ಹುಣಸೂರು:ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದದಿಂದ ನಾಡಿನತ್ತ ಧಾವಿಸುವ ಭರದಲ್ಲಿದ್ದ ಸುಮಾರು 60 ವರ್ಷದ ಸಲಗವೊಂದು ಸೋಲಾರ್ ಬೇಲಿ ಕೆಳಗೆ ಸಾವನ್ನಪ್ಪಿದೆ.
ವಲಯದ ಅಗಸನಹುಂಡಿ ಶಾಖೆಯ ಬಿ.ಆರ್.ಕಟ್ಟೆ ಬೀಟ್‌ನ ಹಾವಿನಗುಂಡಿ ಮೂಲೆ ಅರಣ್ಯ ಪ್ರದೇಶದಲ್ಲಿ ಅಳವಡಿಸಿರುವ ಟೆಂಡಕಲ್ ಸೋಲಾರ್ ಬೇಲಿ ದಾಟುವ ವೇಳೆ ಘಟನೆ ನಡೆದಿದ್ದು, ಸೋಲಾರ್ ಬೇಲಿ ದಾಟುವ ವೇಳೆ ಕೆಳಗೆ ಬಿದ್ದು, ಒದ್ದಾಡಿ ಮೇಲೆಕ್ಕೇಳಲು ಸಾಧ್ಯವಾಗದೆ ಸಾವನ್ನಪ್ಪಿದೆ.
ಈ ಸಂಬಂಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಈ ಆನೆ ಸೋಲಾರ್ ಶಾಕ್‌ಗೊಳಗಾಗಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆಯಿಂದಷ್ಟೇ ನಿಖರ ಕಾರಣ ತಿಳಿಯಬಹುದಾಗಿದೆ.
ಇದನ್ನೂ ಓದಿ:ಸಂತೆಯಲ್ಲಿ ವ್ಯಾಪಾರ ಮಾಡಿದಂತೆ ದೇಶದ ಆಸ್ತಿ ಮಾರಾಟ: ದಿನೇಶ್ ಗುಂಡೂರಾವ್
ಸ್ಥಳಕ್ಕೆ ನಾಗರಹೊಳೆ ಮುಖ್ಯಸ್ಥ ಡಿ.ಮಹೇಶ್ ಕುಮಾರ್, ಎಸಿಎಫ್ ಸತೀಶ್, ಆರ್‌ಎಫ್‌ಓ ನಮನ್ ನಾರಾಯಣ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಾಗರಹೊಳೆ ಪಶುವೈದ್ಯಾಧಿಕಾರಿ ಡಾ.ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದರು. ಸ್ಥಳದಲ್ಲೇ ಅಂತ್ಯ ಸಂಸ್ಕಾರ ನಡೆಸಲಾಯಿತು.