Advertisement

ತುಳು ಲಿಪಿ ಕಲಿಯುತ್ತಿರುವ ನಾಗಾಲ್ಯಾಂಡ್‌ ವಿದ್ಯಾರ್ಥಿನಿ

11:05 PM Jul 09, 2020 | Sriram |

ಮಹಾನಗರ: ಮಣಿಪಾಲ ಕೆಎಂಸಿಯ ನಾಗಾಲ್ಯಾಂಡ್‌ ವಿದ್ಯಾರ್ಥಿನಿ ಯೊಬ್ಬರು ತುಳು ಲಿಪಿ ಕಲಿಯುತ್ತಿದ್ದಾರೆ.ಎರಡನೇ ವರ್ಷದ ಜೀವಶಾಸ್ತ್ರ ವಿಭಾಗ ದಲ್ಲಿ ಕಲಿಯುತ್ತಿರುವ ನಾಗಾಲ್ಯಾಂಡ್‌ನ‌ ಇಮೆನೆರೋ ಪೊಂಗೆನ್‌ ಕೆಲವು ದಿನಗಳಿಂದ ಬಿಡುವಿನ ಸಮಯದಲ್ಲಿ ತುಳು ಲಿಪಿ ಕಲಿಯುತ್ತಿದ್ದಾರೆ. ವಿಜಯ್‌ ಎಂಬವರು ಹೇಳಿಕೊಡುತ್ತಿದ್ದಾರೆ.

Advertisement

ಇಮೆನೆರೋ ತುಳುವಿನ ಕೆಲವು ಪದ ಗಳನ್ನು ಅರ್ಥ ಮಾಡಿಕೊಳ್ಳಬಲ್ಲರು. ಹಿಂದಿ ಚೆನ್ನಾಗಿ ಬರುತ್ತದೆ. ಹೀಗಾಗಿ ಹಿಂದಿ ಮತ್ತು ತುಳು ಮಿಶ್ರಿತವಾಗಿ ತುಳು ಲಿಪಿ ಕಲಿಸಲಾಗುತ್ತಿದೆ. ಸದ್ಯ “ಅ’ ದಿಂದ “ಅಃ’ ವರೆಗೆ ಬರೆಯಲು ಕಲಿತಿದ್ದಾರೆ. ಮುಂದೆ ತುಳು ಮಾತನಾಡಲು ಕಲಿಯುವುದಕ್ಕೂ ಇಮೆನೆರೋ ಉತ್ಸುಕರಾಗಿದ್ದಾರೆ ಎಂದು ವಿಜಯ್‌ ಹೇಳಿದ್ದಾರೆ.

ಆಸಕ್ತಿ ಹುಟ್ಟಿದ್ದು ಹೇಗೆ?
ಇಮೆನೆರೋ ಮಣಿಪಾಲದಲ್ಲಿ ಕಲಿಯು ತ್ತಿದ್ದು, ಸುತ್ತಲೆಲ್ಲ ತುಳು ಭಾಷೆ ಕೇಳಿ ಅವರಿಗೆ ಆಸಕ್ತಿ ಮೂಡಿತ್ತು. ಈಗ ಆಕೆ ಪರಿಚಯಸ್ಥರಿಗೆ ಗುಡ್‌ ಮಾರ್ನಿಂಗ್‌ ಬದಲು “ಸೊಲ್ಮೆಲು’ ಎನ್ನುವುದಕ್ಕೆ ಆರಂಭಿಸಿದ್ದಾರೆ.

“ಬಲೇ ತುಳು ಲಿಪಿ ಕಲ್ಪುಗ’
“ಜೈ ತುಳುನಾಡು’ ಸಂಘಟನೆ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗ ದೊಂದಿಗೆ ದ.ಕ., ಉಡುಪಿ ಜಿಲ್ಲೆಗಳಲ್ಲಿ ತುಳು ಲಿಪಿ ಕಲಿಸುವ ಕಾರ್ಯಾಗಾರ ಹಮ್ಮಿಕೊಳ್ಳುತ್ತಿದೆ. ಈಗಾಗಲೇ 500ಕ್ಕೂ ಹೆಚ್ಚು ಮಂದಿಗೆ ಕಲಿಸಲಾಗಿದೆ. ಪ್ರಸ್ತುತ 50ಕ್ಕೂ ಹೆಚ್ಚು ತುಳು ಲಿಪಿ ಕಲಿಸುವ ಶಿಕ್ಷಕರು ಇದ್ದಾರೆ. ಮಂಗಳೂರು, ಕಾರ್ಕಳ, ಉಡುಪಿ ಮತ್ತಿತರ ಕಡೆ ವಾರದಲ್ಲಿ ಒಂದು ತರಗತಿಯಂತೆ 6 ವಾರಗಳ ತರಗತಿ ಪೂರ್ಣಗೊಂಡಿದೆ. ಆರು ವಾರಗಳ ಬಳಿಕ 100 ಅಂಕ ಗಳಿಗೆ ಪರೀಕ್ಷೆ ನಡೆಯುತ್ತದೆ. ಅತೀ ಹೆಚ್ಚು ಅಂಕ ಗಳಿಸಿದವರು ಬಹುಮಾನ ಪಡೆಯುತ್ತಾರೆ. ಕಲಿಕೆ ಉಚಿತ, ಅಭ್ಯಾಸ ಪುಸ್ತಕಗಳನ್ನು ಸಂಘಟನೆ ನೀಡುತ್ತದೆ. ಸದ್ಯ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ವಾಟ್ಸಾ éಪ್‌ ಮೂಲಕ ಆನ್‌ಲೈನ್‌ನಲ್ಲಿ ತರಗತಿ ನೀಡಲಾಗುತ್ತಿದೆ ಎನ್ನುತ್ತಾರೆ ಜೈ ತುಳುನಾಡು ಸಂಘಟನೆಯ ಲಿಪಿ ಪ್ರಮುಖರಾದ ಶರತ್‌ ಕೊಡವೂರು ಮತ್ತು ಕಿರಣ್‌ ತುಳುವೆ.

 ಆಸಕ್ತಿ ಇದೆ
ನನಗೆ ತುಳುನಾಡಿನ ಸಂಸ್ಕೃತಿ ಬಗ್ಗೆ ಆಸಕ್ತಿ ಇದೆ. ಈ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ತುಳು ಲಿಪಿ ಕಲಿಯುತ್ತಿದ್ದೇನೆ. ಮುಂದಿನ ದಿನಗಳಲ್ಲಿ ತುಳು ಭಾಷೆ ಕೂಡ ಕಲಿಯುತ್ತೇನೆ.
– ಇಮೆನೆರೋ ಪೊಂಗೆನ್‌ ವಿದ್ಯಾರ್ಥಿನಿ

Advertisement

 ಇಮೆನೆರೋ ಸ್ನೇಹಿತರೂ ಉತ್ಸುಕ
ಇಮೆನೆರೋಗೆ ಕೆಲವು ದಿನಗಳಿಂದ ತುಳು ಲಿಪಿ ಕಲಿಸುತ್ತಿದ್ದೇನೆ. ಅವರ ಸ್ನೇಹಿತರು ಕೂಡ ತುಳು ಲಿಪಿ ಕಲಿಯಲು ಉತ್ಸುಕರಾಗಿದ್ದಾರೆ.
– ವಿಜಯ್‌, ತುಳು ಲಿಪಿ ಪ್ರಾಧ್ಯಾಪಕ

Advertisement

Udayavani is now on Telegram. Click here to join our channel and stay updated with the latest news.

Next