ಹುಣಸೂರು: ನಾಗರಹೊಳೆ ನ್ಯಾಷನಲ್ ಪಾರ್ಕ್ ನಲ್ಲಿ ವನ್ಯಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುತ್ತಿರುವ ಮನಮೋಹಕ ದೃಶ್ಯವನ್ನು ಚಾಲಕರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ನಾಗರಹೊಳೆ ಉದ್ಯಾನವನದಲ್ಲಿ ಉತ್ತಮ ಮಳೆಯಾಗಿದ್ದು. ವನ್ಯಪ್ರಾಣಿಗಳು ಉದ್ಯಾನವನದ ಎಲ್ಲ ವಲಯಗಳಲ್ಲೂ ಸ್ವಚ್ಛಂದವಾಗಿ ವಿಹರಿಸುತ್ತಿವೆ.
ಉದ್ಯಾನವನದ ನಾಗರಹೊಳೆ ವಲಯದ ಕಾರ್ಮಾಡು ಜಂಕ್ಷನ್ ಬಳಿಯಲ್ಲಿ ಮೂರು ಸೀಳು ನಾಯಿಗಳು ಕಾಣಿಸಿಕೊಂಡಿದ್ದು. ಒಂದು ಸೀಳುನಾಯಿ ರಸ್ತೆಯಲ್ಲಿ ವಿರಮಿಸುತ್ತಿದ್ದರೆ. ಮತ್ತೆರಡು ನಾಯಿಗಳು ಆಟವಾಡುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಇಷ್ಟೆ ಅಲ್ಲದೆ ಸ್ವಲ್ಪ ಮುಂದೆ ಕರಡಿಯೊಂದು ರಸ್ತೆ ದಾಟಿ ಸ್ವಚ್ಛಂದವಾಗಿ ವಿಹರಿಸುತ್ತಿರುವ ದೃಶ್ಯವನ್ನು ಸಹ ಜೆ ಎಲ್ ಆರ್ ವಾಹನ ಚಾಲಕ ರಾಜೇಶ್ ರವಿ ಎಂಬುವವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದು. ವನ್ಯಜೀವಿ ಛಾಯಾ ಗ್ರಾಹಕ ರವಿ ಶಂಕರ್ ಮೂಲಕ ಉದಯವಾಣಿಗೆ ಕಳುಹಿಸಿದ್ದಾರೆ.
ವನ್ಯಜೀವಿಗಳ ಸ್ವಚ್ಛಂದ ವಿಹಾರದಿಂದ ನಾಗರಹೊಳೆ ಉದ್ಯಾನದಲ್ಲಿ ವನ್ಯಪ್ರೀಯರ ಸಫಾರಿಗಾಗಿ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ.