Advertisement

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೊಳಗಿದ ನಾಡಗೀತೆ!; ಇತಿಹಾಸ ಸೃಷ್ಟಿ

03:40 PM Jun 24, 2017 | |

 ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಯ ಹಿಡಿತದಲ್ಲಿರುವ ಸದಾ ಕನ್ನಡ ವಿರೋಧಿ ಚಟುವಟಿಕೆಗಳಿಗೆ ಸಾಕ್ಷಿಯಾಗುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ  ಶನಿವಾರ ನಾಡಗೀತೆ ಮೊಳಗಿದ್ದು ಎಂಇಎಸ್‌ ಶಾಸಕರು , ಪಾಲಿಕೆ ಸದಸ್ಯರು ಎದ್ದು ನಿಂತು ಗೌರವ ಸೂಚಿಸಿದ್ದು ವಿಶೇಷವಾಗಿತ್ತು. 

Advertisement

ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಆಯುಕ್ತ ಎನ್‌.ಜಯರಾಂ ಅವರು ಕಾರ್ಯಕ್ರಮದ ಆರಂಭಕ್ಕೂ ಮುನ್ನ ನಾಡಗೀತೆ ಹಾಡುವಂತೆ ಆದೇಶಿಸಿದ್ದರು. 

ಜೈ ಭಾರತ ಜನನಿಯ ತನುಜಾತೆ…ಹಾಡು ಮೊಳಗಿದಾಗ ಎಂಇಎಸ್‌ ಶಾಸಕರು, ಪಾಲಿಕೆ ಸದಸ್ಯರೆಲ್ಲರು ಎದ್ದು ನಿಂತು ಗೌರವ ಸೂಚಿಸಿದರು. 

ಅಗೌರವ ತೋರಿದರೆ ಸದಸ್ಯತ್ವ ಅನರ್ಹವಾಗಬಹುದು, ಪಾಲಿಕೆ ಸೂಪರ್‌ ಸೀಡ್‌ ಆಗುವ ಭೀತಿಯಿಂದ ಗೌರವ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. 

ಕನ್ನಡ ಪರ ಸಂಘಟನೆಗಳ ಹೋರಾಟಗಾರರು ಈ ವಿದ್ಯಮಾನವನ್ನು ಬಹಳ ಸಂಭ್ರಮಿಸಿದ್ದು, ಜಿಲ್ಲಾಧಿಕಾರಿ ಜಯರಾಂ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next