Advertisement
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಟೀಲ್, ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಕೇಂದ್ರ ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಲಾಗಿದೆ ಅಲ್ಲದೆಡೆ ಕೇಂದ್ರ ನಾಯಕರು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದರು.ಅಸಮಧಾನಿತ ಶಾಸಕರಿಂದ ದೆಹಲಿ ಯಾತ್ರೆ ವಿಚಾರ ವಿಚಾರವಾಗಿ ಮಾತನಾಡಿದ ಅವರು ದೆಹಲಿಗೆ ಅವರಷ್ಟಕ್ಕೇ ಹೋಗ್ತಾರೆ, ಯಾವುದೋ ಕಾರಣಕ್ಕೆ ಹೋಗಿರಬಹುದು, ಸಂಪುಟ ವಿಸ್ತರಣೆ ಆದಾಗ ಸಹಜವಾಗೇ ಅಸಮಧಾನ ಇರುತ್ತೆ, ನೋವು ವ್ಯಕ್ತಪಡಿಸೋಕೆ ಅವರಿಗೆ ಸ್ವಾತಂತ್ರ್ಯವಿದೆ ಎಂದ ಅವರು ಅಸಮಾಧಾನಿತರನ್ನು ಕರೆದು ಮಾತನಾಡುತ್ತೇನೆ, ಅದು ನನ್ನ ಜವಾಬ್ದಾರಿ ಕೂಡಾ ಅವರವರ ಭಾವಕ್ಕೆ ಅವರವರ ಭಕ್ತಿಯನ್ನು ಪಾರ್ಟಿ ಗಮನಿಸುತ್ತಿದೆ, ಒಂದು ವೇಳೆ ಡ್ಯಾಮೇಜ್ ಆಗ್ತಿದ್ರೆ ಸರಿಪಡಿಸುತ್ತೇವೆ ಎಂದರು.