Advertisement

ನಲಿ-ಕಲಿ: ಪುದು-ಮಾಪ್ಲ  ಸ.ಪ್ರಾ. ಶಾಲೆ ಉತ್ತಮ ಸಾಧನೆ

12:28 PM Apr 04, 2018 | |

ಪುಂಜಾಲಕಟ್ಟೆ : ಖಾಸಗಿ ಶಾಲೆಗಳ ಪೈಪೋಟಿ, ಸರಕಾರಿ ಶಾಲೆಗಳ ಬಗ್ಗೆ ಪಾಲಕರ ನಿರಾಸಕ್ತಿ, ಇವೆರಡರ ನಡುವೆಯೂ ಬಂಟ್ವಾಳ ತಾಲೂಕಿನ ಸರಕಾರಿ ಶಾಲೆಯೊಂದು ಗುಣಾತ್ಮಕ ಶಿಕ್ಷಣದ ಮೂಲಕ ಖಾಸಗಿ ಶಾಲೆಗೂ ಕಡಿಮೆಯಿಲ್ಲ ಎಂಬಂತೆ ಬೆಳೆದು ನಿಂತಿದಿದ್ದು, ಇತರ ಸರಕಾರಿ ಶಾಲೆಗಳಿಗೂ ಮಾದರಿಯಾಗಿದೆ.

Advertisement

ಗುಣಮಟ್ಟದ-ಪರಿಣಾಮಕಾರಿ ಬೋಧ ನೆಗೆ ವಿಭಿನ್ನ ಪರಿಕಲ್ಪನೆಗಳು, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರದ ಜತೆ ಸಾರ್ವಜನಿಕರ ಹಾಗೂ ಸ್ಥಳೀಯ ಸಮಾಜ ಸೇವಾ ಸಂಸ್ಥೆಯ ಸಹಭಾಗಿತ್ವ ಹೊದಿದ್ದು, ಒಟ್ಟಿನಲ್ಲಿ ಒಂದು ಖಾಸಗಿ ಶಾಲೆಗಿಂತ ಮೇಲ್ಮಟ್ಟದಲ್ಲಿದೆ. ಬಂಟ್ವಾಳ ತಾ| ನಲ್ಲಿ ವಿಶೇಷ ವಾಗಿ ಗುರುತಿಸಿಕೊಂಡಿರುವ ದ.ಕ. ಜಿ.ಪಂ. ಹಿ.ಪ್ರಾ. ಪುದು- ಮಾಪ್ಲ ಸರಕಾರಿ ಪ್ರಾಥಮಿಕ ಶಾಲೆ ಜಿಲ್ಲೆಯಲ್ಲಿಯೂ ಗಮನ ಸಳೆದಿದ್ದು, ನಲಿ-ಕಲಿಯಲ್ಲಿ ಈ ಶಾಲೆ ಉತ್ತಮ ಸಾಧನೆ ಮಾಡಿದೆ.

1902ರಲ್ಲಿ ಪ್ರಾರಂಭವಾದ ಈ ಶಾಲೆಗೆ 116 ವರ್ಷ ಕಳೆದಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಈ ಶಾಲೆಯ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದ್ದು, ಈ ವಿಚಾರವನ್ನು ಮನಗಂಡ ಶಾಲೆಯ ಹಳೆ ವಿದ್ಯಾರ್ಥಿಗಳ ತಂಡ ಹಾಗೂ ಇಲ್ಲಿನ ಸಾಮಾಜಿಕ ಸಂಸ್ಥೆಯಾದ ಫರಂಗಿಪೇಟೆಯ ಟುಡೇ ಫೌಂಡೇಶನ್‌ ಶಾಲೆಯ ಎಲ್ಲ ವ್ಯವಸ್ಥೆಗಳಿಗೆ ಬೆನ್ನೆಲುಬಾಗಿ ನಿಂತಿದೆ. 

ಇಲ್ಲಿನ ವಿದ್ಯಾರ್ಥಿಗಳು ಪಾಠ ಹಾಗೂ ಆಟಗಳಲ್ಲೂ ಮುಂದು. ಕಳೆದ ಕೆಲವು ತಿಂಗಳಿನಲ್ಲಿ ನಡೆದ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯ 27 ಸ್ಪರ್ಧೆಯಲ್ಲಿ 17 ಪ್ರಶಸ್ತಿಯನ್ನು ತರುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದು, ತಾಲೂಕಿಗೆ ಹೆಮ್ಮೆಯ ವಿಚಾರ. ಸರಕಾರಿ ಶಾಲೆ ಹಾಗೂ ಇಲ್ಲಿನ ಮಕ್ಕಳನ್ನು ಪ್ರೋತ್ಸಾಹಿಸುವ ಎಂದು ಹೇಳುತ್ತಾರೆ ಟುಡೇ ಫೌಂಡೇಶನ್‌ನ ಅಧ್ಯಕ್ಷ ಉಮರ್‌ ಫಾರೂಕ್‌ ಅವರು.

ಮಕ್ಕಳೇ ತಯಾರಿಸಿದ ಚಿತ್ರ, ಬರಹಗಳಿಂದ ಕೂಡಿದ ಪ್ರತಿ ತರಗತಿಯಲ್ಲಿಯೂ ಮಕ್ಕಳ ಸೃಜನಶೀಲತೆಯ ಅನಾವರಣ ಕಲಿಕಾ ಮನೆ, ಮಕ್ಕಳಿಗೆ ತಕ್ಷಣ ಸಿಗುವಂತೆ ಬೋಧನೋಪಕರಣಗಳನ್ನು ತರಗತಿಯ ಲ್ಲಿಯೇ ಜೋಡಿಸಿಡಲಾಗಿದೆ. ಪಠ್ಯೇತರ ಚಟುವಟಿಕೆಗೂ ಪೂರಕವಾದ ಸಾಮಗ್ರಿಗಳಿಗೆ ಮೀಸಲಿರಿಸಲಾಗಿದೆ. ಪ್ರತೀ ತರಗತಿಗೂ ಡಿಸ್ಪ್ಲೇ ಬೋರ್ಡ್‌ ಅಳವಡಿಸಲಾಗಿದೆ.

Advertisement

ಟುಡೇ ಸಹಭಾಗಿತ
ಇಲ್ಲಿನ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ವಿದ್ಯಾಭಿಮಾನಿಗಳ ಸಹಕಾರ ಪಡೆದುಕೊಂಡಿದ್ದು, ಇದಕ್ಕಾಗಿ ಇಲ್ಲಿನ ಟುಡೇ ಫೌಂಡೇಶನ್‌ ಸಂಸ್ಥೆ ಒಂದು ಹೆಜ್ಜೆ ಮುಂದಿಟ್ಟಿದೆ. ಶಾಲೆಗೆ ಪೀಠೊಪಕರಣಗಳು, ಸಮವಸ್ತ್ರ ಹೀಗೆ ಗುಣಮಟ್ಟದ ಬೋಧನೆಯಿಂದ ಶಾಲೆ ಗ್ರಾಮದ ಅಮೂಲ್ಯ ಆಸ್ತಿಯಾಗಿ ಬೆಳೆಯುತ್ತಿದೆ. ಚಟುವಟಿಕೆ ಆಧಾರಿತ ಬೋಧನ ಕ್ರಮ, ಮಗುವಿಗೆ ಅತ್ಯಂತ ಸ್ನೇಹಿಯಾಗಿರುವ ಶಿಕ್ಷಕರು ಇಲ್ಲಿ ಗಮನ ಸೆಳೆಯುತ್ತಾರೆ.

ಟುಡೇ ಫೌಂಡೇಶನ್‌ ಸಂಸ್ಥೆಯ ಸಹಭಾಗಿತ್ವ, ಶಿಕ್ಷಕರ ದೂರಗಾಮಿ ಚಿಂತನೆಗಳು, ವಿದ್ಯಾರ್ಥಿಗಳ ಸಕರಾತ್ಮಕ ಸ್ಪಂದನೆ ಈ ಬೆಳವಣಿಗೆಗಳಿಗೆ ಕಾರಣವಾಗಿದೆ. ಮಕ್ಕಳ ಕೊರತೆಯ ಕೂಗು ಕೇಳಿ ಬರುತ್ತಿರುವ ಸರಕಾರಿ ಶಾಲೆಗಳಿಗೆ ಇದೊಂದು ಆತ್ಮ ವಿಶ್ವಾಸದ ಹೊಸ ಪ್ರಯತ್ನವಾಗಿದೆ.

ಚಿಣ್ಣರ ಮನೆಗೆ ಒತ್ತು
ಶಾಲೆಯಲ್ಲಿ ಆರು ಶಿಕ್ಷಕರು ಬೋಧನೆ ಮಾಡುತ್ತಿದ್ದು, ಟುಡೇ ಸಂಸ್ಥೆಯಿಂದ ಹೆಚ್ಚುವರಿ ಶಿಕ್ಷಕರನ್ನು ನೇಮಿಸಲಾಗಿದೆ. ಅಲ್ಲದೆ, ತಿಂಗಳಿಗೆ 18 ಸಾವಿರ ರೂ. ಧನಸಹಾಯ ಮಾಡುತ್ತಿದೆ. ಈ ಶಾಲೆಯಲ್ಲಿ ಚಿಣ್ಣರ ಮನೆಗೆ ವಿಶೇಷ ಒತ್ತು ನೀಡಲಾಗಿದ್ದು, 68 ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಅಲ್ಲದೆ ಪ್ರಸ್ತುತ ಅವಧಿಗೆ ಸುಮಾರು 20 ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ.
ಶಕುಂತಳಾ ಎಸ್‌. ಉಳ್ಳಾಲ
  ಶಾಲಾ ಮುಖ್ಯೋಪಾಧ್ಯಾಯಿನಿ

Advertisement

Udayavani is now on Telegram. Click here to join our channel and stay updated with the latest news.

Next