Advertisement
40 ಹಳ್ಳಿಗಳ ಹೃದಯ ಭಾಗವೆಂದೇ ಕರೆಸಿಕೊಳ್ಳುವ ಪಟ್ಟಣದ ಬಸ್ ನಿಲ್ದಾಣ ಅವ್ಯವಸ್ಥೆ ಆಗರವಾಗಿದೆ. ನಿತ್ಯ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಬಸ್ ನಿಲ್ದಾಣ ನೀರಿನಲ್ಲಿಯೆ ನಡೆದು ಬಸ್‌ನಲ್ಲಿ ಪ್ರಯಾಣಿಸುವಂತಾಗಿದೆ.
Related Articles
Advertisement
ನಿಲ್ದಾಣ ತೆಗ್ಗು ದಿನ್ನಿ: ಮುಖ್ಯ ರಸ್ತೆಗಿಂತ ನಿಲ್ದಾಣ ತೆಗ್ಗಿನಲ್ಲಿದ್ದ ಕಾರಣ ನೀರೆಲ್ಲ ನಿಲ್ದಾಣದಲ್ಲೆ ಸಂಗ್ರಹವಾಗುತ್ತಿದೆ. ನಿಲ್ದಾಣ ಬಸ್ ಓಡಾಟದಿಂದ ತೆಗ್ಗು ಬಿದ್ದು ನಿಲ್ದಾಣ ಜಲಾವೃತವಾಗಿ ಮಾರ್ಪಟ್ಟಿದೆ. ಪ್ರಯಾಣಿಕರು ಸಾಕಷ್ಟು ಬಾರಿ ನೀರಿನಲ್ಲಿ ಜಾರಿ ಬಿದ್ದು ಪ್ರಯಾಣಿಸಿದ್ದಾರೆ.
ಇನ್ನು ಆರಂಭವಾಗದೆ ಹೈಟೆಕ್ ನಿಲ್ದಾಣ: ಕಳೆದ 2 ವರ್ಷಗಳ ಹಿಂದೆಯೇ ಹೊಸ ಬಸ್ ನಿಲ್ದಾಣ ಮಂಜೂಾಗಿದೆ. ಅದನ್ನು ಟೆಂಡರ್ ಸಹ ಕರೆಯಲಾಗಿದೆ. ಆದರೆ, ಕಾಮಗಾರಿ ಮಾತ್ರ ಇನ್ನು ಆರಂಭವಾಗುತಿಲ್ಲ. ಹೊಸ ನಿಲ್ದಾಣ ನಿರ್ಮಿಸಲು ಮರಳು ಸಂಗ್ರಹಿಸಿದ್ದರೂ ಕಾಮಗಾರಿ ಆರಂಭಿಸಿಲ್ಲ.
ವಿಪರೀತ ಸೊಳ್ಳೆ ಕಾಟ: ನಿಲ್ದಾಣದಲ್ಲಿ ನೀರು ನಿಂತ ಪರಿಣಾಮ ಸಂಜೆಯಾದರೆ ವಿಪರೀತ ಸೊಳ್ಳೆಯ ಕಾಟ. ಸೊಳ್ಳೆಗಳ ಕಡಿತದಿಂದ ಪ್ರಯಾಣಿಕರು ರೋಗಗಳಿಂದ ಬಳಲುವಂತಾಗಿದೆ.
ಗಬ್ಬೆದ್ದ ಮೂತ್ರಾಲಯ: ಕಳೆದ ಸುಮಾರು ವರ್ಷಗಳಿಂದ ಸ್ವತ್ಛತೆ ಕಾಣದೆ ನಿಲ್ದಾಣದ ಮೂತ್ರಾಲಯ ಗಬ್ಬೆದ್ದು ನಾರುತ್ತಿದೆ. ಪ್ರಯಾಣಿಕರು ಮೂತ್ರಾಲಯಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವ ಅನಿವಾರ್ಯತೆ ಎದುರಾಗಿದೆ.