Advertisement

ಸಮೀಕ್ಷೆಗೆ ಸಹಕರಿಸಲು ನಡಹಳ್ಳಿ ಮನವಿ

07:29 PM Jun 06, 2021 | Girisha |

ಮುದ್ದೇಬಿಹಾಳ: ಕೋವಿಡ್‌-19 ನಿಯಂತ್ರಣಕ್ಕಾಗಿ ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಸಮೀಕ್ಷೆಗೆ ಬಂದಾಗ ಗ್ರಾಮೀಣ ಜನರು ಸಹಕರಿಸಬೇಕು. ಅತಿರೇಕದಿಂದ, ಉದ್ಧಟತನದಿಂದ ನಡೆದುಕೊಂಡು ಅವರನ್ನು ಅವಮಾನಿಸಬಾರದು ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌ .ಪಾಟೀಲ ನಡಹಳ್ಳಿ ಮನವಿ ಮಾಡಿದರು.

Advertisement

ಹಡಲಗೇರಿ ಗ್ರಾಪಂ ಕಚೇರಿ ಆವರಣದಲ್ಲಿ ಜಿಪಂ, ತಾಪಂ, ಗ್ರಾಪಂ ವತಿಯಿಂದ ಏರ್ಪಡಿಸಿದ್ದ ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರಿಗೆ ಸೀರೆ, ಆಹಾರ ಧಾನ್ಯಗಳ ಕಿಟ್‌, ಗ್ರಾಪಂನಿಂದ ಡಸ್ಟ್‌ಬಿನ್‌ ಸೌಲಭ್ಯ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಮ್ಮ ಮನೆ ಮಠ ಬಿಟ್ಟು, ಕುಟುಂಬದ ಹಿತ ಕಡೆಗಣಿಸಿ ಇವರೆಲ್ಲರೂ ಜನರ ಆರೋಗ್ಯ ರಕ್ಷಣೆಗಾಗಿ ಕೆಲಸ ಮಾಡುತ್ತಿರುವುದರಿಂದ ಸರ್ಕಾರ ಇವರಿಗೆ ಕೋವಿಡ್‌ ಫ್ರಂಟ್‌ಲೆçನ್‌ ವಾರಿಯರ್‌ ಎಂದು ಗುರುತಿಸಿದೆ. ಇವರು ತಮ್ಮ ಕೆಲಸದಲ್ಲಿ ನಿರಾಸಕ್ತಿ ತೋರಿಸಿದರೆ ಕೊರೊನಾದಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತದೆ.

ಮನೆ ಮನೆಗೆ ತಿಳಿವಳಿಕೆ ನೀಡಲು ಬರುವ ಇವರಿಗೆ ಸಹಕರಿಸದಿದ್ದರೆ ಭವಿಷ್ಯದಲ್ಲಿ ತಲೆದೋರುವ ಅಪಾಯಕ್ಕೆ ಜನರೇ ಮುಂಚಿತವಾಗಿ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದರು. ಅಪ ಪ್ರಚಾರದಿಂದ ಲಸಿಕೆ ನಾಶ: ಕೊರೊನಾ ವಿರುದ್ಧ ಹೋರಾಡಲು ನಮ್ಮದೇ ಸ್ವದೇಶಿ ವಿಜ್ಞಾನಿಗಳು ಲಸಿಕೆ ಕಂಡು ಹಿಡಿದರು. ಪ್ರಧಾನಿ ನರೇಂದ್ರ ಮೋದಿಯವರು ಅದನ್ನು ಜನತೆಗೆ ಕಳಿಸಿ ಎಲ್ಲರ ಆರೋಗ್ಯ ರಕ್ಷಣೆಗೆ ಮುಂದಾಗಿದ್ದರು.

ಲಸಿಕೆ ಆರಂಭದ ಹಂತದಲ್ಲಿ ಕಾಂಗ್ರೆಸ್‌ ನಾಯಕರು ಇನ್ನಿಲ್ಲದಂತೆ ಲಸಿಕೆ ಬಗ್ಗೆ ಅಪ ಪ್ರಚಾರ ನಡೆಸಿದರು. ಲಸಿಕೆ ಹಾಕಿಸಿಕೊಂಡರೆ ಬಂಜೆತನ ಬರುತ್ತದೆ. ಶಕ್ತಿ ಕಡಿಮೆ ಆಗುತ್ತದೆ. ರೋಗ ಬಂದು ಜನ ಸಾಯ್ತಾರೆ ಎಂದೆಲ್ಲ ಬಿಂಬಿಸಿದರು. ಕೊನೆಗೆ ಪ್ರಧಾನಿಯವರೇ ಖುದ್ದು ಲಸಿಕೆ ಹಾಕಿಸಿಕೊಂಡು ಅಪಪ್ರಚಾರಕ್ಕೆ ಅಂತ್ಯ ಹಾಡಿದರು. ಆಗಿನಿಂದ ಈಗಿನವರೆಗೂ ಲಸಿಕೆ ಹಾಕಿಸಿಕೊಳ್ಳುವವರ ಮುಂಚೂಣಿ ಸಾಲಿನಲ್ಲಿ ಹಿಂದೆ ಅಪಪ್ರಚಾರ ಮಾಡಿದವರೇ ನಿಂತು ಲಸಿಕೆ ಹಾಕಿಸಿಕೊಂಡು ಆರಾಮಾಗಿದ್ದಾರೆ.

ಈಗಲಾದರೂ ಜನರು ಲಸಿಕೆಯ ಮಹತ್ವ ಅರಿತುಕೊಂಡು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಕೊರೊನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ನಿಯಮ ಪಾಲಿಸಿ: ಕೋವಿಡ್‌ ಗ್ರಾಮೀಣ ಭಾಗದಲ್ಲಿ ಹೆಚ್ಚಾಗತೊಡಗಿದೆ. ಇದರ ನಿಯಂತ್ರಣಕ್ಕೆ ಲಸಿಕೆ ಜತೆಗೆ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ಹಾಗೂ ಹ್ಯಾಂಡ್‌ ಸ್ಯಾನಿಟೈಸೇಷನ್‌ ನಿಯಮ ಪಾಲನೆ ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಜನ ಗುಂಪುಗೂಡುವ ಯಾವುದೇ ಕಾರ್ಯಕ್ರಮ ನಡೆಸಬಾರದು.

Advertisement

ಜಾತ್ರೆ, ಮದುವೆ ನಿಷೇ ಧಿಸಿದ್ದು ಎಲ್ಲರೂ ಆದೇಶ ಪಾಲಿಸಬೇಕು. ನಿಯಮ ಪಾಲಿಸುವುದರಿಂದ ಮಾತ್ರವೇ ಕೊರೊನಾ ನಿಯಂತ್ರಿಸಬಹುದು ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು. ತಹಶೀಲ್ದಾರ್‌ ಬಿ.ಎಸ್‌. ಕಡಕಭಾವಿ, ತಾಪಂ ಪ್ರಭಾರ ಇಒ ವೀರೇಶ ಹಿರೇಮಠ ಮಾತನಾಡಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಹರಿಂದ್ರಾಳ, ಉಪಾಧ್ಯಕ್ಷ ಅಬ್ದುಲ್‌ರಜಾಕ ಮೊಕಾಶಿ, ಸಿಪಿಐ ಆನಂದ ವಾಘೊ¾àಡೆ, ತಾಪಂ ಯೋಜನಾ  ಧಿಕಾರಿಯೂ ಆಗಿರುವ ಪಿಡಿಒ ಖೂಬಾಸಿಂಗ್‌ ಜಾಧವ, ಪಿಡಿಒ ಶೋಭಾ ಮುದಗಲ್‌, ಗ್ರಾಪಂ ಸದಸ್ಯರು ಸೇರಿ ಹಲವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next