Advertisement
ಶುಕ್ರವಾರ (ಸೆ13 ) ರಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಡಾ.ಜಿ.ಪರಮೇಶ್ವರ್ ”ಯಾವ ಸರಕಾರವೂ ನೀವು ಹೋಗಿ ಗಲಾಟೆ ಮಾಡಿ ಎಂದು ಹೇಳುತ್ತದಾ? ಈ ರೀತಿ ಆಗಬಾರದಿತ್ತು ಎಂದು ಹೇಳಿದರೆ ಅದನ್ನೇ ದೊಡ್ಡದು ಮಾಡುತ್ತಾರೆ. ಕನ್ನಡ ಭಾಷೆಯೇ ಅರ್ಥವಾಗುವುದಿಲ್ಲವೇ? ನಾವು ಹಳ್ಳಿಯಿಂದ ಬಂದವರು. ಹಳ್ಳಿ ಭಾಷೆಯನ್ನೇ ಕೆಲವೊಮ್ಮೆ ಬಳಸುತ್ತೇವೆ” ಎಂದರು.
Related Articles
Advertisement
ಬಿಜೆಪಿ , ಜೆಡಿಎಸ್ ಕಿಡಿಡಾ.ಜಿ. ಪರಮೇಶ್ವರ್ ಅವರ ಹೇಳಿಕೆ ಕುರಿತು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ. ಮಂಡ್ಯ ಸಂಸದ, ಕೇಂದ್ರ ಸಚಿವ, ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ನಾಗಮಂಗಲಕ್ಕೆ ಭೇಟಿ ನೀಡಿದರು. ”ಹಿಂಸಾಚಾರ ವ್ಯವಸ್ಥಿತ ಪೂರ್ವ ಯೋಜಿತ ಎಂದು ಸ್ಥಳ ಪರಿಶೀಲನೆಯಿಂದ ತಿಳಿದುಬಂದಿದೆ” ಎಂದು ಹೇಳಿದರು. ”ಘಟನೆಯನ್ನು ಸಣ್ಣ ಮತ್ತು ಆಕಸ್ಮಿಕ ಎಂದು ಪರಮೇಶ್ವರ್ ಹೇಳಿದ್ದಾರೆ. ಅವರು ಜನರಿಗೆ ಯಾವ ರೀತಿಯ ಸಂದೇಶವನ್ನು ಕಳುಹಿಸುತ್ತಿದ್ದಾರೆ? ಆಕಸ್ಮಿಕ ಎಂದು ಕರೆಯುತ್ತಿದ್ದೀರಿ. ಅಂತಹ ಮೆರವಣಿಗೆ ನಡೆಯುವಾಗ ಘಟನೆ ಸಂಭವಿಸಿದ್ದು, ಸೂಕ್ಷ್ಮ ಪ್ರದೇಶವಾಗಿದ್ದು, ಸೂಕ್ತ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ, 30-40 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ ಜನರ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ” ಎಂದು ಕಿಡಿ ಕಾರಿದ್ದಾರೆ.