Advertisement

Belman: ಕಜೆ ಕುಕ್ಕುದಡಿ ಕ್ಷೇತ್ರದ ಬ್ರಹ್ಮಕಲಶೋತ್ಸವ; ಫೆ. 24: ನಾಗಮಂಡಲೋತ್ಸವ

01:27 PM Feb 24, 2024 | Team Udayavani |

ಬೆಳ್ಮಣ್‌: ಕಜೆ ಕುಕ್ಕುದಡಿ ಕ್ಷೇತ್ರ ಖ್ಯಾತಿಯ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದ 9 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯಗೊಂಡಿದ್ದು, ಫೆಬ್ರವರಿ 26ರಂದು ಬ್ರಹ್ಮಕಲಶೋತ್ಸವ ನಡೆಯ ಲಿದೆ. ಪೂರ್ವಭಾವಿಯಾಗಿ ಫೆ. 24ರ ರಾತ್ರಿ 11ರಿಂದ ನಾಗಮಂಡಲೋತ್ಸವ ನಡೆಯಲಿದೆ.

Advertisement

ಬೆಳಗ್ಗೆ ಸ್ವಸ್ತಿ ವಾಚನ, ಶಿಖರ ಪ್ರತಿಷ್ಠೆ, 11.25ಕ್ಕೆ ಶ್ರೀ ಮಹಾಮ್ಮಾಯಿ ದೇವಿಯ ಬಿಂಬ ಗದ್ದಿಗೆ ಪ್ರತಿಷ್ಠೆ, ನಿದ್ರಾ ಕುಂಭಾಭಿಷೇಕ, ಪ್ರಸನ್ನ ಪೂಜೆ, ನಾಗ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತ ಹೋಮ, ಕಲಶಾಭಿಶೇಕ, ಆಶ್ಲೇಷಾ ಬಲಿ, ವಟು ಆರಾಧನೆ, ಸಂಜೆ ದುರ್ಗಾನಮಸ್ಕಾರ ಪೂಜೆ, ಸಾಮೂಹಿಕ ಕುಂಕುಮಾರ್ಚನೆ, ಹಾಲಿಟ್ಟು ಸೇವೆ ಹಾಗೂ ನಾಗಮಂಡಲೊಥÕವ ನಡೆಯಲಿದೆ.

ಕಜೆ ಮಹಾಮ್ಮಾಯಿ ಭಕ್ತರ ಪ್ರಾಯೋಜಕತ್ವದಲ್ಲಿ ಡಮರುಗ ನೃತ್ಯ ತಂಡದಿಂದ ಚೈತ್ರಾ ಗಾಣಿಗ ಕಲ್ಲಡ್ಕ ಬಳಗದವರಿಂದ ಭಕ್ತಿ ಗಾನ ಸಿಂಚನ ಹಾಗೂ ಮರೋಳಿ ಮಂಗಳೂರು ಅವರಿಂದ ನೃತ್ಯ ಮಯೂರ ನಡೆಯಲಿದೆ ಎಂದು ಆಡಳಿತದಾರರ ಪರವಾಗಿ ಕಜೆ ಆರು ಮನೆಯವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next