Advertisement

ಶಾಸಕ ನಡಹಳ್ಳಿ ದಾಸೋಹಕ್ಕೆ ಶ್ರೀಗಳ ಮೆಚ್ಚುಗೆ

05:54 AM May 17, 2020 | Suhan S |

ಮುದ್ದೇಬಿಹಾಳ: ಯಂಕಂಚಿಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಆಲಮೇಲ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಶನಿವಾರ ಇಲ್ಲಿನ ದಾಸೋಹ ನಿಲಯಕ್ಕೆ ಆಗಮಿಸಿ ಕೋವಿಡ್ ಸಂಕಷ್ಟದಲ್ಲಿ ಬಡವರ ನೋವಿಗೆ ಸ್ಪಂದಿಸುತ್ತಿರುವ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಮತ್ತು ಅವರ ಪತ್ನಿ ಮಹಾದೇವಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.

Advertisement

ಈ ವೇಳೆ ಸ್ವಾಮೀಜಿಗಳು ತಂದಿದ್ದ ಹೂಮಾಲೆ ಗಳನ್ನು ದಂಪತಿಗೆ ಹಾಕಿಸಿ ಪತಿ ಪತ್ನಿ ನಡುವಿನ ಅನ್ಯೋನ್ಯ ಬಾಂಧವ್ಯದ ಮಹತ್ವ ತಿಳಿಸಿಕೊಟ್ಟರು. ನಂತರ ಅವರ ಮೇಲೆ ಪುಷ್ಪವೃಷ್ಟಿಗೈದ ಶ್ರೀಗಳು, ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿ ಬರಲಿ ಎಂದು ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ಶಾಸಕರು, ಜನಸೇವೆ ಮಾಡಲು ಶ್ರೀಗಳ ಆಶೀರ್ವಾದ ಸದಾ ಹೀಗೆಯೇ ಇರಲಿ ಎಂದು ಕೇಳಿಕೊಂಡರು. ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಬಸಮ್ಮ ಸಿದರಡ್ಡಿ, ಸುಧಾ ಪಾಟೀಲ ಮತ್ತಿತರರು ಇದ್ದರು.

ಪ್ಯಾಕಿಂಗ್‌ ವೀಕ್ಷಣೆ: ದಾಸೋಹ ನಿಲಯದ ಆವರಣದಲ್ಲಿ ಬಡಜನರಿಗೆ ವಿತರಿಸಲು ತಯಾರಿಸಲಾಗುತ್ತಿರುವ ಆಹಾರ ಸಾಮಗ್ರಿ ಕಿಟ್‌ ಪ್ಯಾಕಿಂಗ್‌ ಕಾರ್ಯ ವೀಕ್ಷಿಸಿದ ಶ್ರೀಗಳು, ಇದುವರೆಗೆ 30,000 ಆಹಾರ ಸಾಮಗ್ರಿ ಕಿಟ್‌ ಹಂಚಿಕೆಯಾಗಿರುವುದನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲೆಲ್ಲ ತಿರುಗಾಡಿ ಆಹಾರ ಸಾಮಗ್ರಿಗಳನ್ನು ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next