ಐನಾಪುರ: ಐನಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ರಾಜ್ಯ ನಬಾರ್ಡ್ ಬ್ಯಾಂಕಿನ ಹಿರಿಯ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಕಾಗದ ಪತ್ರ ಪರಿಶೀಲಿಸಿ ಮೆಚ್ಚುಗೆ ವ್ಯಕ್ತ ಪಡಿಸಿತು.
ಸಂಘಕ್ಕೆ ನಬಾರ್ಡ್ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಆರ್.ಎಸ್. ದೂದಿಹಾಳ, ಮೋಹನ ಬಾಬು, ಶ್ರೀಮತಿ ಶಂಕರ, ಬೆಳಗಾವಿ ಡಿಸಿಸಿ ಬ್ಯಾಂಕ್ ಉಪಪ್ರಧಾನ ವ್ಯವಸ್ಥಾಪಕ ಎನ್.ಜಿ. ಕಲಾವಂತ, ಅಥಣಿ ತಾಲೂಕು ಡಿಸಿಸಿ ಬ್ಯಾಂಕ್ ನಿಯಂತ್ರಣಾಧಿ ಕಾರಿ ಶಂಕರ ನಂದೇಶ್ವರ ಭೇಟಿ ನೀಡಿ ಎರಡು ಶಾಖೆಯ ವ್ಯವಸ್ಥೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಾಖೆ, ಕಟ್ಟಡ, ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ವಿತರಿಸಲಾಗುತ್ತಿರುವ ಬೀಜ, ರಸಗೊಬ್ಬರ ವಿತರಣೆ ಗೋದಾಮು, ಸಾರ್ವಜನಿಕರಿಗೆ ವಿತರಿಸುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸುಸಜ್ಜಿತವಾಗಿ ನಿರ್ಮಿಸಿದ ಉದ್ಯಾನವನ ವೀಕ್ಷಿಸಿ ಅಧಿ ಕಾರಿಗಳು ಮೆಚ್ಚುಗೆ ಸೂಚಿಸಿದರು.
ನಬಾರ್ಡ್ ಹಿರಿಯ ಅಧಿಕಾರಿ ಆರ್.ಎಚ್. ದೂದಿಹಾಳ ಮಾತನಾಡಿ, ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ 115 ವರ್ಷಗಳ ಹಳೆಯದಾದ ಸಂಸ್ಥೆಯೊಂದು ಸಾರ್ವಜನಿಕರು ಹಾಗೂ ರೈತರಿಗೆ ಇಷ್ಟೊಂದು ಸೌಲಭ್ಯ ನೀಡುತ್ತಿರುವ ಆಡಳಿತ ಮಂಡಳಿ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಈ ಸಂಸ್ಥೆ ದೊಡ್ಡದಾದ ಗೋದಾಮು ನಿರ್ಮಿಸಲು ಮುಂದಾದರೆ ನಬಾರ್ಡ್ ವತಿಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದೆಂದು ಹೇಳಿದರು.
ಈ ವೇಳೆ ಪಿಕೆಪಿಎಸ್ ಅಧ್ಯಕ್ಷ ಕುಮಾರ ಅಪರಾಜ, ಉಪಾಧ್ಯಕ್ಷ ಆದಿನಾಥ ದಾನೊಳ್ಳಿ, ಮುಖ್ಯಕಾರ್ಯನಿರ್ವಾಹಕ ಅಣ್ಣಾಸಾಬ ಜಾಧವ, ಆಡಳಿತ ಮಂಡಳಿ ಸದಸ್ಯರಾದ ರಾಜೇಂದ್ರ ಪೋತದಾರ, ಅಣ್ಣಾಸಾಬ ಡೂಗನವರ, ಸತೀಶ ಗಾಣಿಗೇರ, ಪ್ರವೀಣ ಕುಲಕರ್ಣಿ, ಭೂಪಾಲ ಮಾನಗಾಂವೆ, ಮಹಾದೇವ ಬೇರಡ, ವರ್ಷಾ ಪಾಟೀಲ, ಡಿಸಿಸಿ ಬ್ಯಾಂಕ್ ಶಾಖಾಧಿ ಕಾರಿ ಎಂ.ಎ, ಮಾಳಿ, ಆಧಿಕಾರಿಗಳಾದ ಎಂ.ಆರ್. ಐಗಳಿ, ಡಿ.ಎಸ್. ತೆಲಸಂಗ, ಎಸ್.ಎಸ್. ಆಜೂರ, ಬಿ.ಡಿ. ಕಾಂಬಳೆ, ಪಿಕೆಪಿಎಸ್ ಸಂಘದ ವಿರೂಪಾಕ್ಷ ಡೂಗನವರ, ಬಸವರಾಜ ಜೀರಗಾಳೆ ಇದ್ದರು.