ನಾಲತವಾಡ: ಸ್ಥಳಿಯ ಶ್ರೀ ವೀರೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ಮಹಾ ಶಿವಶರಣ ವೀರೇಶ್ವರರ ಭಾವಚಿತ್ರವನ್ನು ಉಬ್ಬು ಕೆತ್ತನೆಯ ಮೂಲಕ ವಿಶಿಷ್ಟವಾಗಿ ರಚನೆ ಮಾಡಲಾಗಿದೆ. ವಿಶಿಷ್ಟ ರೀತಿಯ ಕಲಾಕೃತಿಗೆ ಬ್ಯಾಂಕಿಗೆ ಬಂದ ಎಲ್ಲ ಗ್ರಾಹಕರು ಈ ಮಾರು ಹೋಗುತಿದ್ದಾರೆ.
ವೀರೇಶ್ವರ ಶರಣರ ಭಾವಿಚಿತ್ರವನ್ನು ವಿಶಿಷ್ಟವಾಗಿ ನಿರ್ಮಾಣ ಮಾಡಲು ಆಡಳಿತ ಮಂಡಳಿ ನಿರ್ಧಾರ ಮಾಡಿದಾಗ ಯಾವ ರೀತಿ ಮಾಡಬೇಕು ಎಂದು ಹಲವಾರು ಕಡೆ ವಿಚಾರಣೆ ಮಾಡಿದೆ ನಂತರ ಉಬ್ಬು ಕೆತ್ತನೆಯಲ್ಲಿ ನಿರ್ಮಾಣ ಮಾಡಿದರೆ ಅದ್ಬುತ್‌ವಾಗಿ ಮೂಡಿಬರುತ್ತೇ ಎಂದು ತಿಳಿದಾಗ ಡಾವಣಗೇರೆ ಜಿಲ್ಲೆಯ ನಿವಾಸಿ ಸಿ.ಎನ್.ಗಂಗಾ ಎಂಬ ಕಲಾವಿದನನ್ನು ಸಂಪರ್ಕಿಸಿ ಅವರಿಂದ ಚಿತ್ರ ರಚನೆ ಮಾಡಿಸಿದೆವು ಅವರ ಕಲಾಕೃತಿಯಲ್ಲಿ ಈ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಇನ್ನು ಈ ಕಲಾವಿದ ಪ್ಯಾರಿಸ್ ದೇಶದಲ್ಲಿ ಸಹ ತನ್ನ ಕಲೆಯಿಂದ ಚಿತ್ರವನ್ನು ಕೆತ್ತನೆ ಮಾಡಿದ್ದಾನೆ ಎಂಬ ವಿಷಯ ಗಮನಾರ್ಥವಾಗಿದೆ. ಕೆತ್ತನೆ ಮಾಡಿದ ವೀರೇಶ್ವರ ಶರಣರ ಚಿತ್ರವನ್ನು ಮಹಾರಾಷ್ಟ್ರದ ವಿಟ್ಠಲ ಚವ್ಹಾಣ ಅವರು ಬಣ್ಣವನ್ನು ಹಚ್ಚಿದ್ದಾರೆ. ಈ ಅದ್ಬುತ ಕಲಾಕೃತಿ ಮೂಡಿಬರಲು ಒಟ್ಟು 50 ಸಾವಿರ ರೂಪಾಯಿ ವೆಚ್ಚವಾಗಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಾಗರಾಜ ಗಂಗನಗೌಡರ ತಿಳಿಸಿದ್ದಾರೆ.
ಮಾಹಾ ಶಿವಶರಣ ಶ್ರೀ ವೀರೇಶ್ವರ ಶರಣರ ಭಾವಚಿತ್ರವನ್ನು ಅದ್ಬುತ್‌ವಾಗಿ ಕಲಾವಿದ ರಚನೆ ಮಾಡಿದ್ದಾರೆ. ಬ್ಯಾಂಕಿಗೆ ಬಂದ ಎಲ್ಲ ಗ್ರಾಹಕರು ಈ ಚಿತ್ರವನ್ನು ಕಂಡು ಬಹಳ ಮೆಚ್ಚುಗೆ ವ್ಯಕ್ತ ಪಡಿಸುತಿದ್ದಾರೆ ಚಿತ್ರವನ್ನು ನೋಡಿದರೆ ಅಲ್ಲೆ ನೋಡುತ್ತ ನಿಲ್ಲುವ ಹಾಗೆ ಮನಸ್ಸು ಬರುತ್ತೆ ಅಷ್ಟು ಅದ್ಭುತವಾಗಿ ಮೂಡಿಬಂದಿದೆ ಎಂದು ವೀರೇಶ್ವರ ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಮ್.ಎಸ್.ಪಾಟೀಲ ತಿಳಿಸಿದರು.
ನಾಲತವಾಡ ಪಟ್ಟಣದಲ್ಲಿ ಶ್ರೀ ವೀರೇಶ್ವರ ಶರಣರ ಮಠ ಇದೇ ಆ ಮಠದ ಹೆಸರಿನಲ್ಲಿ ಇ ಬ್ಯಾಂಕನ್ನು ತೆಗೆದು ಬಹಳ ದೂಡ ಪ್ರಮಾಣದಲ್ಲಿ ಬೆಳೆಸಿದ್ದಾರೆ. ಅದ್ದಕೆ ಬ್ಯಾಂಕಿನ ಒಳಗೆ ಇ ವೀರೇಶ್ವರ ಭಾವಚಿತ್ರವನ್ನು ಕೆತ್ತನೆ ಮಾಡಿಸಿದ್ದಾರೆ ಬ್ಯಾಂಕಿನ ಒಳಗೆ ಬಂತ ತಕ್ಷಣವೇ ಕಾಣುವುದು ಶ್ರೀ ಶರಣರ ಭಾವಚಿತ್ರ . ಬಂದ ಗ್ರಾಹಕರು ಹಾಗೂ ಸಿಬ್ಬಂದಿ ಅವರು ಬ್ಯಾಂಕಿನ ಅಧ್ಯಕ್ಷರು ಸದಸ್ಯರು ಕೈಮುಗಿದು ನಂತರ ಅವರ ಅವರ ಕೆಲಸವನ್ನು ಮಾಡುತ್ತಾರೆ.
ಕಾಶಿನಾಥ ಬಿರಾದಾರ