Advertisement

ನಾಗಮಂಗಲ ಕ್ಷೇತ್ರದ ದಳ ಟಿಕೆಟ್‌ಗೆ ಫೈಟ್‌

12:15 PM Jan 31, 2022 | Team Udayavani |

ಮಂಡ್ಯ: ರಾಜ್ಯದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಒಂದು ವರ್ಷ ಇರುವಾಗಲೇ ನಾಗಮಂಗಲದಲ್ಲಿ ರಾಜಕಾರಣ ಬಿರುಸು ಪಡೆದುಕೊಂಡಿದೆ. ಜೆಡಿಎಸ್‌ ಪಕ್ಷದ ಹಾಲಿ-ಮಾಜಿ ಶಾಸಕರ ನಡುವೆ ಟಿಕೆಟ್‌ ಫೈಟ್‌ ವಾರ್‌ ಶುರುವಾಗಿದೆ.

Advertisement

ಈಗಾಗಲೇ ಹಾಲಿ ಶಾಸಕ ಕೆ.ಸುರೇಶ್‌ಗೌಡ ವರಿಷ್ಠರು ನನಗೆ ಟಿಕೆಟ್‌ ನೀಡಲಿದ್ದಾರೆ ಎಂದುಹೇಳುತ್ತಿದ್ದಾರೆ. ಇತ್ತ ಎಲ್‌.ಆರ್‌.ಶಿವರಾಮೇಗೌಡ ನನಗೆ ಟಿಕೆಟ್‌ ನೀಡಲಿದ್ದು, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಹೋದ ಕಡೆಯಲೆಲ್ಲ ಹೇಳಿಕೊಳ್ಳುತ್ತಿದ್ದಾರೆ. ಇದರಿಂದ ಇಬ್ಬರ ನಡುವಿನ ಶೀಥಲ ಸಮರಕ್ಕೆ ನಾಂದಿ ಹಾಡಿದೆ.

ಕಾರ್ಯಕರ್ತರಿಗೆ ಎಲ್‌ಆರ್‌ಎಸ್‌ ಗಾಳ: ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಶಿವರಾಮೇಗೌಡ ನಾಗಮಂಗಲ ಕ್ಷೇತ್ರದ ಹೋಬಳಿವಾರು ಕಾರ್ಯಕರ್ತರಿಗೆ ಗಾಳ ಹಾಕಲು ಮುಂದಾಗಿದ್ದಾರೆ. ಅದರಂತೆ ಕೊಪ್ಪ ಹೋಬಳಿಯ ಮಹಿಳಾ ಕಾರ್ಯಕರ್ತೆಯೊಬ್ಬರಿಗೆ ಕರೆ ಮಾಡಿ ಬೆಂಬಲಿಸುವಂತೆ ಕೋರಿರುವ ಆಡಿಯೋ ವೈರಲ್‌ ಆಗಿದೆ.

ಶೀಥಲ ಸಮರ: ಶಾಸಕ ಕೆ.ಸುರೇಶ್‌ಗೌಡ ಹಾಗೂ ಮಾಜಿ ಶಾಸಕ ಶಿವರಾಮೇಗೌಡ ನಡುವೆ ಮೊದಲಿ  ನಿಂದಲೂ ಭಿನ್ನಾಭಿಪ್ರಾಯ, ವೈಮನಸ್ಸು ಕೇಳಿ ಬರುತ್ತಲೇ ಇದೆ. ಹಲವು ಬಾರಿ ಸುರೇಶ್‌ಗೌಡ ವಿರುದ್ಧಶಿವರಾಮೇಗೌಡ ಭ್ರಷ್ಟಾಚಾರದ ಆರೋಪ ಮಾಡುತ್ತಲೇ ಬಂದಿದ್ದಾರೆ. ವೈರಲ್‌ಆಗಿರುವ ಆಡಿಯೋದಲ್ಲೂ ಸಹ ಸುರೇಶ್‌ಗೌಡವಿರುದ್ಧ ಕಿಡಿಕಾರಿರುವುದು ಇಬ್ಬರ ನಡುವಿನ ಕದನ ಬಹಿರಂಗ ಗೊಂಡಂತಾಗಿದೆ.

ಟಿಕೆಟ್‌ಗಾಗಿ ತ್ರಿಮೂರ್ತಿಗಳ ಫೈಟ್‌: ನಾಗಮಂಗಲ ಜೆಡಿಎಸ್‌ನಲ್ಲಿ ತ್ರಿಮೂರ್ತಿಗಳ ನಡುವಿನ ಅಸಮಾಧಾನ, ಭಿನ್ನಾಭಿಪ್ರಾಯ ಹೊಸದೇನಲ್ಲ. ಮಾಜಿ ಸಂಸದ ಶಿವರಾಮೇಗೌಡ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಎನ್‌.ಅಪ್ಪಾಜಿಗೌಡಇಬ್ಬರು ಒಂದಾಗಿದ್ದು, ಸುರೇಶ್‌ಗೌಡ ವಿರುದ್ಧ ಕಿಡಿಕಾರುತ್ತಿದ್ದರು. ಆದರೆ, ಈಗ ಜೆಡಿಎಸ್‌ ಟಿಕೆಟ್‌ಗಾಗಿ ಮೂವರ ನಡುವೆ ಫೈಟ್‌ ಶುರವಾಗಿದೆ ಎನ್ನಲಾಗುತ್ತಿದೆ. ಶಿವರಾಮೇಗೌಡ ಹಾಗೂ ಸುರೇಶ್‌ ಗೌಡ ನನಗೆ ಟಿಕೆಟ್‌ ನೀಡಲಿದ್ದಾರೆ ಎಂದು ಜಗಳವಾಡುತ್ತಿದ್ದರೆ, ಎನ್‌.ಅಪ್ಪಾಜಿಗೌಡ ಮೌನವಾಗಿಯೇ ವರಿಷ್ಠರ ಮೇಲೆ ಟಿಕೆಟ್‌ಗಾಗಿ ಒತ್ತಡ ಹಾಕುತ್ತಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

Advertisement

ಅಪ್ಪಾಜಿಗೌಡ ಪಾಲಾದರೂ ಅಚ್ಚರಿಯಿಲ್ಲ: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೂ ವರಿಷ್ಠರ ಮಾತಿಗೆ ಕಟ್ಟುಬಿದ್ದು ಸ್ಪರ್ಧೆ ಮಾಡಿದ್ದೆ. ಆದರೆ ಗೆಲುವು ಸಾಧ್ಯವಾಗಲಿಲ್ಲ. ಆದರೆ ಈಗ ನಾಗಮಂಗಲ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು ಎಂದು ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ.ಶಿವರಾಮೇಗೌಡ ಹಾಗೂ ಸುರೇಶ್‌ಗೌಡ ನಡುವಿನಟಿಕೆಟ್‌ ಸಮರದಲ್ಲಿ ಅಂತಿಮವಾಗಿ ಅಪ್ಪಾಜಿಗೌಡ ಪಾಲಾದರೂ ಅಚ್ಚರಿಯಿಲ

ಮಗನಿಗೂ ಟಿಕೆಟ್‌ ಕೊಡಿಸಲು ಯತ್ನ :

ನಾಗಮಂಗಲ ತಾಲೂಕಿನ ಚೀಣ್ಯ ಜಿಪಂ ಕ್ಷೇತ್ರದಿಂದ ತಮ್ಮ ಮಗ ಚೇತನ್‌ ಗೌಡಗೆ ಟಿಕೆಟ್‌ ಕೊಡಿಸಲು ಈಗಾಗಲೇ ಕಸರತ್ತು ಆರಂಭಿಸಿರುವಶಿವರಾಮೇಗೌಡ, ತನಗೂ ವಿಧಾನಸಭಾ ಕ್ಷೇತ್ರದ ಟಿಕೆಟ್‌ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ವೈರಲ್‌ ಆಗಿರುವ ಆಡಿಯೋದಲ್ಲಿ ಮುಂದಿನವಿಧಾನಸಭಾ ಚುನಾವಣೆಯಲ್ಲಿ 30 ಕೋಟಿ ರೂ. ಖರ್ಚು ಮಾಡುವುದಾಗಿ ತಿಳಿಸಿದ್ದಾರೆ. ಲೋಕಸಭೆ ಉಪಚುನಾವಣೆಯಲ್ಲಿ 30 ಕೋಟಿ ರೂ. ಖರ್ಚು ಮಾಡಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲೂ 30 ಕೋಟಿ ರೂ. ಖರ್ಚು ಮಾಡಲಿದ್ದೇನೆ ಎಂದು ತಿಳಿಸಿದ್ದಾರೆ.

ಟಿಕೆಟ್‌ ಯಾರಿಗೇ ಸಿಕ್ಕರೂ ಬಂಡಾಯ? :

ಟಿಕೆಟ್‌ಗಾಗಿ ತ್ರಿಮೂರ್ತಿಗಳ ನಡುವಿನ ಶೀಥಲಸಮರಕ್ಕೆ ವರಿಷ್ಠರೇ ಅಂತ್ಯವಾಡಬೇಕಿದೆ. ಮೂವರಲ್ಲಿಯಾರಿಗೆ ಟಿಕೆಟ್‌ ನೀಡಬೇಕು ಎಂಬುದು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂಎಚ್‌.ಡಿ.ಕುಮಾರಸ್ವಾಮಿ ನಿರ್ಧಾರದ ಮೇಲೆ ನಿಂತಿದೆ.ಮೂವರನ್ನು ಸಮಾಧಾನಪಡಿಸುವ ಪ್ರಯತ್ನನಡೆಯಬೇಕಿದೆ. ಮೂವರಲ್ಲಿ ಒಬ್ಬರಿಗೆ ಟಿಕೆಟ್‌ನೀಡಿದರೂ ಇನ್ನೊಬ್ಬರು ಬಂಡಾಯ ಏಳುವ ಸಾಧ್ಯತೆ ಹೆಚ್ಚಿದೆ.

ಜೆಡಿಎಸ್‌ ಟಿಕೆಟ್‌ಗಾಗಿ ಪೈಪೋಟಿ ಯಾಕೆ?: ನಾಗಮಂಗಲ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಹೆಚ್ಚಿದೆ. ಅಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ  ಪ್ರಭಾವ ಹೆಚ್ಚಿರುವುದರಿಂದ ಜೆಡಿಎಸ್‌ನಿಂದ ಸ್ಪರ್ಧಿಸುವ ಅಭ್ಯರ್ಥಿ ಗೆಲುವಿನ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಇಡೀ ಜಿಲ್ಲೆಯ ಏಳು ವಿಧಾನಸಭಾಕ್ಷೇತ್ರಗಳ ಪೈಕಿ ಅತಿ ಹೆಚ್ಚು ಒಕ್ಕಲಿಗರ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿರುವುದರಿಂದದೇವೇಗೌಡರ ಕೃಪಕಟಾಕ್ಷ ಹೆಚ್ಚಿದೆ. ಲೋಕಸಭೆ ಚುನಾವಣೆಯಲ್ಲಿ ನಿಖೀಲ್‌ ಕುಮಾರ ಸ್ವಾಮಿಗೆಲೀಡ್‌ ತಂದುಕೊಟ್ಟಿದ್ದೇ ನಾಗಮಂಗಲ. ಅದಕ್ಕಾಗಿಯೇ ಜೆಡಿಎಸ್‌ ನಾಯಕರ ನಡುವೆಯೇ ಟಿಕೆಟ್‌ಗಾಗಿ ಸಮರ ಏರ್ಪಟ್ಟಿದೆ. ಇನ್ನು ಕಾಂಗ್ರೆಸ್‌ನ ಮಾಜಿ ಸಚಿವ ಎನ್‌.ಚಲುವರಾಯ ಸ್ವಾಮಿ ಈಗಾಗಲೇ ನಾಗಮಂಗಲ ಹಾಗೂ ಮಂಡ್ಯ ಎರಡು ಕ್ಷೇತ್ರಗಳಲ್ಲಿ ಎಲ್ಲಿ ಸ್ಪರ್ಧಿಸಬೇಕು ಎಂಬ ಗೊಂದಲ ದಲ್ಲಿದ್ದಾರೆ. ಅಲ್ಲದೆ, ಒಂದೇ ವರ್ಷ ಚುನಾವಣೆ ಇರುವುದರಿಂದ ಕ್ಷೇತ್ರದಲ್ಲಿ ಚಲು ವರಾಯ ಸ್ವಾಮಿ ಕ್ರಿಯಾಶೀಲರಾಗಿದ್ದಾರೆ. ಅಲ್ಲದೆ, ಮಂಡ್ಯ ಕ್ಷೇತ್ರದಲ್ಲೂ ಸಂಚರಿಸುತ್ತಿದ್ದಾರೆ.

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next