Advertisement

ದ್ರಾವಿಡ್‌, ಕಂಬಾರರನ್ನು ಭೇಟಿ ಮಾಡಿದ ನಡ್ಡಾ

11:24 PM Sep 22, 2019 | Lakshmi GovindaRaju |

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್‌ ಕಂಬಾರ ಅವರನ್ನು ರಾಜ್ಯ ಬಿಜೆಪಿ ನಾಯಕರ ಜತೆ ಸೇರಿ ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿ, ಕೇಂದ್ರ ಸರ್ಕಾರದ ಸಾಧನೆಯ ಪುಸ್ತಕ ನೀಡಿದರು. ವಿವಿಧ ರಾಜ್ಯದ ಗಣ್ಯರಿಗೆ ಕೇಂದ್ರ ಸರ್ಕಾರದ ಸಾಧನೆಯ ಪುಸ್ತಕ ನೀಡುವ ಕಾರ್ಯಕ್ರಮವನ್ನು ಬಿಜೆಪಿ ನಡೆಸಿಕೊಂಡು ಬರುತ್ತಿದೆ.

Advertisement

ಕೇಂದ್ರದ ನಾಯಕರು ಯಾರೇ ರಾಜ್ಯಕ್ಕೆ ಭೇಟಿ ನೀಡಿದರೂ, ಅವರನ್ನು ವಿವಿಧ ಕ್ಷೇತ್ರದ ಸಾಧಕರ ಮನೆಗೆ ಕರೆದುಕೊಂಡು ಹೋಗಿ, ಕೇಂದ್ರ ಸರ್ಕಾರದ ಸಾಧನೆಯ ಪುಸ್ತಕ ನೀಡುವ ಪರಿಪಾಠ ಬೆಳೆಸಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪ್ರವಾಸದಲ್ಲಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ಮಧ್ಯಾಹ್ನ ರಾಜ್ಯ ಬಿಜೆಪಿ ನಾಯಕರೊಂದಿಗೆ ಡಾಲರ್ ಕಾಲೋನಿಯಲ್ಲಿರುವ ಮಾಜಿ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರ ಮನೆಗೆ ಭೇಟಿ ನೀಡಿ, ಕೆಲಕಾಲ ಮಾತುಕತೆ ನಡೆಸಿದರು.

ಕೇಂದ್ರ ಸರ್ಕಾರದ ಕಳೆದ ಐದು ವರ್ಷ ಹಾಗೂ ಎರಡನೇ ಅವಧಿಯ ನೂರು ದಿನಗಳ ಸಾಧನೆಯ ಪುಸ್ತಕವನ್ನು ರಾಹುಲ್‌ ದ್ರಾವಿಡ್‌ಗೆ ನೀಡಿದರು. ನಂತರ, ಕತ್ರಿಗುಪ್ಪೆಯಲ್ಲಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್‌ ಕಂಬಾರರ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿ, ಕೇಂದ್ರದ ಸಾಧನೆಯ ಪುಸ್ತಕ ನೀಡಿದರು. ಈ ವೇಳೆ, ನಳಿನ್‌ ಕುಮಾರ್‌ ಕಟೀಲು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next