Advertisement
ಮಹತ್ವದ ಬೆಳವಣಿಗೆಯೇನೆಂದರೆ ತಮಿಳುನಾಡಿನಲ್ಲಿ ಶಾಸಕರು ಕೂವತ್ತೂರಿನ ಗೋಲ್ಡನ್ ಬೇ ರೆಸಾರ್ಟಿಗೆ ತೆರಳಿದಂತೆ ನಾಗಾ ಪೀಪಲ್ಸ್ ಫ್ರಂಟ್ ಪಕ್ಷದ ಶಾಸಕರೆಲ್ಲ ಅಸ್ಸಾಂನ ಕಾಝಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿರುವ ರೆಸಾರ್ಟಲ್ಲಿ ಬೀಡು ಬಿಟ್ಟಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ಡಿಎಎನ್ (ಡೆಮಾಕ್ರಟಿಕ್ ಅಲಯನ್ಸ್ ಆಫ್ ನಾಗಾಲ್ಯಾಂಡ್) ಸಭೆ ನಂತರ, ಎನ್‌ಪಿಎಫ್ ಸಭೆ ನಡೆಯಲಿದೆ ಎನ್ನಲಾಗಿದೆ. ಹಾಲಿ ಸಂಸದ ನೆಪ್ಯೂ ರಿಯೋ ಮತ್ತೆ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ.
Related Articles
Advertisement
ಪಳನಿಸ್ವಾಮಿ ಗೆದ್ದಿರುವ ವಿಶ್ವಾಸಮತ ಯಾಚನೆಯು ವಿಧಾನಸಭೆ ನಿಯಮಗಳಿಗೆ ವಿರುದ್ಧವಾಗಿದೆ. ಈ ಸಂದರ್ಭ ಡಿಎಂಕೆ ಶಾಸಕರನ್ನು ನಿಯಮ ಮೀರಿ ಬಲವಂತವಾಗಿ ಸದನದಿಂದ ಹೊರಗಿಡಲಾಗಿತ್ತು. ನಿಯಮವನ್ನು ಸರಿಯಾಗಿ ಪಾಲಿಸಿಲ್ಲ. ಆದ್ದರಿಂದ ಈಗ ಗೆದ್ದಿರುವ ವಿಶ್ವಾಸ ಮತವನ್ನು ರದ್ದುಗೊಳಿಸಬೇಕೆಂದು ರಾಜ್ಯಪಾಲರಲ್ಲಿ ವಿರೋಧ ಪಕ್ಷದ ನಾಯಕ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಆಗ್ರಹಿಸಿದೆ.
ವಿಶ್ವಾಸಮತ ಪ್ರಕ್ರಿಯೆ ನಡೆದ ರೀತಿ ಖಂಡಿಸಿ ಫೆ.22ರಿಂದ ತಮಿಳುನಾಡಿನಾದ್ಯಂತ ಡಿಎಂಕೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದೆ. ಮತ್ತೂಂದು ಬೆಳವಣಿಗೆಯಲ್ಲಿ ವಿಧಾನಸಭೆಯಲ್ಲಿ ಅನುಚಿತವಾಗಿ ದಾಂಧಲೆ ಎಬ್ಬಿಸಿದ್ದಕ್ಕಾಗಿ ಪ್ರತಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಮತ್ತು ಶಾಸಕರು, ಅನುಮತಿ ಪಡೆಯದೆ ಮರೀನಾ ಬೀಚ್‌ನಲ್ಲಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಡಿಎಂಕೆ ಸಂಸದರು ಮತ್ತು ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಶನಿವಾರ ಏನು ನಿರ್ಣಯ ಕೈಗೊಂಡಿದ್ದೆನೋ ಅದು ತಮಿಳುನಾಡು ವಿಧಾನಸಭೆ ನಿಯಮ ಪ್ರಕಾರವೇ ಇತ್ತು. ಅದರ ಅನ್ವಯ ವಿಶ್ವಾಸಮತ ಯಾಚನೆ ಸಂದರ್ಭ ರಹಸ್ಯ ಮತದಾನಕ್ಕೆ ಅವಕಾಶ ನೀಡುವುದು ಸಾಧ್ಯವೇ ಇಲ್ಲ.– ಪಿ.ಧನಪಾಲ್, ತಮಿಳುನಾಡು ವಿಧಾನಸಭೆ ಸ್ಪೀಕರ್