Advertisement

ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್‌’ ದ್ವಿತೀಯ

03:34 AM Jan 12, 2025 | Team Udayavani |

ಉಡುಪಿ: ತುಳುಕೂಟ ಉಡುಪಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಭಾಗಿತ್ವದಲ್ಲಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಿದ್ದ 23ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆಯಲ್ಲಿ ಸುಮನಸಾ ಕೊಡವೂರು ತಂಡ ಪ್ರದರ್ಶಿಸಿದ “ಈದಿ’ ನಾಟಕ ಪ್ರಥಮ ಸ್ಥಾನ ಪಡೆದುಕೊಂಡಿದೆ.

Advertisement

ಪಟ್ಲದ ಭೂಮಿಗೀತ ಸಾಂಸ್ಕೃತಿಕ ವೇದಿಕೆಯ “ದಿ ಫೈಯರ್‌’ ದ್ವಿತೀಯ, ಮುಂಬಯಿಯ ರಂಗಮಿಲನದ “ಸೋಕ್ರಟಿಸ್‌ ತೃತೀಯ ಸ್ಥಾನ ಗೆದ್ದುಕೊಂಡಿದೆ.
ವಿದ್ದು ಉಚ್ಚಿಲ ಶ್ರೇಷ್ಠ ನಿರ್ದೇಶಕ ಪ್ರಥಮ, ಸಂತೋಷ್‌ ನಾಯಕ್‌ ಪಟ್ಲ ದ್ವಿತೀಯ ಹಾಗೂ ಮನೋಹರ ಶೆಟ್ಟಿ ನಂದಳಿಕೆ ತೃತೀಯ ಬಹುಮಾನ ಪಡೆದಿದ್ದಾರೆ.

ಶ್ರೇಷ್ಠ ರಂಗ ಪರಿಕರ/ಪ್ರಸಾಧನ: ಪ್ರಥಮ ಸುಮನಸಾ ಕೊಡವೂರು ಉಡುಪಿ, ದ್ವಿತೀಯ: ರಂಗಮಿಲನ ಮುಂಬಯಿ, ತೃತೀಯ: ಕರಾವಳಿ ಕಲಾವಿದರು ಮಲ್ಪೆ.

ಶ್ರೇಷ್ಠ ಬೆಳಕು: ಪ್ರಥಮ: ಪ್ರಥ್ವಿನ್‌ ಕೆ. ವಾಸು, ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯ “ದಿ ಫೈಯರ್‌’, ದ್ವಿತೀಯ: ಪ್ರವೀಣ್‌ ಜಿ. ಕೊಡವೂರು, ನಿಖಿಲ್‌

ಮೈಂದನ್‌, ನಾಟಕ: ಈದಿ, ತಂಡ: ಸುಮನಸಾ ಕೊಡವೂರು, ತೃತೀಯ: ಪ್ರವೀಣ್‌ ಜಿ. ಕೊಡವೂರು, ನಾಟಕ: ಸೋಕ್ರಟಿಸ್‌, ತಂಡ: ರಂಗಮಿಲನ ಮುಂಬಯಿ.

Advertisement

ಶ್ರೇಷ್ಠ ಸಂಗೀತ: ಪ್ರಥಮ ಶೋಧನ್‌ ಎರ್ಮಾಳ್‌, ನಾಟಕ: ಈದಿ, ತಂಡ: ಸುಮನಸಾ ಕೊಡವೂರು,

ದ್ವಿತೀಯ: ಅನಿಲ್‌ ಕುಮಾರ್‌ ಉದ್ಯಾವರ, ನಾಟಕ: ದಿ ಫೈಯರ್‌, ತಂಡ: ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ, ತೃತೀಯ: ದಿವಾಕರ್‌ ಕಟೀಲು, ನಾಟಕ: ಸೋಕ್ರಟಿಸ್‌, ತಂಡ: ರಂಗ ಮಿಲನ, ಮುಂಬಯಿ.

ಶ್ರೇಷ್ಠ ನಟ: ಪ್ರಥಮ ಸುರೇಂದ್ರ ಕುಮಾರ್‌ ಮಾರ್ನಾಡ್‌, ನಾಟಕ: ಸೋಕ್ರಟಿಸ್‌, ತಂಡ: ರಂಗಮಿಲನ ಮುಂಬಯಿ, ದ್ವಿತೀಯ: ನಾರಾಯಣ ಪಾತ್ರಧಾರಿ ರಾಜೇಶ್‌ ಭಟ್‌ ಪಣಿಯಾಡಿ, ನಾಟಕ: ತುದೆ ದಾಂಟಿ ಬೊಕ್ಕ, ತಂಡ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ತೃತೀಯ: ಮಹಮ್ಮದ್‌ ಪಾತ್ರಧಾರಿ ನಾಗೇಶ್‌ ಪ್ರಸಾದ್‌, ನಾಟಕ: ಈದಿ, ತಂಡ: ಸುಮನಸಾ ಕೊಡವೂರು.

ಶ್ರೇಷ್ಠ ನಟಿ: ಪ್ರಥಮ ರೋಶ್ನಿ ಪಾತ್ರಧಾರಿಣಿ ಧೃತಿ ಸಂತೋಷ್‌, ನಾಟಕ: ಈದಿ, ತಂಡ: ಸುಮನಸಾ ಕೊಡವೂರು, ದ್ವಿತೀಯ: ಸೋಕ್ರಟಿಸ್‌ ನಾಟಕದ ಸಾಂತಿಪೆ ಪಾತ್ರಧಾರಿ ದೀಪಾ ದೇವಾಡಿಗ ತಂಡ: ರಂಗಮಿಲನ, ಮುಂಬಯಿ, ತೃತೀಯ: ತುದೆ ದಾಂಟಿ ಬೊಕ್ಕ ನಾಟಕದ ಪದ್ಮಾವತಿ ಪಾತ್ರಧಾರಿ ಶಿಲ್ಪಾ ಜೋಷಿ ತಂಡ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ.

ತೀರ್ಪುಗಾರರ ಮೆಚ್ಚುಗೆ ಪಡೆದವರು
ನಟರು: 1. ಪೆರ್ಗ ನಾಟಕದ ದ್ಯಾವಪ್ಪೆ ಪಾತ್ರಧಾರಿ ನೂತನ್‌ ಕುಮಾರ್‌ ಕೊಡಂಕೂರು, 2. ದಿ ಫೈಯರ್‌ ನಾಟಕದ ವ್ಯಕ್ತಿ 5, ಕೊಲಂಬಸ್‌, ಪೆಡ್ರೋ ಪಾತ್ರಧಾರಿ ದೀಪಕ್‌ ಜೈನ್‌, 3. ಈದಿ ನಾಟಕದ ಪಂಡಿತ್‌ ನಾರಾಯಣ್‌ ಹಕ್ಸರ್‌ ಪಾತ್ರಧಾರಿ ಅಕ್ಷತ್‌ ಅಮೀನ್‌, 4. ಸೋಕ್ರಟಿಸ್‌ ನಾಟಕದ ಪ್ಲಾಟೋ ಪಾತ್ರಧಾರಿ ಲತೇಶ್‌ ಪೂಜಾರಿ,

ನಟಿಯರು: 1. ಪೆರ್ಗ ನಾಟಕದ ಸಂಕಮ್ಮಕ್ಕೆ ಪಾತ್ರಧಾರಿಣಿ ಚಂದ್ರಕಲಾ ರಾವ್‌ ಕದಿಕೆ, 2. ದಿ ಫೈಯರ್‌ ನಾಟಕದ ವ್ಯಕ್ತಿ 1, ಮೊದಲ ಹೆಣ್ಣು, ಜುವಾನ ಪಾತ್ರಧಾರಿ ಸಹನಾ ಪಟ್ಲ, 3. ದಿ ಫೈಯರ್‌ ನಾಟಕದ ವ್ಯಕ್ತಿ 2, ಸೃಷ್ಟಿ, ಜೂಜಿನ ಹೆಣ್ಣು ಪಾತ್ರಧಾರಿಣಿ ವಂಶಿ ಆರ್‌. ಅಮೀನ್‌, 4. ಈದಿ ನಾಟಕದ ಝರೀನಾ ಪಾತ್ರಧಾರಿಣಿ ರಾಧಿಕಾ ದಿವಾಕರ್‌.

ಬಾಲನಟ/ನಟಿಯರು: 1.ಅದ್ವೆ„ತ, ಕೇದಾರ, ಆಶ್ರಿತ, ತುದೆ ದಾಂಟಿ ಬೊಕ್ಕ ನಾಟಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ.

ಸ್ಪರ್ಧೆಯ ತೀರ್ಪುಗಾರರಾಗಿ ಡಾ| ಗಣನಾಥ ಎಕ್ಕಾರು, ಡಾ| ಭರತ್‌ ಕುಮಾರ್‌ ಪೊಲಿಪು ಮುಂಬಯಿ ಹಾಗೂ ಡಾ| ಸುಕನ್ಯ ಮಾರ್ಟಿಸ್‌ ಸಹಕರಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಜ. 26ರಂದು ಸಂಜೆ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಲಿದ್ದು, ಪ್ರಥಮ ಪ್ರಶಸ್ತಿ ವಿಜೇತ ನಾಟಕದ ಮರುಪ್ರದರ್ಶನ ನಡೆಯಲಿದೆ ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.