ಸುಬ್ರಹ್ಮಣ್ಯ: ಸರ್ವ ಜನರ ಒಮ್ಮನಸ್ಸಿನ ಸಹ ಕಾರದಿಂದ ಒಳ್ಳೆಯ ಕಾರ್ಯವಾಗಲು ಸಾಧ್ಯ. ಜನರು ಜನ ಪ್ರತಿ ನಿಧಿಗಳೊಂದಿಗೆ ಕೈಜೋಡಿಸಿಕೊಂಡು ತಮ್ಮ ಊರಿನ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಬೇಕು. ಪ್ರತಿಯೊಬ್ಬರು ಕೂಡ ಮೂಲ ಸೌಕರ್ಯಗಳನ್ನು ಪಡೆಯುವಲ್ಲಿ ಪ್ರಯತ್ನಿಸ ಬೇಕು ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು.
ನಾಲ್ಕೂರು ಗ್ರಾಮದ ನಡುಗಲ್ಲಿನ ಚಾರ್ಮತ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕಾರ್ಜ ಎಂಬಲ್ಲಿ ನೂತನ ವಾಗಿ ನಿರ್ಮಾಣವಾಗಲಿರುವ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಈ ಯೋಜನೆಗೆ ನೀರಾವರಿ ಇಲಾಖೆಯಿಂದ 35 ಲಕ್ಷ ರೂ. ಬಿಡುಗಡೆಯಾಗಿದ್ದು ಶೀಘ್ರ ದಲ್ಲಿ ಕಾಮಗಾರಿ ಪೂರ್ಣಗೊಂಡು ಜನಬಳಕೆಯಾಗಲಿ ಎಂದು ಅವರು ಆಶಿಸಿದರು.
ಜಿ.ಪಂ. ಸದಸ್ಯೆ ಆಶಾತಿಮ್ಮಪ್ಪ, ತಾ.ಪಂ. ಸದಸ್ಯೆ ಯಶೋದಾ ಬಾಳೆಗುಡ್ಡೆ, ಮಾಜಿ ಜಿ.ಪಂ. ಅಧ್ಯಕ್ಷ ವೆಂಕಟ್ ದಂಬೆಕೋಡಿ, ಮಾಜಿ ತಾ.ಪಂ. ಅಧ್ಯಕ್ಷ ಕೇಶವ ಮುಳಿಯ, ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷ ಅಚ್ಯುತ ಗುತ್ತಿಗಾರು, ಉಪಾಧ್ಯಕ್ಷೆ ಸವಿತಾ ಕುಳ್ಳಾಂಪಾಡಿ, ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ, ಗ್ರಾ.ಪಂ, ಸದಸ್ಯರಾದ ವಿಜಯ್‌ಕುಮಾರ್ ಚಾರ್ಮತ, ಜಯಪ್ರಕಾಶ್ ಮೊಗ್ರ, ರಾಕೇಶ್ ಮೆಟ್ಟಿನಡ್ಕ, ಕಿಶೋರಿ ಚಾರ್ಮತ, ಅಮ್ಮಣಿ ನಡುಗಲ್ಲು, ಯಮಿತಾ ಪೈಕ, ಶ್ರೀದೇವಿ ಕೊಂಬೆಟ್ಟು, ಭಾಗೀರಥಿ, ಗುತ್ತಿಗಾರು ಪಿಡಿಒ ಶ್ಯಾಮಪ್ರಸಾದ, ನಡುಗಲ್ಲು ಯುವಕ ಮಂಡಲದ ಅಧ್ಯಕ್ಷ ಕೇಶರಾಜ್ ಹೊಸೊಳಿಕೆ, ಗುತ್ತಿಗೆದಾರ ಕುಂಞಂಬು ಪೆರ್ಲಂಪಾಡಿ, ಚಿದಾನಂದ ಕಂದಡ್ಕ, ಚಂದ್ರಶೇಖರ ಬಾಳುಗೋಡು, ವಸಂತ ಗೌಡ ಉತ್ರಂಬೆ, ಹರೀಶ್ ನಾಯ್ಕ ಅಂಜೇರಿ, ನವೀನ್ ಬಾಳುಗೋಡು, ಧನುಷ್ ನಡುಗಲ್ಲು, ಚೋಮಣ್ಣ ಗೌಡ ಉತ್ರಂಬೆ, ಶಿವಪ್ರಸಾದ್ ಹಲ್ಗುಜಿ, ಹರಿಶ್ಚಂದ್ರ ಕುಳ್ಳಾಂಪಾಡಿ, ಕೇಶವ ಕಾರ್ಜ, ವಿಶ್ವನಾಥ ಕುತ್ಯಾಳ, ಸೀತಮ್ಮ ದೋಳ್ತಿಲ, ಚಿನ್ನಪ್ಪ ಗೌಡ ಪಡ್ರೆ, ಬಾಲಕೃಷ್ಣ ಉಜಿರಡ್ಕ, ರಾಜೇಶ್ ಉತ್ರಂಬೆ, ಸುಬ್ರಹ್ಮಣ್ಯ ದೇರಪಜ್ಜನಮನೆ, ಶಿವರಾಮ ಉತ್ರಂಬೆ, ಅಜಿತ್ ಉತ್ರಂಬೆ, ಚಂದ್ರಾವತಿ ಉತ್ರಂಬೆ, ಶಾರದಾ ಕೊಂಬೆಟ್ಟು, ಮೋನಪ್ಪ ಗೌಡ ಕುತ್ಯಾಳ, ಪ್ರದೀಪ ಅಂಬೆಕಲ್ಲು, ಕಿಶೋರ್ ಉತ್ರಂಬೆ, ಮೋನಪ್ಪ ಗೌಡ ಉತ್ರಂಬೆ, ಪದ್ಮನಾಭ ಎಲೆತಡ್ಕ ಮತ್ತಿತರರು ಉಪಸ್ಥಿತರಿದ್ದರು. ವಿಜಯಕುಮಾರ ಚಾರ್ಮತ ಸ್ವಾಗತಿಸಿ, ನಿರೂಪಿಸಿದರು.