Advertisement

ತುರ್ತು ಸಂಪರ್ಕಕ್ಕೆ ನಾಡದೋಣಿ: ಇಂದು ಚಾಲನೆ

12:52 AM Jun 14, 2020 | Sriram |

ಬೆಳ್ತಂಗಡಿ: ತಾಲೂಕಿನ ಬಂದಾರು ಗ್ರಾ.ಪಂ. ವ್ಯಾಪ್ತಿಯಿಂದ ಉಪ್ಪಿನಂಗಡಿ ತೆರಳಲು ಅನು ಕೂಲವಾಗುವಂತೆ ಮೊಗೇರಡ್ಕ ಎಂಬಲ್ಲಿ ನಿರ್ಮಾಣಗೊಂಡಿದ್ದ ತೂಗು ಸೇತುವೆ ಕಳೆದ ಮಳೆಗಾಲದಲ್ಲಿ ಕೊಚ್ಚಿ ಹೋಗಿದ್ದರಿಂದ ಇಲ್ಲಿನ ಮಂದಿಗೆ ಸಂಪರ್ಕ ಕಡಿತಗೊಂಡಿತ್ತು. ಇದಕ್ಕಾಗಿ ಶಾಸಕ ಹರೀಶ್‌ ಪೂಂಜ ಸ್ವಂತ ಖರ್ಚಿನಲ್ಲಿ ಪ್ರಸಕ್ತ ಮಳೆಗಾಲದಲ್ಲಿ ಎರಡು ಊರಿನ ಜನರ ಸಂಪರ್ಕಕ್ಕಾಗಿ ಶ್ರಮಿಕ ನೆರವು ನಾಡದೋಣಿ ಒದಗಿಸಿದ್ದಾರೆ. ಇದಕ್ಕೆ ಜೂ. 14ರಂದು ಚಾಲನೆ ನೀಡಲಿದ್ದಾರೆ.

Advertisement

ದೋಣಿ ಸಂಪರ್ಕ
ಬಂದಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಮೊಗೇರಡ್ಕದಲ್ಲಿರುವ ಈ ತೂಗು ಸೇತುವೆ ಕುಸಿತಗೊಂಡ ಕಾರಣದಿಂದ ಪುತ್ತೂರು ತಾಲೂಕು ಮತ್ತು ಬೆಳ್ತಂಗಡಿ ತಾಲೂಕಿನ ಎರಡು ಗ್ರಾಮಗಳ ಸಂಪರ್ಕಕ್ಕೆ ತೊಂದರೆಯಾಗಿದೆ. ಸೇತುವೆ ಇಲ್ಲದಿದ್ದರೆ 10 ಕಿ.ಮೀ. ಸುತ್ತಿ ಬಳಸಿ ಬರಬೇಕಿದೆ. ಇದನ್ನು ತಪ್ಪಿಸಲು ಸೇತುವೆ ನಿರ್ಮಾಣ ಅವಶ್ಯವಿದೆ ಎಂಬುದನ್ನು ಅರಿತು ಶಾಸಕ ಹರೀಶ್‌ ಪೂಂಜ ಜಲ ಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ನಾಡದೋಣಿ ಅನಿವಾರ್ಯ
ಸೇತುವೆ ನಿರ್ಮಾಣಕ್ಕೆ ಸಮಯವಕಾಶ ಬೇಕಿರುವುದರಿಂದ ಪ್ರಸಕ್ತ ಮಳೆಗಾಲಕ್ಕೆ ಇಲ್ಲಿನ ಮಂದಿಗೆ ತಾತ್ಕಾಲಿಕ ನೆಲೆಯಲ್ಲಿ ನಾಡದೋಣಿ ಅನಿವಾರ್ಯವಾಗಿದೆ. 9 ಜನ ಸಾಮರ್ಥ್ಯ ಹೊಂದಿರುವ ದೋಣಿ ನಿರ್ವಹಣೆ ಸ್ಥಳೀಯರಿಗೆ ನೀಡಲಾಗಿದೆ.ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳ ಸಂಪರ್ಕ ಕಲ್ಪಿಸುವ ಮುಗೇರಡ್ಕದಲ್ಲಿ 2013ರಲ್ಲಿ ಸುಳ್ಯದ ಗಿರೀಶ್‌ ಭಾರದ್ವಾಜ್‌ ಅವರ ನೇತೃತ್ವದಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ ತೂಗು ಸೇತುವೆ ನಿರ್ಮಾಣಗೊಂಡಿತ್ತು. ಈ ತೂಗುಸೇತುವೆ ಕಳೆದ ಕಳೆದ ಬಾರಿ ಆ. 9ರ ಪ್ರವಾಹ ಅಬ್ಬರಕ್ಕೆ ಕೊಚ್ಚಿ ಹೋಗಿತ್ತು.

ಸೇತುವೆ ಅಗತ್ಯವಿದ್ಯಾರ್ಥಿಗಳಿಗೆ, ಹೈನುಗಾರರಿಗೆ, ಕೂಲಿ ಕಾರ್ಮಿಕರಿಗೆ ಸೇತುವೆ ಅವಶ್ಯವಿದೆ. ಹತ್ತಾರು ಕಿ.ಮೀ. ಸುತ್ತಿಬಳಸಿ ಬರುವು ದನ್ನು ತಪ್ಪಿಸುವ ಸಲುವಾಗಿ ವ್ಯವಸ್ಥೆ ಕಲ್ಪಿಸ ಲಾಗಿದೆ. ಶಾಶ್ವತ ಸೇತುವೆ ನಿರ್ಮಾಣಕ್ಕೆ ಈಗಾಗಲೆ ಡಿಪಿಆರ್‌ ನಡೆಸಲಾಗಿದೆ.
– ಹರೀಶ್‌ ಪೂಂಜ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next