Advertisement
Related Articles
Advertisement
ಮೋದಿಜಿ ಪ್ರಧಾನಿಯಾದ ನಂತರ ಯೋಜನೆಗಳು ಬಡಜನರ ಮನೆಬಾಗಿಲಿಗೆ ತಲುಪುವಂತೆ ಮಾಡಿದರು. ಇದರಿಂದಾಗಿ ಎಷ್ಟೋ ಗ್ರಾಮಗಳ ಅಸಂಖ್ಯಾತ ಮನೆಗಳು ವಿದ್ಯುತ್ ಕಂಡವು. ಹಳ್ಳಿಗಳ ಮಹಿಳೆಯರ ಅನು ಕೂಲತೆಗಾಗಿ ಮನೆ ಮನೆ ಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯತ್‌ಗಳಿಗೆ ಅನುದಾನ ಬಿಡುಗಡೆಗೊಳಿಸಿದರು. ಗ್ರಾಮಗಳಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ಯೋಜನೆಗಳನ್ನು ಜಾರಿಗೆ ತಂದರು. ಇನ್ನು ಮಹಿಳೆಯರು ಎದುರಿಸುವ ಕುಡಿಯುವ ನೀರಿನ ಕಷ್ಟ ನಿವಾರಿಸಲು ಮನೆಮನೆಗೆ ಗಂಗೆ ಯೋಜನೆ ತಂದರು. ವಿಶ್ವ ಭೂಪಟದಲ್ಲಿ ಭಾರತದ ಬಗ್ಗೆ ಇರುವ ಗೌರವ ಹೆಚ್ಚುವಂತೆ ಮೋದಿಜಿ ಮಾಡಿದರು. ಅದಕ್ಕೆ ತಾಜಾ ಉದಾಹರಣೆ ಲಸಿಕೆ. ಜಾಗತಿಕವಾಗಿ ಮುಂದು ವರಿದ ರಾಷ್ಟ್ರಗಳು ಮಾತ್ರ ವರ್ಷಾಂತ್ಯದೊಳಗೆ ಲಸಿಕೆಯನ್ನು ಉತ್ಪಾದಿಸಬಹುದು ಎನ್ನುವ ನಿರೀಕ್ಷೆ ಮೀರಿಸಿ ನಾವು ಕೂಡ ಉತ್ಪಾದಿಸಬಲ್ಲವು ಮಾತ್ರವಲ್ಲ, ಬೇರೆ ರಾಷ್ಟ್ರಗಳಿಗೆ ರಫ್ತು ಮಾಡಲು ಶಕ್ತವಾಗಿದ್ದೇವೆ ಎಂದು ತೋರಿಸಿಕೊಟ್ಟಿದ್ದೇ ಮೋದಿ.
ಇನ್ನು ಮೋದಿಜಿಯವರು ನಮ್ಮ ವಿರೋಧಿ ರಾಷ್ಟ್ರಗಳಿಗೂ ಇದು 2014ರ ಹಿಂದಿನ ಭಾರತ ಅಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದರು. ಇದರ ಪರಿಣಾಮವೇ ಭಾರತ-ಚೀನ ಗಡಿಯಲ್ಲಿ ಭಾರತ ಉತ್ತಮ ದರ್ಜೆಯ ರಸ್ತೆಗಳನ್ನು ನಿರ್ಮಿಸಿರುವುದು. ಚೀನದ ಗಡಿಯಲ್ಲಿ ಭಾರತದ ಯುದ್ಧ ವಿಮಾನಗಳು ಇಳಿಯಲು ಅನುಕೂಲವಾಗುವಂತೆ ಹೆದ್ದಾರಿಗಳ ನಿರ್ಮಾಣ ಆಗಿದೆ. ಅಷ್ಟೇ ಅಲ್ಲದೆ ಒಪ್ಪಂದಗಳು ಭಾರತದ ಪರವಾಗಿದ್ದರೆ ಮಾತ್ರ ಸಹಿ ಹಾಕುವಷ್ಟು ನಮ್ಮ ರಾಷ್ಟ್ರವನ್ನು ಪ್ರಬಲವನ್ನಾಗಿ ಮಾಡಿರುವುದು ಮೋದಿಜಿ. ಹಿಂದಿನ ಸರಕಾರಗಳು ವಿಶ್ವದ ಹಿರಿಯಣ್ಣ ಅಮೆರಿಕ ಸಹಿತ ಪ್ರಬಲ ದೇಶಗಳು ತೋರಿಸಿದ ಕಡೆ ಸಹಿ ಹಾಕುತ್ತಿದ್ದವು. ಆದರೆ ಮೋದಿ ಜಾಗತಿಕವಾಗಿ ಆಗುವ ಯಾವುದೇ ನಿರ್ಧಾರಗಳು ಭಾರತದ ನಾಗರಿಕರ ಏಳಿಗೆ, ದೇಶದ ಹಿತಾಸಕ್ತಿ ಮತ್ತು ನಮ್ಮ ಗೌರವಕ್ಕೆ ತಕ್ಕುದಾಗಿದ್ದರೆ ಮಾತ್ರ ಒಪ್ಪುತ್ತಾರೆ.
ಇನ್ನೊಂದು ಮಹತ್ತರ ಬದಲಾವಣೆ ಎಂದರೆ ಮಹಿಳೆಯರನ್ನು ಸಮಾಜದ ಸಾಮಾಜಿಕ ಸಂಕೋಲೆಗಳಿಂದ ಬಿಡಿಸಿ ಅವರಿಗೂ ಮುಕ್ತವಾಗಿ ತಮ್ಮ ಆಯ್ಕೆಯ ಅವಕಾಶವನ್ನು ನೀಡುತ್ತಿದ್ದಾರೆ. ನ್ಯಾಶ ನಲ್ ಡಿಫೆನ್ಸ್ ಅಕಾಡೆಮಿ ಸಹಿತ ಭೂ ಸೇನೆ, ವಾಯುಸೇನೆ, ನೌಕಾ ಸೇನೆಯ ಪ್ರಮುಖ ಜವಾಬ್ದಾರಿ ನೀಡುವಲ್ಲಿ ಮಹಿಳೆಯರನ್ನು ಅವಗಣಿಸಲಾಗುತ್ತಿತ್ತು. ಈಗ ಹಾಗಿಲ್ಲ. ಇನ್ನು ತ್ರಿವಳಿ ತಲಾಖ್ ನಿಷೇಧದಿಂದ ಹಿಡಿದು ಮಹಿಳೆಯರಿಗೆ ಬರಬೇಕಾದ ಪಿತ್ರಾರ್ಜಿತ ಆಸ್ತಿಯ ತನಕ ವಿವಿಧ ಸುಧಾರಣೆ ತರುವಲ್ಲಿಯೂ ಮೋದಿಜಿ ಚಿಂತನೆ ಗಮನಾರ್ಹ. ಈ ಎಲ್ಲ ಅಭಿವೃದ್ಧಿ ಕಾರ್ಯಗಳ ನಡುವೆಯೂ ಮೋದಿಜಿ ಈ ದೇಶದ ಸನಾತನ ಸಂಸ್ಕೃತಿ, ಧಾರ್ಮಿಕ ನಂಬಿಕೆ ಮತ್ತು ಐತಿಹಾಸಿಕ ಪರಂಪರೆ ಮರೆತಿಲ್ಲ. ನಮ್ಮ ದೇಶದಿಂದ ಹಿಂದೆ ದಾಳಿಕೋರರು ಕಸಿದುಕೊಂಡು ಹೋಗಿದ್ದ ಅಮೂಲ್ಯ ಸ್ಮರಣಾರ್ಹ ವಸ್ತುಗಳನ್ನು ಭಾರತಕ್ಕೆ ಮರಳಿ ತಂದಿರುವುದರ ಜತೆಗೆ ರಾಮ ಹುಟ್ಟಿದ ಈ ನೆಲದಲ್ಲಿ ಭವ್ಯ ರಾಮಮಂದಿರದ ನಿರ್ಮಾಣಕ್ಕೂ ಅಡ್ಡಿಯಾಗಿದ್ದ ವಿಘ್ನಗಳನ್ನು ನಿವಾರಿಸಿ ರಾಮ ಮಂದಿರದ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ಕೂಡ ಮಾಡಿದ್ದಾರೆ.
ಇನ್ನು ಅನೇಕರಿಗೆ ಗೊತ್ತಿಲ್ಲದ ವಿಷಯ ಏನೆಂದರೆ ಮೋದಿ ಎಷ್ಟೇ ಬ್ಯುಸಿ ಇದ್ದರೂ ತಿಂಗಳಲ್ಲಿ ಒಂದು ಸಲ ವಿವಿಧ ರಾಜ್ಯಗಳ ಅಧಿಕಾರಿ ಗಳೊಂದಿಗೆ ಆಯಾ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಾರೆ. ಯಾವುದಾದರೂ ಅಭಿವೃದ್ಧಿ ಯೋಜನೆಗಳು ಪ್ರಗತಿ ಕಾಣದಿದ್ದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ಉತ್ತರ ಪಡೆಯುತ್ತಾರೆ. ಮೋದಿ ಕಳೆದ 20-30 ವರ್ಷಗಳಲ್ಲಿ ಏನೂ ಪ್ರಗತಿ ಕಾಣದೇ ಮೂಲೆಗುಂಪಾಗಿದ್ದ ಸುಮಾರು 250 ಬೃಹತ್ ಪ್ರಾಜೆಕ್ಟ್ಗಳ ಬಗ್ಗೆ ಕೂಲಂಕಷ ವರದಿ ತರಿಸಿ ಅಂದಾಜು 12 ಲಕ್ಷ ಕೋಟಿ ರೂ ಯೋಜನೆಯನ್ನು ದಡ ಮುಟ್ಟಿಸಿದ್ದಾರೆ.
ಜನಸಾಮಾನ್ಯರ ಪ್ರಧಾನಿ :
ಮೋದಿಯವರು ಜನಸಾಮಾನ್ಯರ ಕೈಗೆಟಕುವ ಪ್ರಧಾನಿ ಎಂದು ಹಲವು ಬಾರಿ ಸಾಬೀತಾಗಿದೆ. ತಮ್ಮ ಟ್ವಿಟರ್ ಅಕೌಂಟ್ ಮೂಲಕ ಜನರ ಅಹವಾಲುಗಳನ್ನು ಸ್ವೀಕರಿಸುವ ಮೋದಿಯವರು ಪ್ರತಿ ತಿಂಗಳು ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ಮೂಲಕ ಸಮಾಜದಲ್ಲಿ ಆಗುತ್ತಿರುವ ಸಕಾರಾತ್ಮಕ ಬದಲಾವಣೆಗಳನ್ನು ಉದಾಹರಿಸಿ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವ ರಾಷ್ಟ್ರದ ಮೂಲೆ ಮೂಲೆಗಳ ಜನಸಾಮಾನ್ಯರನ್ನು ಉಲ್ಲೇಖೀಸಿ ಸ್ಫೂರ್ತಿಯ ಮಾತುಗಳನ್ನು ಆಡುತ್ತಾರೆ. ನಿಯಮಿತವಾಗಿ ಟೌನ್‌ಹಾಲ್ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಉದ್ಯೋಗಿ ಗಳೊಡನೆ ಸಂವಾದ ನಡೆಸುವ ಮೋದಿಯವರು ಐಟಿ ದಿಗ್ಗಜರೊಡನೆ, ಎಂಜಿನಿಯರ್ಸ್, ವಿದ್ಯಾರ್ಥಿಗಳೊಡನೆ ಕೂಡ ಅಭಿಪ್ರಾಯ ಸಂಗ್ರಹಿಸಿಕೊಳ್ಳುತ್ತಾರೆ. ಕಳೆದ ಬಾರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಲ್ಲಿ ಭರವಸೆಯನ್ನು ಮೋದಿ ತುಂಬಿದ್ದರು. ಮೋದಿಜಿಯವರೇ ಬರೆದ ಎಕ್ಸಾಂ ವಾರಿಯರ್ಸ್ ಪುಸ್ತಕ ಉತ್ತಮ ಜನಾಭಿಪ್ರಾಯವನ್ನು ಪಡೆದಿತ್ತು.
ಬಡಜನರ ಬಗ್ಗೆ ಸದಾ ಚಿಂತನೆ :
ಮೋದಿಜಿಯವರು ರಾಜಕೀಯರಹಿತವಾಗಿ ದೇಶದ ಬಡಜನರ ಬಗ್ಗೆ ಯೋಚಿಸುತ್ತಾರೆ ಎನ್ನುವುದಕ್ಕೆ ಅವರು ಮೇಲ್ವರ್ಗದಲ್ಲಿ ಹುಟ್ಟಿದ ಬಡವರಿಗಾಗಿ ಶಿಕ್ಷಣ ಹಾಗೂ ಉದ್ಯೋಗಾವಕಾಶದಲ್ಲಿ ಮೀಸಲಾತಿಯನ್ನು ಕೊಟ್ಟಿರುವುದೇ ಸಾಕ್ಷಿ. ಇನ್ನು ನೇರ ಸೌಲಭ್ಯ ವಿತರಣೆಯ ಮೂಲಕ ಮಧ್ಯವರ್ತಿಗಳಿಗೆ ಸೋರಿಕೆಯಾಗುತ್ತಿದ್ದ ಹಣವನ್ನು ಮೋದಿ ಉಳಿಸಿದ್ದಾರೆ. ಇಲ್ಲಿಯವರೆಗೆ 6.32 ಲಕ್ಷ ಕೋಟಿ ರೂಪಾಯಿ ವಿವಿಧ ಯೋಜನೆಗಳ ಸಬ್ಸಿಡಿ ಹಣ ಫಲಾನುಭವಿಗಳಿಗೆ ವರ್ಗಾವಣೆಯಾಗಿದೆ. ಇದರಲ್ಲಿ ಹತ್ತು ಶೇಕಡಾ ಮಧ್ಯವರ್ತಿಗಳಿಗೆ ಸೋರಿಕೆಯಾಗಿದ್ದರೂ ಆ ಮೊತ್ತ 63,200 ಕೋಟಿ ರೂಪಾಯಿ ಆಗುತ್ತಿತ್ತು. ಈಗ ನೇರ ಬ್ಯಾಂಕ್‌ಗೆ ವರ್ಗಾವಣೆ ಯಾಗುತ್ತಿರುವುದರಿಂದ ಎಂಟು ಕೋಟಿ ನಕಲಿ ಫಲಾನುಭವಿಗಳಿಗೆ ಹೋಗುತ್ತಿದ್ದ 1.10 ಲಕ್ಷ ಕೋಟಿ ರೂಪಾಯಿ ಹಣ ಉಳಿತಾಯವಾಗಿದೆ. -ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ