Advertisement

Nagarhole National Park; ವನ್ಯಪ್ರಾಣಿ ಭೇಟೆ, ಇಬ್ಬರ ಬಂಧನ, ನಾಲ್ವರು ಪರಾರಿ

09:38 PM Jul 21, 2023 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನವನದಲ್ಲಿ ಜಿಂಕೆ ಭೇಟೆಯಾಡಿ, ಜೋಳದ ಹೊಲದಲ್ಲಿ ಬಚ್ಚಿಟ್ಟಿದ್ದ ಮಾಂಸ, ಕೃತ್ಯಕ್ಕೆ ಬಳಸಿದ್ದ ಪರಿಕರವನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರು ಆರೋಪಿ ಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

Advertisement

ಮೈಸೂರು ಹುಣಸೂರು ತಾಲೂಕಿನ ಸಿಂಡೇನಹಳ್ಳಿಯ ಕಾಳೇಗೌಡರ ಪುತ್ರ ಪ್ರದೀಪ್ ಆಲಿಯಾಸ್ ಕುಂಡ, ಮತ್ತು ಅಬ್ಬೂರಿನ ಕರುಣೇಗೌಡರ ಪುತ್ರ ಮಧು ಬಂಧಿತ ಆರೋಪಿಗಳು. ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.

ಘಟನೆ ವಿವರ:
ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ನೇಗತ್ತೂರಿನ ಜೋಳದ ಹೊಲದಲ್ಲಿ ಅಕ್ರಮವಾಗಿ ಕಾಡು ಪ್ರಾಣಿ ಮಾಂಸ ಸಂಗ್ರಹಿಸಿಟ್ಟಿದ್ದಾರೆ ಎಂದು ಖಚಿತ ಮಾಹಿತಿ ಮೇರೆಗೆ ಸ್ಥಳ ಪರಿಶೀಲಿಸಿದಾಗ ಜೋಳದ ಹೊಲದಲ್ಲಿ ರಕ್ತಸಿಕ್ತವಾಗಿದ್ದ ಮೂರು ಕತ್ತಿಗಳು, ಎರಡು ಚಾಕು, ಅನತಿ ದೂರದಲ್ಲಿ ನಾಲ್ಕು ಬಿಳಿ ಪ್ಲಾಸ್ಟಿಕ್ ಚೀಲಗಳಲ್ಲಿ ಕಾಡು ಪ್ರಾಣಿಯ ಮಾಂಸ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದ್ದು, ದಾಳಿಯ ಸುಳಿವರಿತು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯಸ್ಥ ಹರ್ಷಕುಮಾರ ಚಿಕ್ಕನರಗುಂದರವರ ಮಾರ್ಗದರ್ಶನದಲ್ಲಿ ಎಸಿಎಫ್ ದಯಾನಂದ. ವಲಯ ಅರಣ್ಯಾಧಿಕಾರಿಗಳಾದ ರತನ್‌ಕುಮಾರ್, ಗಣರಾಜ್ ಪಟಗಾರ್, ಡಿಆರ್‌ಎಫ್‌ಓಗಳಾದ ಸಿದ್ದರಾಜು, ಪ್ರಸನ್ನಕುಮಾರ್, ವೀರಭದ್ರಯ್ಯ, ಮನೋಹರ್, ರಾಮು ಹಾಗೂ ಗಸ್ತು ವನಪಾಲಕರಾದ ವಸಂತಕುಮಾರ, ಲಿಂಗರಾಜು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಸಂಬಂಧ ವನ್ಯಜೀವಿ ಭೇಟೆಯಾಡಿದ್ದ ಸಿಂಡೇನಹಳ್ಳಿಯ ರಾಜು ಅಲಿಯಾಸ್ ದೊರೆ, ಪ್ರಸನ್ನ ಅಲಿಯಾಸ್ ಪಿಯ್ಯ, ಪ್ರದೀಪ್ ಅಲಿಯಾಸ್ ಕುಂಡ ಸೇರಿದಂತೆ ಇತರರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ನಾಗರಹೊಳೆ ಉದ್ಯಾನದ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಉದಯವಾಣಿಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next