ಕಿನ್ನಿಗೋಳಿ: ಮೂಲ್ಕಿ ಸೀಮೆಯ ಕಾರಣಿಕ ಪುರುಷರಾಗಿ ಪೂಜಿಸಲ್ಪಡುತ್ತಿರುವ ಅವಳಿ ವೀರಪುರು ಷರಾದ ಕಾಂತಾಬಾರೆ ಬೂದಾಬಾರೆ ಅವರು ನ್ಯಾಯ ನೀತಿ, ಧರ್ಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ದೈವಾಂಶ ಸಂಭೂತರಾಗಿದ್ದಾರೆ. ಅವರ ದೈವಿಕ ಚಿಂತನೆಗಳು ನಮಗೆ ಮಾರ್ಗ ದರ್ಶಕವಾಗಿವೆ ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಹೇಳಿದರು.
ಅವರು ಗುರುವಾರ ಕಿನ್ನಿಗೋಳಿ ಸಮೀಪದ ಮೂಲ್ಕಿ ಒಂಬತ್ತು ಮಾಗಣೆಗೆ ಸಂಬಂಧಿಸಿದ ಅವಳಿ ವೀರ ಪುರುಷರಾದ ಶ್ರೀ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರ ಕೊಲ್ಲೂರಿನ ನಾಗಬ್ರಹ್ಮಸ್ಥಾನದಲ್ಲಿ ಚತುಃಪವಿತ್ರ ನಾಗ ಬ್ರಹ್ಮ ಮಂಡಲೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾ ಟಿಸಿ ಮಾತನಾಡಿದರು.
ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಭಕ್ತರ ಬೇಡಿಕೆಯಂತೆ ಇಲ್ಲಿನ ರಸ್ತೆಯನ್ನು ಡಾಮರೀಕರಣಗೊಳಿಸ ಲಾಗಿದೆ ಹಾಗೂ ಶಾಶ್ವತವಾಗಿ ಥೀಮ್ ಪಾರ್ಕ್, ಮ್ಯೂಸಿಯಂ, ಯಾತ್ರಿ ಕೇಂದ್ರ ನಿರ್ಮಾಣವಾಗಬೇಕು ಎಂಬ ಬೇಡಿಕೆಯ ಬಗ್ಗೆ ಸರಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಹೇಳಿದರು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ವಿದ್ವಾಂಸ ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಕಟೀಲು ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಶುಭ ಹಾರೈಸಿದರು.
ಕಾಪು ಶಾಸಕ ವಿನಯಕುಮಾರ ಸೊರಕೆ, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿಪುರಸ್ಕೃತ ಡಾ| ಪಿ. ಸಂಜೀವ ದಂಡಕೇರಿ,ನಿವೃತ್ತ ಅಸಿಸ್ಟೆಂಟ್ ಲೇಬರ್ ಕಮೀಷನರ್ ದೇವೇಂದ್ರ ಪೂಜಾರಿ, ತುಳುಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷಉಮಾನಾಥ ಕೋಟ್ಯಾನ್, ಚಲನಚಿತ್ರನಟ ಡಾ| ರಾಜಶೇಖರ ಕೋಟ್ಯಾನ್, ಬಳುRಂಜೆ ಗ್ರಾ.ಪಂ. ಅಧ್ಯಕ್ಷ ದಿನೇಶ್‌ಪುತ್ರನ್, ಸಮಿತಿಯ ಅಧ್ಯಕ್ಷ ದಾಮೋದರ ದಂಡಕೇರಿ, ಕೋಶಾಧಿಕಾರಿ ಹರೀಂದ್ರ ಸುವರ್ಣ, ಗೌರವ ಸಲಹೆಗಾರರಾದ ಬಿಪಿನ್ ಪ್ರಸಾದ್, ವಿನೋದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶೀನ ಡಿ. ಪೂಜಾರಿ, ಸಹಕೋಶಾಧಿಕಾರಿ ಕಿಶೋರ್ ಕುಮಾರ್ ದಂಡಕೇರಿ, ಲೆಕ್ಕಪರಿಶೋಧಕ ಚಂದ್ರಶೇಖರ್ ಜಿ. ಉಪಸ್ಥಿತರಿದ್ದರು.ಸಾಹಿತಿ ಮುದ್ದು ಮೂಡುಬೆಳ್ಳೆ, ದಿನೇಶ್ ಪೂಜಾರಿ, ಮಿಥುನ್ ರೈ, ಅಂತಪ್ಪ ನಾಯYರು ಗುಡ್ಡೆಸಾನ, ಗೋಪಾಲ ನಾಯYರು ಕಾರ್ನಾಡು, ಬಂಕಿ ನಾಯYರು ಹಳೆಯಂಗಡಿ ಅವರನ್ನು ಗೌರವಿಸಲಾಯಿತು.
ಸಮಿತಿಯ ಶೇಷಪ್ಪ ಕೋಟ್ಯಾನ್ ಪ್ರಸ್ತಾವನೆಗೈದರು. ಸಮಿತಿಯ ಧನಂಜಯ ಮಟ್ಟು ಸ್ವಾಗತಿಸಿದರು. ಕಾರ್ಯಧ್ಯಕ್ಷ ಗಂಗಾಧರ ಪೂಜಾರಿ ವಂದಿಸಿದರು.