Advertisement

Nagara Panchami; ಕರಾವಳಿಯಾದ್ಯಂತ ಇಂದು ನಾಗರಪಂಚಮಿ

11:15 PM Aug 20, 2023 | Team Udayavani |

ಮಂಗಳೂರು/ಉಡುಪಿ: ಪವಿತ್ರ ನಾಗಾರಾಧನಾ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ, ಉಡುಪಿಯ ಶ್ರೀಕೃಷ್ಣಮಠ, ನಾಲ್ಕು ಸ್ಕಂದಾಲಯಗಳು (ಮುಚ್ಚಲಕೋಡು, ಮಾಂಗೋಡು, ತಾಂಗೋಡು, ಅರಿತೋಡು), ಶ್ರೀವೆಂಕಟರಮಣ ದೇವಸ್ಥಾನ, ನೀಲಾವರ ಪಂಚಮಿಕಾನ, ಸಗ್ರಿ ವಾಸುಕೀ ಅನಂತಪದ್ಮನಾಭ ದೇವಸ್ಥಾನ, ಬಡಗುಪೇಟೆ ಅನಂತಪದ್ಮನಾಭ ದೇವಸ್ಥಾನ ಸಹಿತ ಕರಾವಳಿ ಭಾಗದ ವಿವಿಧ ನಾಗ ಸಾನಿಧ್ಯದ ಕ್ಷೇತ್ರಗಳಲ್ಲಿ ಸೋಮವಾರ ಶ್ರದ್ಧಾಭಕ್ತಿಯ ನಾಗರ ಪಂಚಮಿ ಆಚರಣೆ ನೆರವೇರಲಿದೆ.

Advertisement

ಜತೆಗೆ ಎರಡೂ ಜಿಲ್ಲೆಯ ವಿವಿಧ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಗಳು, ದೇವಾಲಯಗಳ ನಾಗಸನ್ನಿಧಿ, ಕುಟುಂಬದ ನಾಗಬನ ಗಳಲ್ಲಿ ನಾಗರಪಂಚಮಿ ನೆರವೇರಲಿದೆ.

ನಾಗರ ಪಂಚಮಿ ಅಂಗವಾಗಿ ರವಿವಾರ ಜಿಲ್ಲೆಯಾದ್ಯಂತ ಖರೀದಿ ಜೋರಾಗಿತ್ತು. ಮಂಗಳೂರು ಹಾಗೂ ಉಡುಪಿಯ ಮಾರುಕಟ್ಟೆ ಸಹಿತ ವಿವಿಧ ಪ್ರದೇಶದಲ್ಲಿ ಖರೀದಿ ಸಂಭ್ರಮ ಕಂಡುಬಂತು. ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

 

Advertisement

Udayavani is now on Telegram. Click here to join our channel and stay updated with the latest news.

Next