Advertisement

ನಾಗರಾಜ್‌ ಮನೆಯಲ್ಲಿ 120 ಕೋಟಿ ರೂ. ಪತ್ತೆ

03:45 AM Feb 12, 2017 | Team Udayavani |

ಬೆಂಗಳೂರು :ಆದಾಯ ತೆರಿಗೆ ವಂಚನೆ ಆರೋಪದ ಮೇಲೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್‌ ಶಾಸಕ ಎಂಟಿಬಿ ನಾಗರಾಜ್‌ ನಿವಾಸ ಮತ್ತು ಕಚೇರಿಗಳ ಮೇಲೆ ನಡೆಸಿದ ದಾಳಿಯಲ್ಲಿ 120 ಕೋಟಿ ರೂ.ನಷ್ಟು ಅಘೋಷಿತ ಆದಾಯ ಮತ್ತು 10 ಕೆಜಿ ಚಿನ್ನ ಪತ್ತೆಯಾಗಿದೆ.

Advertisement

ದಾಳಿ ವೇಳೆ ಅಧಿಕಾರಿಗಳು ನಡೆಸಿದ ಪರಿಶೀಲನೆ ಸಮಯದಲ್ಲಿ 10 ಕೆಜೆ ಚಿನ್ನದ ಜತೆಗೆ 1.10 ಕೋಟಿ ರೂ. ಸಹ ಸಿಕ್ಕಿದ್ದು, ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೇ, ಸಮರ್ಪಕ ಲೆಕ್ಕವಿಲ್ಲದ ಆಸ್ತಿಗಳ ಮೇಲೆ ಮತ್ತು ವಾಣಿಜ್ಯ ಕಟ್ಟಡಗಳ ನಿರ್ಮಾಣದಲ್ಲಿ ಹೂಡಿಕೆ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಐಟಿ ಮೂಲಗಳು ತಿಳಿಸಿವೆ.

ಆಸ್ಪತ್ರೆ, ನಿವಾಸಗಳ ದಾಖಲೆಗಳು ಅನುಮಾನಸ್ಪದವಾಗಿದ್ದು, ಸಾಲ ಪಡೆದುಕೊಳ್ಳಲು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ನಡೆಸಿದ್ದು, ಶೀಘ್ರದಲ್ಲಿ ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಲಿದ್ದಾರೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ತಪ್ಪು ದಾರಿ ಅನುಸರಿಸುವುದು ಸಹ ಗೊತ್ತಾಗಿದೆ ಎಂದು ಹೇಳಲಾಗಿದೆ.

ಭೂ ಮಾಲೀಕರಿಂದ ಸುಮಾರು 70 ಕೋಟಿ ರೂ. ಪಡೆಯಲಾಗಿದೆ. ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ 560 ಎಕರೆಗೆ ಸಂಬಂಧಪಟ್ಟಂತೆ ಸುಮಾರು 3500 ಭೂ ದಾಖಲೆಗಳು ಪತ್ತೆಯಾಗಿವೆ. ಈ ಬಗ್ಗೆ ವಿಚಾರಣೆ ನಡೆಸಿ ಅಧಿಕೃತ ಮಾಹಿತಿ ಪಡೆಯಲಾಗುವುದು. ಅಲ್ಲದೇ, ಪ್ರತಿಯೊಂದರ ದಾಖಲೆಗಳನ್ನು ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು. ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next