹಿರಿಯರ ನಾಯಕರು, ಅವರು ಹೇಳಿದ್ದಕ್ಕೆ ಚರ್ಚೆ ಮಾಡಲ್ಲ, ನಾವು ಅವರನ್ನ ಸೈಡ್ ಲೈನ್ ಮಾಡಿಲ್ಲ. ಅವರಿಗೆ ಟಿಕೆಟ್ ಸಿಗುವುದು ಯಾಕೆ ಅನುಮಾನ ಎಂದ ಕಟೀಲ, ಅವರನ್ನ ಗವರ್ನರ್ ಮಾಡುವ ಚರ್ಚೆ ನಡೆದಿಲ್ಲ. ನಮ್ಮಲ್ಲಿ ಟಿಕೆಟ್ ಚರ್ಚೆ ನಡೆದಿಲ್ಲ. ಅಭ್ಯರ್ಥಿ ಆಯ್ಕೆ ಜನವರಿ ನಂತರ ಎಂದರು.
ಪೂರ್ಣಾವಧಿ ಮುಗಿದ ಬಳಿಕವೇ ಚುನಾವಣೆ ನಡೆಯಲಿದ್ದು ನಮ್ಮದೇ ಸರಕಾರ ಅಧಿಕಾರಕ್ಕೆ ಬರಲಿದೆ ಎಂದರು.