Advertisement
14 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿ ಯನ್ ನಡಾಲ್ ತನಗಿಂತ 11 ವರ್ಷ ಕಿರಿಯ ಆಟಗಾರರಾಗಿರುವ ಜ್ವೆರೇವ್ ಅವರನ್ನು ನಾಲ್ಕು ತಾಸು ಆರು ನಿಮಿಷಗಳ ಮ್ಯಾರಥಾನ್ ಹೋರಾಟದಲ್ಲಿ 4-6, 6-3, 6-7 (5-7), 6-3, 6-2 ಸೆಟ್‌ಗಳಿಂದ ಉರುಳಿಸಿ ಗೆಲುವಿನ ಸಂಭ್ರಮ ಆಚರಿಸಿದರು. ಮೂರನೇ ಸೆಟ್ ಅನ್ನು ಟೈಬ್ರೇಕರ್‌ನಲ್ಲಿ ಕಳೆದುಕೊಂಡ ಬಳಿಕ ಅದ್ಭುತ ಆಟವಾಡಿದ ನಡಾಲ್ ಸತತ ಎರಡು ಸೆಟ್ ಗೆದ್ದು 19ರ ಹರೆಯದ ಜ್ವೆರೇವ್ ಅವರಿಗೆ ಗೆಲುವು ನಿರಾಕರಿಸಿದರು.
ರಿಸಲಿದ್ದಾರೆ. ಮೊನ್‌ಫಿಲ್ಸ್ ಇನ್ನೊಂದು ಪಂದ್ಯದಲ್ಲಿ ಜರ್ಮನಿಯ ಫಿಲಿಪ್ ಕೊಹ್ಲ ಸೆð„ಬರ್ ಅವರನ್ನು 6-3, 7-6 (7-1), 6-4 ಸೆಟ್‌ಗಳಿಂದ ಉರುಳಿಸಿದರು. ಅಲೆಕ್ಸಾಂಡರ್ ಎಷ್ಟೊಂದು ಉತ್ತಮ ಆಟಗಾರ ಎಂಬುದು ಇಂದು ಎಲ್ಲರಿಗೂ ತಿಳಿ ಯಿತು. ಅವರೊಬ್ಬ ಈಗಿನ ಮತ್ತು ಭವಿಷ್ಯದ ತಾರೆ. ಇದೊಂದು ನನ್ನ ಪಾಲಿನ ಅತ್ಯಂತ ಕಠಿನ ಪಂದ್ಯವಾಗಿತ್ತು ಎಂದು ಪಂದ್ಯದ ಬಳಿಕ ನಡಾಲ್ ತಿಳಿಸಿದರು.
Related Articles
ಮೂರನೇ ಶ್ರೇಯಾಂಕದ ಕೆನಡದ ಮಿಲೋಸ್ ರೋನಿಕ್ ನಾಲ್ಕು ಸೆಟ್‌ಗಳ ಕಾದಾಟದಲ್ಲಿ ಫ್ರಾನ್ಸ್‌ನ ಗೈಲ್ಸ್ ಸಿಮೋನ್ ಅವರನ್ನು ಸೋಲಿಸಿ ನಾಲ್ಕನೇ ಸುತ್ತಿಗೇರಿದರು. ಜ್ವರದಿಂದ ಬಳಲುತ್ತಿದ್ದ ರೋನಿಕ್ ಈ ಕೂಟದಲ್ಲಿ ಮೊದಲ ಬಾರಿ ಸೆಟ್ ಒಂದನ್ನು ಕಳೆದುಕೊಂಡರು. ಆದರೆ ಅಮೋಘವಾಗಿ ಆಡಿದ ರೋನಿಕ್ 6-2, 7-6 (7-5), 3-6, 6-3 ಸೆಟ್‌ಗಳಿಂದ ಜಯ ಸಾಧಿಸಿ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಅವರು ಸ್ಪೇನ್‌ನ 13ನೇ ಶ್ರೇಯಾಂಕದ ರಾಬರ್ಟೊ ಬಾಟಿಸ್ಟ ಆಗುಟ್ ಅವರನ್ನು ಎದುರಿಸಲಿದ್ದಾರೆ. ಆಗುಟ್ ಇನ್ನೊಂದು ಪಂದ್ಯದಲ್ಲಿ ತನ್ನ ದೇಶದವರೇ ಆದ ಡೇವಿಡ್ ಫೆರರ್ ಅವರನ್ನು 7-5, 6-7 (6-8), 7-6 (7-3), 6-4 ಸೆಟ್‌ಗಳಿಂದ ಕೆಡಹಿದ್ದರು. ರೋನಿಕ್ ಕಳೆದ ವರ್ಷ ಇಲ್ಲಿ ಸೆಮಿಫೈನಲ್ ತಲುಪಿದ್ದ ಕೆನಡದ ಮೊದಲ ಆಟಗಾರ ಎಂದೆನಿಸಿಕೊಂಡಿದ್ದರು.
Advertisement
ಸೋಂಗ ನಾಲ್ಕನೇ ಸುತ್ತಿಗೆಫ್ರಾನ್ಸ್ನ ಜೋ ವಿಲ್ಫೆ†àಡ್ ಸೋಂಗ ಅವರು ಅಮೆರಿಕದ ಜ್ಯಾಕ್ ಸಾಕ್ ಅವರನ್ನು 7-6 (7-4), 7-5, 6-7 (8-10), 6-3 ಸೆಟ್‌ಗಳಿಂದ ಸೋಲಿಸಿ ನಾಲ್ಕನೇ ಸುತ್ತಿಗೇರಿದರು. ಅಲ್ಲಿ ಅವರು ಗ್ರೇಟ್ ಬ್ರಿಟನ್‌ನ ಡೇನಿಯಲ್ ಇವಾನ್ಸ್ ಅವರನ್ನು ಎದುರಿಸಲಿದ್ದಾರೆ. ಇವಾನ್ಸ್ ತನ್ನ 3ನೇ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಟೋಮಿಕ್ ಅವರನ್ನು ಕೆಡಹಿದ್ದರು. ಆಸ್ಟ್ರೀಯಾದ ಡೊಮಿನಿಕ್ ಥೀಮ್
ಮತ್ತು ಬೆಲ್ಜಿಯಂದ ಡೇವಿಡ್ ಗೋಫಿನ್ ನಾಲ್ಕನೇ ಸುತ್ತಿನಲ್ಲಿ ಪರಸ್ಪರ ಎದುರಾಗ ಲಿದ್ದಾರೆ.