Advertisement

ಬಂಧಿತ ಉಗ್ರ ಅಬು ಯೂಸುಫ್ ಗೆ ‘ಶೇಕಿಂಗ್ ಡೆಲ್ಲಿ’ ಟಾಸ್ಕ್ ನೀಡಿದ್ದ ಭಟ್ಕಳ ಮೂಲದ ಸಫಿ!

09:15 PM Aug 23, 2020 | Hari Prasad |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ತಡರಾತ್ರಿ ದೆಹಲಿ ಸ್ಪೆಷಲ್ ಸೆಲ್ ಪೊಲೀಸರ ಬಲೆಗೆ ಬಿದ್ದ ಐಸಿಸ್ ಉಗ್ರ ಅಬು ಯೂಸುಫ್ ಗೆ ಇಂಡಿಯನ್ ಮುಜಾಹುದ್ದೀನ್ ಉಗ್ರ ಭಟ್ಕಳ ಮೂಲದ ಸಫಿ ಅರ್ಮರ್ ಅಥವಾ ಯೂಸುಫ್ – ಅಲ್ -ಹಿಂದಿ ಜೊತೆ ಸಂಪರ್ಕವಿರುವುದು ಇದೀಗ ಪತ್ತೆಯಾಗಿದೆ.

Advertisement

ಕರ್ನಾಟಕದ ಭಟ್ಕಳ ಮೂಲದವನಾಗಿರುವ ಯೂಸಫ್-ಅಲ್-ಹಿಂದಿ ಅಫ್ಘಾನಿಸ್ಥಾನದಲ್ಲಿದ್ದುಕೊಂಡು ಪಾಕಿಸ್ತಾನದ ಐ.ಎಸ್.ಐ. ನೆರವಿನೊಂದಿಗೆ ಖೊರಾಸಮ್ ಮಾದರಿಯ ಇಸ್ಲಾಮಿಕ್ ಸ್ಟೇಟ್ ನಡೆಸುತ್ತಿದ್ದಾನೆ.

ಭಾರತದಲ್ಲಿ ಇಂಡಿಯನ್ ಮುಜಾಹುದ್ದೀನ್ ಉಗ್ರ ಸಂಘಟನೆಯ ಬುಡ ಅಲ್ಲಾಡುತ್ತಿದ್ದಂತೇ ಯೂಸುಫ್-ಅಲ್-ಹಿಂದಿ ತಲೆಮರೆಸಿಕೊಂಡಿದ್ದ ಐ.ಎಂ.ನ ಉಗ್ರರನ್ನೆಲ್ಲಾ ಒಗ್ಗೂಡಿಸಿಕೊಂಡು ಐ.ಎಸ್. ಖೋರಾಸಮ್ ಮಾದರಿಯನ್ನು ರೂಪಿಸಿಕೊಂಡು ಆ ಮೂಲಕ ಉಗ್ರಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದ್ದ ವಿಚಾರ ಇದೀಗ ಬಹಿರಂಗಗೊಂಡಿದೆ.

ಪಾಕಿಸ್ತಾನದ ಐ.ಎಸ್.ಐ.ನ ಸಂಪೂರ್ಣ ಬೆಂಬಲವನ್ನು ಹೊಂದಿರುವ ಈ ಐ.ಎಸ್. ಖೊರಾಸಮ್ ಗೆ ಇತ್ತೀಚೆಗೆ ನೀಡಲಾಗಿದ್ದ ಹೊಸ ಟಾಸ್ಕ್ ಎಂದರೆ ‘ಶೇಕಿಂಗ್ ಡೆಲ್ಲಿ’!

ಇದನ್ನೂ ಓದಿ: ಗುಂಡಿನ ಚಕಮಕಿ ಬಳಿಕ ದೆಹಲಿಯಲ್ಲಿ ಐಇಡಿ, ಗನ್ ಸಹಿತ ಐಸಿಸ್ ಉಗ್ರನ ಬಂಧನ

Advertisement

ಪಾಕಿಸ್ತಾನದ ಐ.ಎಸ್.ಐ.ನ ಸಂಪೂರ್ಣ ಬೆಂಬಲವನ್ನು ಹೊಂದಿರುವ ಈ ಐ.ಎಸ್. ಖೊರಾಸಮ್ ಗೆ ಇತ್ತೀಚೆಗೆ ನೀಡಲಾಗಿದ್ದ ಹೊಸ ಟಾಸ್ಕ್ ಎಂದರೆ ‘ಶೇಕಿಂಗ್ ಡೆಲ್ಲಿ’!

ಈ ಕಾರ್ಯಾಚರಣೆಗಾಗಿ ಯೂಸುಫ್-ಅಲ್-ಹಿಂದಿ ಆಯ್ಕೆ ಮಾಡಿಕೊಂಡಿದ್ದು ಉತ್ತರಪ್ರದೇಶದ ಬಲರಾಮ್ ಪುರದ ನಿವಾಸಿಯಾಗಿದ್ದ ಅಬು ಯೂಸುಫ್ ನನ್ನು. ಈತ ಭಾರತದಲ್ಲಿ ಚದುರಿಹೋಗಿರುವ ಇನ್ನಿತರ ಉಗ್ರರೊಂದಿಗೆ ಸಂಪರ್ಕವನ್ನು ಸಾಧಿಸಿಕೊಂಡು ರಾಷ್ಟ್ರ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

ಇದನ್ನೂ ಓದಿ: ಬಂಧಿತ ಐಸಿಸ್ ಉಗ್ರನಿಂದ 15 ಕೆಜಿ ಸ್ಫೋಟಕ, ಐಇಡಿ ವಶಕ್ಕೆ: ದೆಹಲಿಯಲ್ಲಿ ತಪ್ಪಿದ ಭಾರೀ ದುರಂತ

ಭಾರತೀಯ ಗುಪ್ತಚರ ಸಂಸ್ಥೆ ‘ರಾ’ಗೆ ಮೋಸ್ಟ್ ವಾಂಟೆಡ್ ವ್ಯಕ್ತಿಯಾಗಿರುವ ಯೂಸುಫ್-ಆ‍ಲ್-ಹಿಂದಿ, ದೂರದ ಅಫ್ಘಾನಿಸ್ಥಾನದಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳಲ್ಲಿ ಆಸಕ್ತಿ ಇರುವ ಮತ್ತು ಇಸ್ಲಾಮಿಕ್ ಸ್ಟೇಟ್ ಕಲ್ಪನೆಯಲ್ಲಿ ನಂಬಿಕೆ ಇರುವ ವ್ಯಕ್ತಿಗಳನ್ನು ದೇಶಾದ್ಯಂತ ಉಗ್ರ ಚಟುವಟಿಕೆಗಳನ್ನು ನಡೆಸಲು ಸಿದ್ಧಗೊಳಿಸುವ ಕಾರ್ಯದಲ್ಲೂ ನಿರತನಾಗಿದ್ದಾನೆ ಎಂಬ ಮಾಹಿತಿಯೂ ಇದೀಗ ಲಭ್ಯವಾಗಿದೆ.

ಯೂಸುಫ್-ಅಲ್-ಹಿಂದಿ ಭಾರತದಲ್ಲಿ ಉಗ್ರ ಚಟುವಟಿಕೆ ಒಲವುಳ್ಳ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಟೆಲಿಗ್ರಾಂ ಮತ್ತು ವಿಚ್ಯಾಟ್ ಗಳನ್ನು ಬಳಕೆ ಮಾಡುತ್ತಿದ್ದಾನೆಂಬ ಆತಂಕಕಾರಿ ಮಾಹಿತಿಯೂ ಇದೀಗ ಲಭ್ಯವಾಗಿದೆ.

ಇನ್ನೊಂದೆಡೆ, ಶುಕ್ರವಾರ ತಡರಾತ್ರಿ ದೆಹಲಿಯ ದೌಲಾ ಕೌನ್ ಪ್ರದೇಶದಲ್ಲಿ ಸೆರೆಸಿಕ್ಕ ಐ.ಎಸ್. ಉಗ್ರ ಅಬು ಯೂಸುಫ್ ಬಳಿಯಿಂದ 15 ಕೆ.ಜಿ.ಗಳಷ್ಟು ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ, ಉತ್ತರಪ್ರದೇಶದಲ್ಲಿರುವ ಈ ಬಂಧಿತ ಉಗ್ರನ ನಿವಾಸದಲ್ಲಿಯೂ ಐ.ಎಸ್. ಧ್ವಜ, ಸ್ಪೋಟಕಗಳು ಮತ್ತು ಆತ್ಮಾಹುತಿ ಪರಿಕರಗಳು ಲಭ್ಯವಾಗಿದ್ದು ಅವುಗಳನ್ನೆಲ್ಲಾ ಇದೀಗ ವಶಪಡಿಸಿಕೊಳ್ಳಲಾಗಿದೆ.

ಇಷ್ಟು ಮಾತ್ರವಲ್ಲದೆ ಬಲರಾಮ್ ಪುರದಲ್ಲಿರುವ ಅಬು ಯೂಸುಫ್ ನಿವಾಸದಲ್ಲಿ ಸಿಕ್ಕ ಇತರೇ ವಸ್ತುಗಳ ವಿವರ ಇಲ್ಲಿದೆ:

1. 3 ಸ್ಪೋಟಕಗಳನ್ನು ಹೊಂದಿದ್ದ ಒಂದು ಕಂದು ಬಣ್ಣದ ಜಾಕೆಟ್. ಈ ಸ್ಪೋಟಕಗಳನ್ನು ಇದೀಗ ನಿಷ್ಕ್ರಿಯಗೊಳಿಸಲಾಗಿದೆ.

2. ನಾಲ್ಕು ಸ್ಪೋಟಕಗಳನ್ನು ಒಳಗೊಂಡಿದ್ದ ಚೌಕ ವಿನ್ಯಾಸವನ್ನು ಹೊಂದಿದ್ದ ಒಂದು ನೀಲಿ ಬಣ್ಣದ ಜಾಕೆಟ್. ಈ ಸ್ಪೋಟಕಗಳನ್ನು ಇದೀಗ ನಿಷ್ಕ್ರಿಯಗೊಳಿಸಲಾಗಿದೆ.

3. ಅಂದಾಜು ಮೂರು ಕೆ.ಜಿ.ಗಳಷ್ಟು ಸ್ಪೋಟಕಗಳನ್ನು ಒಳಗೊಂಡಿದ್ದ ಒಂದು ಚರ್ಮದ ಬೆಲ್ಟ್.

4. ನಾಲ್ಕು ವಿವಿಧ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಕಟ್ಟಿರಿಸಲಾಗಿದ್ದ 8-9 ಕೆ.ಜಿ. ತೂಕದ ಸ್ಪೋಟಕಗಳು.

5. ಸ್ಪೋಟಕ ಮತ್ತು ಎಲೆಕ್ಟ್ರಿಕ್ ವಯರ್ ಗಳಿದ್ದ ಮೂರು ಸಿಲಿಂಡರ್ ಮೆಟಲ್ ಬಾಕ್ಸ್ ಗಳು.

6. ಬಾಲ್ ಬೇರಿಂಗ್ ಅಳವಡಿಸಿದ್ದ ಎರಡು ಸಿಲಿಂಡರ್ ಮೆಟಲ್ ಬಾಕ್ಸ್ ಗಳು.

7. ಒಂದು ಐಸಿಸ್ ಧ್ವಜ

8. ತಲಾ 4 ವ್ಯಾಟ್ ಸಾಮರ್ಥ್ಯದ ಎರಡು ಲಿಥಿನಿಯಂ ಬ್ಯಾಟರಿಗಳು.

9. 9 ವ್ಯಾಟ್ ಸಾಮರ್ಥ್ಯದ ಒಂದು ಲಿಥಿನಿಯಂ ಬ್ಯಾಟರಿ.

Advertisement

Udayavani is now on Telegram. Click here to join our channel and stay updated with the latest news.

Next