Advertisement
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 8 ರಿಂದ ಗಣಹೋಮ, ಅನಂತರ ನವಕ ಕಲಶ, ನವಗ್ರಹ ಶಾಂತಿ ಆನಂತರ ಪ್ರಧಾನ ಹೋಮ, ಪೂರ್ವಾಹ್ನ 11.15ರಿಂದ ಕಲಶಾಭಿಷೇಕ, ಮಧ್ಯಾಹ್ನ 12ರಿಂದ ಪ್ರಸನ್ನ ಪೂಜೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆಯನ್ನು ಆಯೋಜಿಸಲಾಗಿತ್ತು.
ಸಂಜೆ 5ರಿಂದ ರಾತ್ರಿ 7ರ ವರೆಗೆ ದೇವಸ್ಥಾನದ ಸದಸ್ಯ ಬಾಂಧವರಿಂದ ಹಾಗೂ ತುಳು-ಕನ್ನಡಿಗರಿಂದ ಭಜನ ಕಾರ್ಯಕ್ರಮ ನೆರವೇರಿತು. ರಾತ್ರಿ 8ರಿಂದ ದೀಪಾರಾಧನೆ, ರಂಗಪೂಜೆಯನ್ನು ಆಯೋಜಿಸಲಾಗಿತ್ತು.
ಸ್ಥಳೀಯ ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ದಾನಿಗಳು, ಸಮಾಜ ಸೇವಕರು, ತುಳು-ಕನ್ನಡಿಗರು, ಅನ್ಯ ಭಾಷಿಗ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಮಿತಿಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿಶ್ವಸ್ತರು ಸಹಕರಿಸಿದರು.
Related Articles
Advertisement
ಸುಮಾರು 11 ವರ್ಷಗಳ ಹಿಂದೆ ಶ್ರೀ ಧರ್ಮ ಮಾರಿಯಮ್ಮ ಮಂದಿರವು ಪ್ರಾರಂಭದಲ್ಲಿ ಶನಿಮಂದಿರದೊಂದಿಗೆ ಸ್ಥಾಪನೆಗೊಂಡಿತು. ದೇವಸ್ಥಾನದಲ್ಲಿ ವರ್ಷವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರಗುತ್ತಿದ್ದು, ಪ್ರಸ್ತುತ ಮಂದಿರವು ಚಾರಿಟೆಬಲ್ ಟ್ರಸ್ಟ್‌ನ ಮಾರ್ಗದರ್ಶನ ದಲ್ಲಿ ಹಲವಾರು ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಪರಿಸರದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ.
ಚಿತ್ರ-ವರದಿ : ರಮೇಶ್ ಉದ್ಯಾವರ