Advertisement
ಅವರು ಫೆ. 20ರಂದು ಕಾರ್ಕಳ ತಾಲೂಕು ಕಡ್ತಲ ದಬುìಜೆ ವಿಷ್ಣುಮೂರ್ತಿ ಗೋಪಾಲಕೃಷ್ಣ ಮಠದ ನಾಗಬ್ರಹ್ಮಸ್ಥಾನದಲ್ಲಿ ನಡೆದ ಢಕ್ಕೆಬಲಿ ಸೇವೆಯ ಪೂರ್ವಭಾವಿಯಾಗಿ ದಾನಿಗಳನ್ನು ಸಮ್ಮಾನಿಸಿ ಆಶೀರ್ವಚನ ನೀಡಿದರು.
ಕ್ಷೇತ್ರದಲ್ಲಿರುವ ನಾಗಬ್ರಹ್ಮಸ್ಥಾನ ದಲ್ಲಿ ನಾಗದೇವರಿಗೆ ತನು ಎರೆಯುವ ಸಂದರ್ಭ ಹುತ್ತದಿಂದ ನಾಗದೇವರು ಪ್ರತ್ಯಕ್ಷಗೊಂಡಿರುವ ವಿಚಾರ ಕ್ಷೇತ್ರದ ಮಹಾತೆ¾ ಹಾಗೂ ಭಕ್ತಿಗೆ ಭಗವಂತನು ಒಲಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಶ್ರೀಪಾದರು ಹೇಳಿದರು. ಕ್ಷೇತ್ರದ ಪುರೋಹಿತ ಗೋಪಾಲಕೃಷ್ಣ ಜೋಯಿಸ್ ಮಾತನಾಡಿ ಬೆಳಿರಾಯ ಕುಟುಂಬದ ಭಕ್ತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ದೇವರ ಬ್ರಹ್ಮಕಲಶ ಹಾಗೂ ನಾಗದೇವರಿಗೆ ಢಕ್ಕೆಬಲಿ ಸೇವೆ ನಡೆದಿದ್ದು ಪ್ರತಿಯೊಬ್ಬರು ದೇವರ ಕೃಪೆಗೆ ಪಾತ್ರರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಹಾಗೂ ಢಕ್ಕೆಬಲಿ ಉತ್ಸವಕ್ಕೆ ದೇಣಿಗೆ ನೀಡಿದವರನ್ನು ಸಮ್ಮಾನಿಸಲಾಯಿತು.
Related Articles
Advertisement
ಕಾರ್ಯಾಧ್ಯಕ್ಷ ಸುಧಾಕರ ಬೆಳಿರಾಯ ಸ್ವಾಗತಿಸಿ, ಕಾರ್ಯದರ್ಶಿ ಜನಾರ್ದನ ಬೆಳಿರಾಯ ಕಾರ್ಯಕ್ರಮ ನಿರೂಪಿಸಿ, ಮುಖ್ಯಪ್ರಾಣ ಉಪಾಧ್ಯಾಯ ವಂದಿಸಿದರು. ಧಾರ್ಮಿಕ ಸಭೆಯ ಅನಂತರ ಕಲ್ಲಂಗಳ ರಾಮಚಂದ್ರ ಕುಂಜಿತ್ತಾಯ ಮತ್ತು ಬಾಲಕೃಷ್ಣ ವೈದ್ಯ ಬಳಗದಿಂದ ಬ್ರಹ್ಮಸ್ಥಾನದಲ್ಲಿ ಸಾಂಪ್ರದಾಯಿಕ ಢಕ್ಕೆಬಲಿ ಸೇವೆ ನಡೆಯಿತು.