Advertisement

ಉಪ ರಾಷ್ಟ್ರಪತಿ ಚುನಾವಣೆ : ವೆಂಕಯ್ಯಗೆ 788ರಲ್ಲಿ 485 ಮತಗಳು ಪಕ್ಕಾ

07:30 PM Jul 19, 2017 | Team Udayavani |

ಹೊಸದಿಲ್ಲಿ : ಉಪ ರಾಷ್ಟ್ರಪತಿ ಹುದ್ದೆಯ ಎನ್‌ಡಿಎ ಅಭ್ಯರ್ಥಿಯಾಗಿರುವ ಮಾಜಿ ಕೇಂದ್ರ ಸಚಿವ ಎಂ ವೆಂಕಯ್ಯ ನಾಯ್ಡು ಅವರಿಗೆ ಮತದಾನದ ಹಕ್ಕಿರುವ 788 ಸದಸ್ಯರ ಪೈಕಿ  485 ಸದಸ್ಯರ ಪಕ್ಕಾ ಮತಗಳು ಸಿಗಲಿವೆ ಎನ್ನಲಾಗಿದೆ. 

Advertisement

ಉಪ ರಾಷ್ಟ್ರಪತಿ ಚುನಾವಣೆಯು ಆಗಸ್ಟ್‌ 5ರಂದು ನಡೆಯಲಿದ್ದು ವೆಂಕಯ್ಯ ನಾಯ್ಡು ಅವರು ವಿರೋಧ ಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು ಕಣದಲ್ಲಿ ಎದುರಿಸಲಿದ್ದಾರೆ. 

ಚುನಾವಣೆಯ ದಿನ ಸಮೀಪಿಸುವಾಗ ವೆಂಕಯ್ಯ ನಾಯ್ಡು ಅವರಿಗೆ ಇನ್ನಷ್ಟು ಹೆಚ್ಚಿನ ಬೆಂಬಲ ಸಿಗುವ ಸಾಧ್ಯತೆಗಳಿವೆ ಎಂದು ಬಿಜೆಪಿ ಮೂಲಗಳು ಹೇಳಿವೆ. 

ಉಪ ರಾಷ್ಟ್ರಪತಿ ಆಯ್ಕೆಗೆ ಮತದಾನದ ಹಕ್ಕಿರುವವವರ ಸಂಖ್ಯೆ 790. ಇವರ ಪೈಕಿ ವಿನೋದ್‌ ಖನ್ನಾ ಮತ್ತು ಅನಿಲ್‌ ಮಾಧವ ಧವೆ (ಇಬ್ಬರೂ ಬಿಜೆಪಿ) ಈಚೆಗೆ ತೀರಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next