Advertisement
ನಾ ಅಂದೆ ಝುಣಕಾ ಮಾಡು ಸುಮ್ನ್. ಈಜೀ ಆಗ್ತದೆ ಅಂತ್. ಅಷ್ಟ್ ಮಾಡ್ತೀನಿ ಲೆ ಅಂದ್ಲು. ನಾನು ಫೋನ್ ನ್ಯಾಗ ಮಾತಾಡ್ಕೋಂತ್ ಒಂದು ಸಾರ್ ಮಾಡಿದೆ. ಬೆಂಗಳ್ಳೂರ್ ನ್ಯಾಗ್ ಇರೋ ವರ್ಕಿಂಗ್ ವುಮನ್ ದು ಇದು ದಿನದ್ ಕಥಿ. ಮುಂಜಾನೆ ಎದ್ದ್ ಕೂಡ್ಲೇ ಕಾಡುವ ಮೊಟ್ಟ್ ಮೊದ್ಲ ಪ್ರಶ್ನೆ ಏನ್ ಅಂದ್ರ ಇವತ್ತಿನ್ ಅಡುಗೆ ಏನ್ ? ಬಿಲಿಯನ್ ಡಾಲರ್ ಪ್ರಶ್ನೆ ಅಂತಾರ್ ಅಲ್ಲ ? ಇದಕ ಇರ್ಬೇಕ್ ಅನಸ್ತದ.
Related Articles
Advertisement
ಖರೆ ಅಂದ್ರ ಅಡಗಿ ಮಾಡೋದು ಒಂದು ಕಲೆ. ಎಲ್ಲರ್ಗೂ ಅದ ಬರುದಿಲ್ಲ. ಕಣ್ಣಳತಿ ಮ್ಯಾಲೆ ಎಲ್ಲಾ ಗೊತ್ ಆಗ್ಬೇಕ್. ಅಡಗಿ ಮಾಡೋ ಮುಂದ ಮನಸು ಆರಾಮ್ ಇರ್ಬೇಕು. ಎಲ್ಲರ ಲಕ್ಷ ಕೊಟ್ಟ್ ಮಾಡಿದ್ರಾ ಏನಾರ ಒಂದ್ ಆಗ್ತದ. ಉಪ್ಪು ಜಾಸ್ತಿ ಆಗೋದು, ಇಲ್ಲ ಅಂದ್ರ ಹೊತ್ತೋದು, ಏನಾರ ಒಂದ್ ಆಗಿ ಕೆಟ್ಟ ಬಿಡ್ತದ. ಆಮೇಲೆ ಅದನ್ ತಿನ್ಲಿಕ್ಕೆ ಇನ್ನ ತ್ರಾಸ್. ಅದಕ ಅಮ್ಮ, ಅಜ್ಜಿ ಅಂತಿರ್ತಾರ, ಜಳಕಾ ಮಾಡೀನೆ ಅಡಗಿ ಮನ್ಯಾಗ್ ಹೋಗ್ಬೇಕು ಅಂತ. ಮನಸು ಅರಾಮ ಇದ್ರ ಅಡಗಿ ರುಚಿ ಆಗ್ತದ .ತಿನ್ನಾವ್ರಿಗೆ ಹಿಡಸ್ತದ. ಆದ್ರ ನಮ್ ಅವಸ್ರಕ್ ನಾವು ಇದನ್ನೆಲ್ಲ ನೋಡಾಂಗಿಲ್ಲ.
ಈಗಂತೂ ಮೊಬೈಲ್ನಾಗ್ ಊಟ ಆರ್ಡರ್ ಮಾಡ್ಲಿಕ್ಕೆ ನಾನಾ ನಮೂನಿ ಆ್ಯಪ್ಸ್ ಬಂದಾವ.ಸ್ವಿಗ್ಗಿ, ಜೂಮ್ಯಾಟೊ, ಫುಡ್ ಪಾಂಡ್, ಹಿಂಗ್ ಇನ್ನರಗಡ ಅವ. ಖರೆ ಹೇಳ್ತೀನಿ ಚಹಾ ಕಾಪಿ ಮೊದಲ್ ಮಾಡಿ ಎಲ್ಲ ಸಿಗ್ತಾವ ಅದರಾಗ. ನಾ ಅನ್ಕೊಂಡೆ ಅಷ್ಟೂ ಮನ್ಯಾಗ ಮಾಡ್ಲಿಲ್ಲ ಅಂದ್ರ ಅಡಗಿ ಮನಿ ಯದಕ ಬೇಕು ? ಒಲಿ ಯದಕ ಬೇಕ ಅಂತ. ಅಲ್ಲ ಒಮ್ಮೊಮ್ಮೆ ಎಮರ್ಜೆನ್ಸಿ ಸಹಾಯ ಆಗ್ತವ ಇವು ಆ್ಯಪ್ಸ್.ನಾನು ಆರ್ಡ್ರ್ ಮಾಡೇನಿ. ಅಂದ್ರು ಮನ್ಯಾಗ ಮಾಡಿದ ರುಚಿ ಬ್ಯಾರೆನ. ಒಟ್ನ್ಯಾಗ್ ನಮ್ಮ ಮಂದಿಗೆ ಮಡ್ಕೋಂಡ್ ತಿನ್ಲಿಕ್ಕೆ, ತಿನಸ್ಲಿಕ್ಕೆ ದೊಡ್ ಕೆಲ್ಸ್ ಆಗೇದ್.
ಇನ್ ನಮ್ಮ ಮಕ್ಕಳ್ ಕಾಲಕ್ಕ್ ರೋಬ್ಯಾಟ್ಸ್ ಬಂದಿರ್ತಾವ್, ಅವ ಎಲ್ಲಾ ಕೆಲ್ಸ ಮಾಡಿ, ಊಟ ಮಾಡ್ಸಿ, ಅಡಗಿ ಮನೀ ಸ್ಚಚ್ಛ್ ಮಾಡಿ, ನಮ್ಮನ್ನು ರೆಡಿ ಮಾಡಿ ಕೂಡಸ್ತಾವ್ . ಏನ್ ಅಂತೀರಿ ? ( ಅಲ್ಲ ಒಮ್ಮೊಮ್ಮೆ ಬ್ಯಾಸರ್ ಬಂದಾಗ ಹಿಂತಾ ರೋಬಾಟ್ಸ್ ಬೇಕು ಅನಸ್ತದ ಮತ್ತ )
ಮುಂದುವರಿಯುವುದು)
ರಶ್ಮಿ ಅಜಯ್
ಧಾರವಾಡ