Advertisement
ಸಭೆಯನ್ನು ಬಂಟರ ಸಂಘದ ವಸಾಯಿ -ಡಹಾಣು ಪ್ರಾದೇಶಿಕ ಸಮಿತಿಯ ಕಾರಾಧ್ಯಕ್ಷ ಜಯಂತ್ ಆರ್. ಪಕ್ಕಳ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ತುಳು ಒಕ್ಕೂಟ ಸ್ಥಾಪನೆಯ ಮೂಲ ಉದ್ದೇಶವೇನೆಂದರೆ ಈ ಪರಿಸರದ ಸರ್ವ ಸಮಾಜದ ತುಳು ಬಾಂಧವರನ್ನು ಒಗ್ಗೂಡಿಸುವುದರೊಂದಿಗೆ ಅವರ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ಮಾಡಲಿದೆ. ಈ ಸಂಸ್ಥೆಯಲ್ಲಿ ಎಲ್ಲ ಜಾತಿ ಬಾಂಧವರು ಒಮ್ಮತದಿಂದ ಸೇವೆ ಸಲ್ಲಿಸಬೇಕು ಎಂದರು.
ಬಿಲ್ಲವರ ಅಸೋಸಿಯೇಶನ ವಿರಾರ್- ನಲಸೋಪರ ಸಮಿತಿಯ ಮಾಜಿ
Related Articles
Advertisement
ನೂತನ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ವಿ. ಶೆಟ್ಟಿ ಕಾಪು ಮಾತನಾಡಿ, ನಮ್ಮ ನಾಡಿನಲ್ಲಿ ಅನೇಕ ಪುಣ್ಯಯ ಕ್ಷೇತ್ರಗಳಿವೆ. ಭಾಷೆ ಮತ್ತು ಸಂಸ್ಕೃತಿಯಲ್ಲಿ ಇತಿಹಾಸ ಪರಂಪರೆಯಿದೆ. ಅದನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ಯುವ ತುಳು ಬಾಂಧವರಿಗೆ ಅರಿವು ಮೂಡಿಸುವಂತಹ ಕಾರ್ಯಕ್ಕೆ ತುಳುವರ ಸಂಘಟನೆಯೊಂದರ ಅಗತ್ಯವಿದೆ. ಬೇರೆ ಬೇರೆ ಸಂಘಟನೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನನಗೆ ನೀಡಿದ ಜವಾಬ್ದಾರಿಯನ್ನು ನಿಮ್ಮೆಲ್ಲರ ಮಾರ್ಗದರ್ಶನದಲ್ಲಿ ಮುನ್ನಡೆಸುತ್ತೇನೆ ಎಂದು ನುಡಿದರು.
ವೇದಿಕೆಯಲ್ಲಿ ಕುಲಾಲ ಸಂಘದ ಮೀರಾ – ವಿರಾರ್ ಸಮಿತಿಯ ಕಾರ್ಯದರ್ಶಿ ಮೋಹನ ಬಂಜನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರವೀಣ್ ಶೆಟ್ಟಿ ಕಣಂಜಾರು ನಿರೂಪಿಸಿ ವಂದಿಸಿದರು.