Advertisement

ಅತೃಪ್ತರು ಅಧಿವೇಶನಕ್ಕೆ ಆಗಮಿಸುವರೇ?

12:35 AM Feb 05, 2019 | Team Udayavani |

ಸಂಪುಟ ವಿಸ್ತರಣೆ ನಂತರ ಮುಂಬೈಗೆ ತೆರಳಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 18ರಂದು ಬೆಂಗ ಳೂರು ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಸಾರ್ವಜನಿ ಕವಾಗಿ ಕಾಣಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಕೋರ್ಟ್‌ ವಿಚಾರಣೆಯಲ್ಲಿ ಪಾಲ್ಗೊಳ್ಳುವುದರಿಂದ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಕೊನೆಯದಾಗಿ ಹೇಳಿದ್ದರು. ಆ ನಂತರ ಮತ್ತೆ ಮುಂಬೈಗೆ ತೆರಳಿದ್ದು, ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
– ನಾಗೇಂದ್ರ, ಬಳ್ಳಾರಿ ಗ್ರಾಮೀಣ

Advertisement

ಡಿಸೆಂಬರ್‌ 22 ರಂದು ಸಚಿವ ಸಂಪುಟ ವಿಸ್ತರಣೆಯಾದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ರಮೇಶ್‌ ಜಾರಕಿಹೊಳಿ, ಪಕ್ಷದ ಯಾವ ನಾಯಕರ ಸಂಪರ್ಕಕ್ಕೂ ಸಿಕ್ಕಿಲ್ಲ. ಮುಂಬೈನಲ್ಲಿ ಖಾಸಗಿ ಹೊಟೆಲ್‌ನಲ್ಲಿ ವಾಸ್ಯವ್ಯ ಹೂಡಿದ್ದಾರೆ ಎಂಬ ಮಾಹಿತಿ ಇದೆ. ಸಂಪುಟದಿಂದ ಕೈ ಬಿಟ್ಟ ಸಂದರ್ಭದಲ್ಲಿ ಕೊನೆಯದಾಗಿ ಮಾಧ್ಯಮಗಳ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಆ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.
– ರಮೇಶ್‌ ಜಾರಕಿಹೊಳಿ, ಗೋಕಾಕ್‌ ಶಾಸಕ

ಸಂಪುಟ ವಿಸ್ತರಣೆ ನಂತರ ರಮೇಶ್‌ ಜಾರಕಿಹೊಳಿ ಅವರೊಂದಿಗೆ ಮುಂಬೈಗೆ ತೆರಳಿದ್ದರು. ಜನವರಿ 24 ರಂದು ಕ್ಷೇತ್ರಕ್ಕೆ ಆಗಮಿಸಿ, ಮತದಾರರ ಆಹವಾಲು ಸ್ವೀಕರಿಸಿದ್ದರು. ಬೆನ್ನು ನೋವಿನ ಕಾರಣ ಚಿಕಿತ್ಸೆಗೆ ಮುಂಬೈಗೆ ತೆರಳಿದ್ದೆ. ನಾನು ಯಾವುದೇ ಆಪರೇಷನ್‌ ಕಮಲಕ್ಕೆ ಒಳಗಾಗಿಲ್ಲ ಎಂದು ಹೇಳಿದ್ದರು.
– ಮಹೇಶ್‌ ಕುಮಠಳ್ಳಿ, ಅಥಣಿ ಶಾಸಕ

ಜನವರಿಯಲ್ಲಿ ಮಹಾರಾಷ್ಟ್ರದ ಸಮುದಾಯದ ಗುರುಗಳನ್ನು ಭೇಟಿ ಮಾಡುವ ನೆಪದಲ್ಲಿ ಮುಂಬೈಗೆ ತೆರಳಿದ್ದರು. ಜನವರಿ 24 ರಂದು ತಮ್ಮ ತಂದೆಯ ಪುಣ್ಯತಿಥಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕ್ಷೇತ್ರಕ್ಕೆ ಆಗಮಿಸಿದ್ದರು. ನಂತರ ಜನವರಿ 26 ರಂದು ಧ್ವಜಾರೋಹಣ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು. ಆ ಮೇಲೆ ಫೆಬ್ರವರಿ 2 ರಂದು ಕ್ಷೇತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿರುವ ಅವರು, ಕ್ಷೇತ್ರದಲ್ಲಿ ಕೆಲಸಗಳು ಆಗುತ್ತಿಲ್ಲ. ಕ್ಷೇತ್ರದ ಜನತೆಯ ಅಭಿಪ್ರಾಯದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದರು.
– ಉಮೇಶ್‌ ಜಾಧವ್‌, ಚಿಂಚೊಳ್ಳಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next