ಬ್ರಹ್ಮಾವರ: ಭಾರ್ಗವ ಬೀಡು ಬಾರಕೂರು ಮಹಾಸಂಸ್ಥಾನದಲ್ಲಿ ಎಪ್ರಿಲ್ 19, 20, 21ರಂದು ನಡೆ ಯುವ ನಾಗಮಂಡಲದ ಪೂರ್ವಧಿಭಾವಿ ಸಭೆ ಗುರುವಾರ ಜರಗಿತು. ಡಾ| ವಿಶ್ವಸಂತೋಷ ಭಾರತೀ ಸ್ವಾಮೀಜಿ ಪ್ರಸ್ತಾವನೆಗೈದು, ತುಳುನಾಡಿನ ರಾಜಧಾನಿ ಬಾರಕೂರಿನಲ್ಲಿ ಸಮಗ್ರ ನಾಗಾರಾಧಕರನ್ನು ಒಗ್ಗೂಡಿಸಿ ನಡೆಸುವ ಕಾರ್ಯಕ್ರಮ ಇದಾಗಿದೆ ಎಂದರು.
ಇದೇ ಸಂದರ್ಭ ಬಾರಕೂರು ಮಹಾಸಂಸ್ಥಾನದ ಲೋಕಾರ್ಪಣೆ, ದೈವ ದೇವರ ಪ್ರತಿಷ್ಠೆ ಜರಗಲಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಜ್ಯ, ರಾಷ್ಟ್ರ ಮಟ್ಟದ ಗಣ್ಯರು ಆಗಮಿಸು ವರು. ಭೂತಾಳ ಪಾಂಡ್ಯ ಪ್ರಶಸ್ತಿ ಪ್ರದಾನ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶ್ರೀ ಸಂತೋಷ್ ಗುರೂಜಿ ಹೇಳಿದರು.
ನಾಗನ ರಥ: ಕರಾವಳಿಯಲ್ಲಿ ಪ್ರಥಮ ಬಾರಿಗೆ ನಾಗನ ರಥ ಎ. 2ರಂದು ಕ್ಷೇತ್ರದಿಂದ ಹೊರಟು ಕರಾವಳಿಯಾದ್ಯಂತ ಸಂಚರಿಸಿ, ಎ. 18ರಂದು ಮರಳಲಿದೆ.
ಕಾರ್ಯಕ್ರಮಕ್ಕೆ ನಾಡಿನೆಲ್ಲೆಡೆಯಿಂದ ಮಠಾಧೀಶರು ಆಗಮಿಸಲಿದ್ದಾರೆ. ಮೂಡಬಿದಿರೆ ಆಳ್ವಾಸ್‌ನವರು ವೇದಿಕೆ ನಿರ್ಮಿಸಲಿದ್ದಾರೆ. ಸುಮಾರು 40,000 ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಸಂಪೂರ್ಣ ಕಾರ್ಯಕ್ರಮ ಯಶಸ್ವೀ ಆಯೋಜನೆ ಕುರಿತು ವಿವಿಧ ಸಮಿತಿಗಳನ್ನು ರಚಿಸಲಾ ಯಿತು. ಟ್ರಸ್ಟ್ ಸದಸ್ಯರು, ಉಪ ಸಮಿತಿಯವರು ಉಪಸ್ಥಿತರಿದ್ದರು.
ಡಾ| ಸತ್ಯಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಟ್ರಸ್ಟ್ ಕಾರ್ಯದರ್ಶಿ ಗುರ್ಮೆ ಸುರೇಶ್ ಶೆಟ್ಟಿ ವಂದಿಸಿದರು.