ಮ್ಯಾಡ್ರಿಡ್: ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿದ್ಧಗೊಳ್ಳುವ ಹಿನ್ನೆಲೆಯಲ್ಲಿ ಮಹತ್ವದ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಕೂಟದಿಂದ ದೂರ ಉಳಿಯುವುದಾಗಿ ರಫೆಲ್ ನಡಾಲ್ ತಿಳಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಡಾಲ್ ಮತ್ತು ಫ್ರೆಂಚ್ ಓಪನ್ ಟೆನಿಸ್ ಚಾಂಪಿಯನ್ ಕಾರ್ಲೋಸ್ ಅಲ್ಕರಾಜ್ ಸ್ಪರ್ಧಿಸಲಿದ್ದಾರೆ ಎಂದು “ಸ್ಪೇನ್ ಟೆನಿಸ್ ಸಂಸ್ಥೆ’ ಘೋಷಿಸಿತ್ತು. ಇದರ ಬೆನ್ನಲ್ಲೇ ತಾನು ವಿಂಬಲ್ಡನ್‌ನಲ್ಲಿ ಆಡುವುದಿಲ್ಲ ಎಂದು ನಡಾಲ್ ಹೇಳಿದ್ದಾರೆ.
ರಫೆಲ್ ನಡಾಲ್ ಕಳೆದ ಫ್ರೆಂಚ್ ಓಪನ್ ಕೂಟದ ಮೊದಲ ಸುತ್ತಿನಲ್ಲೇ ಸೋತು ಹೊರ ಬಿದ್ದಿದ್ದರು. ಇದೇ ಅಂಕಣದಲ್ಲಿ ಒಲಿಂಪಿಕ್ಸ್ ಟೆನಿಸ್ ಪಂದ್ಯಗಳು ನಡೆಯಲಿವೆ. ನಡಾಲ್ ಮಣ್ಣಿನಂಕಣದಲ್ಲಿ ಗರಿಷ್ಠ ಪ್ರಶಸ್ತಿ ಗೆದ್ದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಹೀಗಾಗಿ ಒಲಿಂಪಿಕ್ಸ್ ನಲ್ಲಿ ನಡಾಲ್‌ಗೆ ಚಿನ್ನ ಗೆಲ್ಲುವ ಅತ್ಯುತ್ತಮ ಅವಕಾಶವಿದೆ ಎಂದು ಭಾವಿಸಲಾಗಿದೆ. ಇದು ನಡಾಲ್ ಪಾಲಿನ ಕೊನೆಯ ಒಲಿಂಪಿಕ್ಸ್ ಕೂಟವೂ ಆಗಿರುವ ಸಾಧ್ಯತೆ ಹೆಚ್ಚು.
ಜು. 26ರಂದು ಪ್ಯಾರಿಸ್ ಒಲಿಂಪಿಕ್ಸ್ ಆರಂಭವಾಗಲಿದೆ. ಜು. ಒಂದರಿಂದ 14ರ ವರೆಗೆ ವಿಂಬಲ್ಡನ್ ಟೆನಿಸ್ ಟೂರ್ನಿ ಲಂಡನ್‌ನಲ್ಲಿ ನಡೆಯಲಿದೆ.