ಬೆಂಗಳೂರು: ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಎಂದು ಟವಲ್ ಹಾಕಿಕೊಂಡಿದ್ದವವರು ತಮ್ಮ ಸಿಎಂ ಟವಲ್ ತೆಗೆಯಬೇಕು. ಸಿದ್ದರಾಮಯ್ಯ ಎಲ್ಲೂ ಪ್ರವಾಸ ಮಾಡಿರಲಿಲ್ಲ. ಡಿ ಕೆಶಿವಕುಮಾರ್ ಅಧ್ಯಕ್ಷರಾಗಿ ಸೋತಿದ್ದಾರೆ ಎಂದು ಸಂದೇಶ ಸಾರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.
ನಗರಪಾಲಿಕೆಗಳ ಚುನಾವಣೆ ಫಲಿತಾಂಶ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮೂರು ಮಹಾನಗರ ಪಾಲಿಕೆಗಳು ಕೆಲವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಫಲಿತಾಂಶ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಬಿಜೆಪಿಗೆ ಮತ ಹಾಕಿದ ಮತದಾರರಿಗೆ ಧನ್ಯವಾದಗಳು ಎಂದರು.
ಯಡಿಯೂರಪ್ಪ ಮಾರ್ಗದರ್ಶನ ಹಾಗೂ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಜನ ಮನ್ನಣೆ ನೀಡಿದ್ದಾರೆ. ಇದರಿಂದ ನಮ್ಮ ಜವಾಬ್ದಾರಿ ಹೆಚ್ಚಿದೆ. ಬೆಳಗಾವಿಯಲ್ಲಿ ಮೊದಲ ಬಾರಿಗೆ ಚಿಹ್ನೆಯಡಿ ಸ್ಪರ್ಧೆ ಮಾಡಿದ್ದು ಬಿಜೆಪಿಗೆ ಹೆಚ್ಚು ಸ್ಥಾನ ನೀಡಿದ್ದಾರೆ. ಹುಬ್ಬಳ್ಳಿ- ಧಾರವಾಡದಲ್ಲಿ ಮೂರನೇ ಬಾರಿಯೂ ನಮ್ಮದೇ ಅಧಿಕಾರ ಇದೆ. ಹು- ಧಾ ಹಾಗೂ ಬೆಳಗಾವಿಗೆ ಸ್ಮಾರ್ಟ್ ಸಿಟಿ ಸ್ಥಾನ ನೀಡಿದ್ದೇವೆ ಯಡಿಯೂರಪ್ಪ ಸಿಎಂ ಆಗಿದ್ದಾಗ ಹುಬ್ಬಳ್ಳಿ ಧಾರವಾಡಕ್ಕೆ ಹೆಚ್ಚಿನ ಅನುದಾನ ನೀಡಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನರೇಂದ್ರ ಮೋದಿ ಸರ್ಕಾರದ ಸಾಧನೆಗಳು, ಯಡಿಯೂರಪ್ಪ ಅವರ ಎರಡು ವರ್ಷಗಳ ಅಧಿಕಾರಿ ಹಾಗೂ ಬೊಮ್ಮಾಯಿ ಅವರ ಅಮೃತ ಕಲ್ಪನೆಯ ಯೋಜನೆಗಳಿಗೆ ಜನರ ಬೆಂಬಲ ದೊರೆತಿದೆ ಎಂದು ಕಟೀಲ್ ಹೇಳಿದರು.
ಇದನ್ನೂ ಓದಿ:ಬೆಳಗಾವಿ ಪಾಲಿಕೆಯಲ್ಲಿ ಅರಳಿದ ಕಮಲ: ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿ
ನಾವು ಬೆಳಗಾವಿಯಲ್ಲಿ ಒಂದು ಸಂದೇಶ ನೀಡಬೇಕು ಎಂದು ಅಭ್ಯರ್ಥಿಗಳನ್ನು ಹಾಕಿದ್ದೇವು. ಅದರಲ್ಲಿ ಯಶಸ್ಬಿಯಾಗಿದ್ದೇವೆ. ಎಲ್ಲರ ಪರಿಶ್ರಮದಿಂದ ನಮಗೆ ಯಶಸ್ಸು ಸಿಕ್ಕಿದೆ. ಪೇಜ್ ಪ್ರಮುಖರು, ಮತಗಟ್ಟೆಯ ಅಧ್ಯಕ್ಷರ ಮನೆಗೆ ಬೋರ್ಡ್ ಹಾಕುವುದು. ನಮಗೆ ಯಶಸ್ಸು ದೊರೆಯಲು ಕಾರಣವಾಗಿದೆ. ಕಾರ್ಯಕರ್ತರ ಶ್ರಮದಿಂದ ಗೆಲುವು ದೊರೆಯುತ್ತದೆ ಎಂಬ ಸಂದೇಶ ನೀಡಿದೆ ಎಂದರು.
ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಿದ್ದೇವೆ. ಯಡಿಯೂರಪ್ಪ ಇರುವ ಬಿಜೆಪಿ ಇದು. ರಾಜ್ಯದಲ್ಲಿ ಮುಖ್ಯಮಂತ್ರಿ ನಾಯಕತ್ವ ಅಂತ ಹೇಳಿದಾರೆ. ಅಮಿತ್ ಶಾ ಸ್ಪಷ್ಟ ಸಂದೇಶ ಸಾರಿದಾರೆ ಅವರ ಆದೇಶದಂತೆ ನಾವು ಬೊಮ್ಮಾಯಿ ನಾಯಕತ್ವದಲ್ಲಿ ನಾವೆಲ್ಲರು ಒಟ್ಟಾಗಿ ಹೋಗುತ್ತೇವೆ ಎಂದರು.
ಬೆಲೆ ಏರಿಕೆ ಬೇರೆ ಬೇರೆ ಕಾರಣದಿಂದ ಹೆಚ್ಚಾಗಿದೆ. ನಾವು ಬೆಲೆ ಏರಿಕೆ ಹೆಚ್ಚಳದ ವಿರುದ್ಧ ಹೋರಾಟ ಮಾಡಿದ್ದೇವೆ. ಈಗ ನಾವು ಬೆಲೆ ಇಳಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಬೆಲೆ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳುತ್ತಿದೆ. ಕೋವಿಡ್ ಲಸಿಕೆ ಉಚಿತ ಕೊಟ್ಟಿದೆ. 20 ಕೆಜಿ ಅಕ್ಕಿ ಉಚಿತವಾಗಿ ನೀಡಿದೆ. ಜಗತ್ತಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.