Advertisement
ಪಟ್ಟಣದ ವಿವಿಧ ವಾರ್ಡುಗಳಲ್ಲಿ ನಡೆದ ಮನೆ ಮನೆಗೆ ಕುಮಾರಣ್ಣ, ಹಳ್ಳಿ ಹಳ್ಳಿಗೆ ನಡಹಳ್ಳಿ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ತಾಲೂಕಿನಲ್ಲೇ ಪಟ್ಟಣದಲ್ಲಿ ಅತಿ ಬಡತನದ ಬೇಗೆಯಿಂದಬಳಲುತ್ತಿದ್ದಾರೆ ಎಂದು ನಾನು ಕನಸಿನಲ್ಲೇ ಊಹಿಸಿರಲಿಲ್ಲ. ಅಂತಹ ದುಸ್ಥಿತಿ ಪಟ್ಟಣದಲ್ಲಿದೆ. ಇಂತಹ ಗಂಭೀರ ಸಮಸ್ಯೆಗಳತ್ತ ಸ್ಥಳೀಯ ಶಾಸಕರು ಗಮನ ಹರಿಸದಿರುವುದು ದುರಂತ ಎಂದರು.
ಸರಕಾರ ಒದಗಿಸುತ್ತದೆ. ಆದರೆ ಅವುಗಳನ್ನು ಒದಗಿಸುವ ಮನೋಭಾವನೆ ಶಾಸಕರಲ್ಲಿ ಇರಬೇಕು. ಪಟ್ಟಣದಲ್ಲಿ 4,500 ಮನೆಗಳಲ್ಲಿ ಅರ್ಧದಷ್ಟು ನಿರ್ಗತಿಕರು ಇದ್ದಾರೆ. ಪಟ್ಟಣದಲ್ಲೇ ನಾಡ ಕಾರ್ಯಾಲಯವಿದೆ ಇದುವರೆಗೂ ಕೆಲವರಿಗೆ ವೃದ್ದಾಪ್ಯ ವೇತನ ಸಿಗುತ್ತಿಲ್ಲ. ಸಮಸ್ಯೆಗಳು ಪಟ್ಟಣದಲ್ಲಿ ತಾಂಡವವಾಡುತ್ತಿವೆ. 25 ವರ್ಷದ ರಾಜಕಾರಣದಲ್ಲಿ ಪ್ರತಿ ವರ್ಷವೂ ಕೇವಲ 100 ಆಸರೆ ಮನೆಗಳನ್ನು ಅರ್ಹರಿಗೆ ಕಲ್ಪಿಸಿದ್ದರೆ ಒಟ್ಟು 2,500 ಮನೆ ಒದಗಿಸಬಹುದಿತ್ತು. ಇವೆಲ್ಲ ಶಾಸಕರು ತಮ್ಮ ಮನೆಯಿಂದ
ಒದಗಿಸುತ್ತಾರೋ ಎಂದು ಪ್ರಶ್ನಿಸಿದರು. ಕಳೆದ 5 ದಿನದಿಂದ ಅಲೆದಾಡುತ್ತಿದ್ದೇನೆ. ಶೇ. 75ರಷ್ಟು ವೃದ್ಧರು ನಮಗೆ ಪಿಂಚಣಿ ಬರುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನಾನು 10 ವರ್ಷ ಶಾಸಕನಾಗಿದ್ದು ಈ ರೀತಿ ಆಡಳಿತ ಮಾಡಿಯೇ ಇಲ್ಲ ಎಂದು ಹೇಳಿದರು.
Related Articles
ದಿನಗಳಲ್ಲಿ ನಾನೇ ಈ ಭಾಗದ ಶಾಸಕನಾಗುತ್ತೇನೆ. ನಿಮ್ಮೆಲ್ಲ ಸಮಸ್ಯೆಗಳಿಗೆ ನಡಹಳ್ಳಿಯಿಂದ ಮಾತ್ರ ಪರಿಹಾರ ಎಂದು ಭರವಸೆ ನೀಡಿದ್ದೇನೆ ಎಂದರು.
Advertisement
ಶಾಸಕರಾಗಿ ಅಧಿಕಾರದಲ್ಲಿ ಪ್ರಾಮಾಣಿಕತೆ ಮೆರೆಯಬೇಕು. ನನಗೆ 25 ವರ್ಷ ಬೇಡ, 5 ವರ್ಷ ಅಧಿಕಾರ ನೀಡಿ. ಮೊದಲು ಪೊರಕೆ ಹಿಡಿದು ನಾಲತವಾಡ ಪಟ್ಟಣವನ್ನೇ ಸ್ವತ್ಛಗೊಳಿಸುವ ಪ್ರತಿಜ್ಞೆ ಮಾಡಿದ್ದೇನೆ. ಪಟ್ಟಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸರಕಾರಿ ಪ್ರೌಢ ಶಾಲೆಗಳಿಂದ ವಂಚಿತರಾಗಿದ್ದಾರೆ. ಕನಿಷ್ಠ ಒಂದು ಸರಕಾರಿ ಪ್ರೌಢಶಾಲೆ ಮಂಜೂರು ಮಾಡದಿರುವು ಅನುಮಾನ ಹುಟ್ಟಿಸಿದೆ ಎಂದರು.
ಪಟ್ಟಣದಲ್ಲಿ ನನಗೆ ಸಾರ್ವಜನೀಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತಪಡಿಸಿದ್ದಾರೆ. ಪಟ್ಟಣದಲ್ಲಿ ಶಾಸಕರಾದ ನಾಡಗೌಡ ಅವರು ದಿ| ದೇಶಮುಖ ಅಭಿಮಾನಿಗಳಿಗೆ ಮೂಲ ಸೌಕರ್ಯಗಳಿಂದ ವಂಚಿತಗೊಳಿದ್ದಾರೆ ಎಂಬ ಬಲವಾದ ಆರೋಪಗಳಿವೆ. ರಾಜಕಾರಣ ಬದಿಗೊತ್ತಿ ಭೇದ ಭಾವ ಮರೆತು ಬಡವರ ಪರ ಚಿಂತನೆ ಮಾಡಬೇಕು ಎಂದರು.
ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿ ಜಿ. ಮಹಾಂತೇಶಗೌಡ, ಪಪಂ ಸದಸ್ಯ ಭೀಮಣ್ಣ ಗುರಿಕಾರ, ವೀರೇಶ ರಕ್ಕಸಗಿ, ರಫಿಕ್ ಕೊಡಗಲಿ, ಸೈಯದ್ ಖಾಜಿ, ಸೋಮನಗೌಡ ಕವಡಿಮಟ್ಟಿ, ಜಗದೀಶ ಕೆಂಭಾವಿ, ಸಂಗಪ್ಪಬೋವಿ, ಬಾಬುಗೌಡ ಹಂಪನಗೌಡ, ಸಿದ್ದಲಿಂಗಯ್ಯ ಕಪ್ಪರಮಠ, ಬಸನಗೌಡ ಪಾಟೀಲ (ನಡಹಳ್ಳಿ) ಹಾಗೂ
ಸಂಗಮೇಶ ಮೇಟಿ ಇದ್ದರು.