Advertisement

Nagavi University ಸಂರಕ್ಷಣೆಗಾಗಿ ಸಮಿತಿ:  ನಳಂದ ವಿವಿಗಿಂತಲೂ ಹಳೆಯದು? 

12:36 AM Nov 16, 2023 | Team Udayavani |

ಬೆಂಗಳೂರು: ದೇಶದ ಮೊದಲ ಧಾರ್ಮಿಕ ವಿಶ್ವವಿದ್ಯಾನಿಲಯ ಎಂದೇ ಹೇಳಲಾಗುತ್ತಿರುವ ನಾಗಾವಿ ವಿವಿಯ ಸಂರಕ್ಷಣೆಗೆ ಮುಂದಾಗಿರುವ ರಾಜ್ಯ ಸರಕಾರ, ಇದರ ಅಧ್ಯಯನಕ್ಕಾಗಿ ಉನ್ನತ ಮಟ್ಟದ ಸಮಿತಿ ರಚಿಸಲಿದೆ.

Advertisement

ಈ ಸಂಬಂಧ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಮಾಹಿತಿ ನೀಡಿದ್ದು, ನ. 6ರಿಂದ 8ರ ವರೆಗೆ ಬೀದರ್‌, ಕಲಬುರಗಿ, ಯಾದಗಿರಿ, ಶಹಪುರದ ಪಾರಂಪರಿಕ ತಾಣಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈ ವೇಳೆ ನಾಗಾವಿ ವಿವಿ, ಶಿರವಾಳದ ದೇವಸ್ಥಾನಗಳು, ರಾಷ್ಟ್ರಕೂಟರ

ರಾಜಧಾನಿ ಮಳಖೇಡ ಕೋಟೆ ನಿರ್ಲಕ್ಷ್ಯಕ್ಕೆ ಒಳಪಟ್ಟಿರುವುದು ಕಂಡುಬಂದಿದೆ. ಇವುಗಳ ಸಂರಕ್ಷಣೆಗೆ ಸರಕಾರ ಸ್ವತ್ಛತ ಅಭಿಯಾನ, ಸಂಘ- ಸಂಸ್ಥೆಗಳಿಂದ ದತ್ತು ಸ್ವೀಕಾರ, ತಜ್ಞರ ಅಧ್ಯಯನ ಸಮಿತಿಗಳ ರಚನೆ ಸೇರಿದಂತೆ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳಲಿದೆ ಎಂದು  ತಿಳಿಸಿದ್ದಾರೆ.

ನಾಗಾವಿ ವಿವಿ ಅತ್ಯಂತ ಹಳೆಯದಾಗಿದ್ದು, ಮೂವರು ವಿವಿಗಳ ಕುಲಪತಿಗಳೊಂದಿಗೆ ಚರ್ಚಿಸ ಲಾಗಿದೆ. ಶೀಘ್ರವೇ ಸಮಿತಿ ರಚಿಸಲಾಗುವುದು. ಕನ್ನಡಿಗರು ಹೆಮ್ಮೆಪಡುವ ಅವಶೇಷಗಳು ಅಲ್ಲಿವೆ ಎಂಬುದು ಇತಿಹಾಸಕಾರರ ಅಭಿಪ್ರಾಯ ಎಂದು ಸಚಿವರು ತಿಳಿಸಿದರು. ಈ ಮಧ್ಯೆ ಡಿ. 1ರಿಂದ ಸ್ವತ್ಛತ ಕಾರ್ಯ ನಡೆಯಲಿದ್ದು, ಜ. 1ರಿಂದ 10ರ ಒಳಗೆ ನಾಗಾವಿ ವಿವಿಯಲ್ಲಿನ ಎಲ್ಲ ಅವಶೇಷಗಳನ್ನು ನೋಟಿಫೈ ಮಾಡಲು ಸೂಚಿಸಲಾಗಿದೆ ಎಂದರು.

300 ವಿದ್ಯಾರ್ಥಿಗಳಿದ್ದರು
ಅತ್ಯಂತ ಪ್ರಾಚೀನ ಧಾರ್ಮಿಕ ನಾಗಾವಿ ಶಿಕ್ಷಣ ಕೇಂದ್ರದಲ್ಲಿ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಕರ್ನಾಟಕದ ಮೊದಲ ಗ್ರಂಥಾಲಯ ಸಹ ಈ ವಿವಿಯಲ್ಲೇ ಇತ್ತೆಂಬುದು ವಿಶೇಷ. ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸಹಿತ ಶಿಕ್ಷಣ ನೀಡಲಾಗುತ್ತಿತ್ತು.

Advertisement

ಏನಿದು ನಾಗಾವಿ ವಿವಿ?
ಈ ವಿವಿ 2ನೇ ಶತಮಾನದಲ್ಲಿ ಸ್ಥಾಪನೆಯಾಗಿದ್ದು, ನಳಂದಕ್ಕಿಂತಲೂ ಹಿಂದಿನದ್ದುಎನ್ನುತ್ತವೆ ಅಲ್ಲಿ ದೊರೆತ ಶಿಲಾಶಾಸನಗಳು. 1927ರಲ್ಲಿ ಹೈದರಾಬಾದ್‌ ನಿಜಾಮ ಈ ವಿವಿ ಬಗ್ಗೆ ಸಂಶೋಧನೆ ನಡೆಸಿದ್ದು, ಅದರ ಪುಸ್ತಕವೂ ನಿಜಾಮನ ಮ್ಯೂಸಿಯಂನಲ್ಲಿ ಲಭ್ಯವಿದೆ. ಸುಮಾರು 400 ಎಕ್ರೆಯಲ್ಲಿ ವಿವಿ ಇತ್ತು ಎನ್ನಲಾಗುತ್ತಿದೆ.

ವಿವಿಯ ಘಟಿಕ ಸ್ಥಾನ
ನಾಗಾವಿ ಹಿಂದೆ ರಾಷ್ಟ್ರಕೂಟರ ಮತ್ತು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಅಗ್ರಹಾರ, ಘಟಿಕಸ್ಥಾನ ಎಂದೇ ಕರೆಯಲ್ಪಡುತ್ತಿತ್ತು. ಇಲ್ಲಿ ಸುಮಾರು 64 ಕಂಬಗಳ ಬೃಹತ್‌ ಕಟ್ಟಡವೊಂದಿದ್ದು, ಇದು ವಿಶ್ವವಿದ್ಯಾಲಯದ ಘಟಿಕ ಸ್ಥಾನವಾಗಿತ್ತು. ಅಂದರೆ ಇಂದಿನ ವಿ ವಿ ಗಳಲ್ಲಿ ನಡೆಯುವ ಪದವಿ ಪ್ರದಾನದ ಘಟಿಕೋತ್ಸವವೇ ಹಿಂದಿನ ಕಾಲದ ಘಟಿಕ ಸ್ಥಾನ ಎನ್ನಲಾಗುತ್ತದೆ. ನಾಗಾವಿ ವಿವಿಗೆ ಪ್ರವೇಶ ದ್ವಾರವಿತ್ತು.ಈಗಲೂ ಶಾಸನ (1058) ಅವಶೇಷಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next