Advertisement
ದೇಶದ ಭದ್ರತೆ, ಏಕತೆ ವಿಚಾರದಲ್ಲಿ ಕಾಂಗ್ರೆಸ್ ಕಣ್ಣಾಮುಚ್ಚಾಲೆ ಆಡುತ್ತಿರುವುದು ಇದೇ ಮೊದಲಲ್ಲ. ಮಂಗಳೂರಿನ ಕುಕ್ಕರ್ ಬಾಂಬ್ ವಿಚಾರ ಭಯೋತ್ಪಾದನೆಗೆ ಸಮಾನವಲ್ಲ ಎಂದು ಮಾತನಾಡುವ ಇವರು ಅಧಿಕಾರಕ್ಕೆ ಬರದಂತೆ ಜನತೆ ತಕ್ಕ ಪಾಠ ಕಲಿಸುತ್ತಾರೆ; ಅಲ್ಲದೆ ಪೂರ್ಣಪ್ರಮಾಣದಲ್ಲಿ ಮೂಲೆಗುಂಪು ಮಾಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Related Articles
Advertisement
ದೇಶದ ಭದ್ರತೆ ಮತ್ತು ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸೇರಿದಂತೆ ಪಂಚ ರಾಜ್ಯ ಚುನಾವಣೆ, ಗುಜರಾತ್ ಚುನಾವಣೆಯಲ್ಲಿ ಜನರು ಬಿಜೆಪಿ ಪರ ನಿಂತಿದ್ದಾರೆ. ಕರ್ನಾಟಕದಲ್ಲಿ ಅಧಿಕಾರಕ್ಕೇರುವ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ ಅಧ್ಯಕ್ಷರಿಗೆ ಅದು ತಿರುಕನ ಕನಸು ಎಂಬುದರ ಅರಿವಾಗಿದೆ. ಆದ್ದರಿಂದಲೇ ಅವರು ಭಯೋತ್ಪಾದಕರ ಪರ ನಿಂತು ತಮ್ಮ ತುಷ್ಟೀಕರಣ ನೀತಿಯನ್ನು ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನಮ್ಮ ದೇಶದ ಸೈನಿಕರ ಪರ ನಿಲ್ಲದೆ, ರಕ್ಷಣಾ ವಿಚಾರದಲ್ಲೂ ಸಾಕ್ಷಿ ಕೇಳುವ ಮಟ್ಟಕ್ಕೆ ಕಾಂಗ್ರೆಸ್ ತಲುಪಿದೆ. ಇದೀಗ ಭಯೋತ್ಪಾದಕರ ಪರ ನಿಂತು ತನ್ನ ಲಜ್ಜೆಗೇಡಿ ವರ್ತನೆಯನ್ನು ಮುಂದುವರಿಸಿದೆ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಭಯೋತ್ಪಾದನೆಯಂಥ ವಿಚಾರದಲ್ಲೂ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್ಸಿಗರ ಹೇಯ ಮನಸ್ಥಿತಿಯನ್ನು ಖಂಡಿಸುವುದಾಗಿ ಅವರು ತಿಳಿಸಿದ್ದಾರೆ.