Advertisement

ಬೆಳ್ತಂಗಡಿ –ಬಂಟ್ವಾಳ ಭಾಗದಲ್ಲಿ ಸಂಭ್ರಮದ ನಾಗರ ಪಂಚಮಿ ಆಚರಣೆ

07:25 AM Jul 28, 2017 | Karthik A |


ಪುಂಜಾಲಕಟ್ಟೆ :
ಬಂಟ್ವಾಳ ತಾ| ಬಡಗಕಜೆಕಾರು ಗ್ರಾಮದ ಮಡವು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗುರುವಾರ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ಜರಗಿತು. ದೇವಸ್ಥಾನದ ಪ್ರ.ಅರ್ಚಕ ಅರವಿಂದ ಭಟ್‌ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ನಾಗತಂಬಿಲ ,ಕ್ಷೀರಾಭಿಷೇಕ, ಎಳನೀರು ಅಭಿಷೇಕ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಪ್ರೇಮಾನಂದ ಉರಿಯೊಟ್ಟು, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮೋನಪ್ಪ ಪೂಜಾರಿ ಐಂಬಲೋಡಿ , ಭಜನ ಮಂಡಳಿ, ಮಹಿಳಾ ಮಂಡಳಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

Advertisement


ಪುಂಜಾಲಕಟ್ಟೆ :
ಬಂಟ್ವಾಳ ತಾಲೂಕು ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ಜರಗಿತು. ದೇಗುಲದ ಪ್ರ.ಅರ್ಚಕ ನಾರಾಯಣ ಅಡಿಗ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.ದೇವಸ್ಥಾನದ ಆಡಳಿತ ಮೊಕ್ತೇಸರ ಯಶೋಧರ ಪೂಜಾರಿ ಮತ್ತು ಮೊಕ್ತೇಸರರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ಹರಿಶ್ಚಂದ್ರ ಪೂಜಾರಿ,ಉಪಾಧ್ಯಕ್ಷ ಪ್ರವೀಣ ಅಬುರ, ಭಜನ ಮಂಡಳಿ ಸದಸ್ಯರು, ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.


ಪುಂಜಾಲಕಟ್ಟೆ :
ಬಂಟ್ವಾಳ ತಾ| ಬಾಂಬಿಲ ಶ್ರೀ ಅಗ್ನಿದುರ್ಗೆ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ ನಾಗನಕಟ್ಟೆಯಲ್ಲಿ ವಿಶೇಷ ಪೂಜೆ, ಸೀಯಾಳಾಭಿಷೇಕ, ಕ್ಷೀರಾಭಿಷೇಕ ಜರಗಿತು. ದೇವಸ್ಥಾನದ ಧರ್ಮದರ್ಶಿ ರಾಘವ ಸುವರ್ಣ, ಪ್ರಧಾನ ಅರ್ಚಕ ಯೋಗೀಶ್‌ ಶಾಂತಿ ಮತ್ತಿತರರು ಉಪಸ್ಥಿತರಿದ್ದರು. 


ಬೆಳ್ತಂಗಡಿ:
ಚಾರ್ಮಾಡಿಯ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ಪೂಜಾ ಕಾರ್ಯಕ್ರಮವನ್ನು ದೇವಸ್ಥಾನದ ಪುರೋಹಿತ ಶ್ರೀನಿವಾಸ ಭಟ್‌ ನೆರವೇರಿಸಿದರು.


ಬೆಳ್ತಂಗಡಿ:
ಉಜಿರೆ ಪಂಚಮಿ ಸಂಕೀರ್ಣದಲ್ಲಿರುವ ನಾಗಬನದಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

Advertisement


ಬೆಳ್ತಂಗಡಿ:
ಮುಂಡಾಜೆ ಗ್ರಾಮದ ಕಾಯರ್ತೋಡಿ ಕಲ್ಲಾರ್ಯ ನಾಗಬನದಲ್ಲಿ ನಾಗರ ಪಂಚಮಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.


ಬಂಟ್ವಾಳ:
ಅನ್ನಪೂರ್ಣೇಶ್ವರಿ ನಾಗಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಮತ್ತು ವೈದಿಕ ವಿಧಿಗಳು, ಹಾಲು, ಸೀಯಾಳ ಅಭಿಷೇಕ ನಡೆದವು.


ಬಂಟ್ವಾಳ:
ಬಿ.ಸಿ.ರೋಡ್‌ ಅಗ್ರಬೈಲು ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಪ್ರಯುಕ್ತ  ಶ್ರೀ ನಾಗದೇವರಿಗೆ ಅರ್ಚಕ ವೆಂಕಟ್ರಮಣ ಹೊಳ್ಳ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.


ಬೆಳ್ತಂಗಡಿ: ಕಿ
ರಿಯಾಡಿ ಸದಾಶಿವ ದೇವಸ್ಥಾನದ ನಾಗಬನದಲ್ಲಿ   ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. 


ಮಡಂತ್ಯಾರು:
ಇಲ್ಲಿಯ ಪಾರೆಂಕಿ ಗ್ರಾಮದ ನಡುಬೊಟ್ಟು ಶ್ರೀ ಉದ್ಭವ ರೌದ್ರನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯುಕ್ತ ಹಾಲೆರೆಯುವ ಕಾರ್ಯಕ್ರಮ ನಡೆಯಿತು.


ಮಡಂತ್ಯಾರು:
ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ನಾಗರಪಂಚಮಿ ಪ್ರಯುಕ್ತ ಹಾಲೆರೆಯುವ ಕಾರ್ಯಕ್ರಮ ನಡೆಯಿತು. 


ಬಂಟ್ವಾಳ:
ಬೊಳಂತೂರು ಗ್ರಾಮ ಶ್ರೀಬೈಲು ದುರ್ಗಾಪರಮೇಶ್ವರೀ ದೇವಸ್ಥಾನದ  ನಾಗಬನದಲ್ಲಿ ನಾಗರಪಂಚಮಿ ನಡೆಯಿತು. ಶ್ರೀ ದುರ್ಗಾಪರಮೇಶ್ವರೀ ಸೇವಾ ಟ್ರಸ್ಟ್‌ ಅಧ್ಯಕ್ಷ ಜಯರಾಜ್‌ ಬೋಳಂತೂರು, ವಿಶ್ವಜಿತ್‌ ಶೆಟ್ಟಿ, ವೆಂಕಟರಮಣ ಬಳ್ಳೂಕರಾಯ ಮತ್ತಿತರರು ಉಪಸ್ಥಿತರಿದ್ದರು.


ವಿಟ್ಲ :
ಶ್ರೀ ಅನಂತೇಶ್ವರ ದೇವಸ್ಥಾನದ ಓಕುಳಿಕಟ್ಟೆಯಲ್ಲಿ ನಾಗದೇವರಿಗೆ ನಾಗರ ಪಂಚಮಿ ಪ್ರಯುಕ್ತ ನಾಗರ ಪಂಚಮಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next