Advertisement

ರೈಲಲ್ಲಿ ಬಂದವರು ನಾಗಾವಿ ಕ್ವಾರಂಟೈನ್‌ಗೆ

12:44 PM Jun 02, 2020 | Suhan S |

ವಾಡಿ: ಸೋಮವಾರದಿಂದ ರೈಲುಗಳ ಸಂಚಾರ ಆರಂಭವಾಗುತ್ತಿದ್ದಂತೆ ಮಹಾರಾಷ್ಟ್ರ, ಆಂಧ್ರ ಹಾಗೂ ಬೆಂಗಳೂರಿನಿಂದ ಬರುವವರ ಮೇಲೆ ತೀವ್ರ ನಿಗಾವಹಿಸಲಾಗುತ್ತಿದ್ದು, ರೈಲು ನಿಲ್ದಾಣದಿಂದಲೇ ನೇರವಾಗಿ ಸರಕಾರಿ ಕ್ವಾರಂಟೈನ್‌ಗೆ ಕರೆದೊಯ್ಯಲಾಗುತ್ತಿದೆ.

Advertisement

ಸೋಮವಾರ ಸಂಜೆ 7.40ಕ್ಕೆ ಮುಂಬೈ-ಬೆಂಗಳೂರು ಉದ್ಯಾನ್‌ ಏಕ್ಸ್‌ಪ್ರೆಸ್‌ ರೈಲು ವಾಡಿ ಜಂಕ್ಷನ್‌ ನಿಲ್ದಾಣ ತಲುಪುತ್ತಿದ್ದಂತೆ ಪ್ಲಾಟ್‌ ಫಾರ್ಮ್ ಮೇಲೆ ಇಳಿಯುವ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಪೊಲೀಸರು ಸುರಕ್ಷತೆ ಒದಗಿಸಿದರೆ, ತಹಶೀಲ್ದಾರರು ಗೌರವದಿಂದ ಸ್ವಾಗತಿಸಿ ಥರ್ಮಲ್‌ ಸ್ಕ್ರೀನಿಂಗ್‌ಗೆ ಸಹಕರಿಸುವಂತೆ ಮನವೊಲಿಸಿದರು. ಕಿರಿಯ ಆರೋಗ್ಯ ಸಹಾಯಕಿ ಅನಿತಾ ಮಲಗೊಂಡ ಹಾಗೂ ಸಿಬ್ಬಂದಿ ಪ್ರತಿಯೊಬ್ಬ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದರು.

ವಾಡಿ ವಲಯದ ವಿವಿಧ ಗ್ರಾಮ ಹಾಗೂ ತಾಂಡಾಗಳಿಗೆ ಸೇರಿದ ಒಟ್ಟು 20 ಜನ ಪ್ರಯಾಣಿಕರನ್ನು ಏಳು ದಿನಗಳವರೆಗೆ ಚಿತ್ತಾಪುರ ಪಟ್ಟಣದ ನಾಗಾವಿ ಹಬ್‌ ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸಲಾಯಿತು. ತಹಶೀಲ್ದಾರ್‌ ಉಮಾಕಾಂತ ಹಳ್ಳೆ, ವಾಡಿ ನಗರ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ, ಕ್ರೈಂ ಪಿಎಸ್‌ಐ ದಿವ್ಯಾ ಮಹಾದೇವ್‌, ರೈಲು ನಿಲ್ದಾಣ ಪಿಎಸ್‌ಐ ವೀರಭದ್ರಪ್ಪ ಪ್ರಯಾಣಿಕರಿಗೆ ಭದ್ರತೆ ಒದಗಿಸಿದರು.

ಮಂಗಳವಾರ ಬರುವ ರೈಲುಗಳಿಂದಲೂ ಪ್ರಯಾಣಿಕರು ಆಗಮಿಸಲಿದ್ದು, ಎಲ್ಲರಿಗೂ ನಾಗಾವಿ ಕ್ವಾರಂಟೈನ್‌ಗೆ ಕಳುಹಿಸಲಾಗುವುದು ಎಂದು ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶರಣಪ್ಪ ಮಡಿವಾಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next