Advertisement
ಸ್ವಾತಂತ್ರ್ಯೋತ್ಸವದ ತಾಳಮದ್ದಳೆಯ ರೂವಾರಿ ಉಡುಪಿಯ ಸುಧಾಕರ ಆಚಾರ್ಯರ ಸಂಕಲ್ಪದಂತೆ ಪ್ರಸಿದ್ಧ ಪ್ರಸಂಗಕರ್ತ ತಾಳಮದ್ದಳೆ ಅರ್ಥಧಾರಿ ಪ್ರೊ| ಪವನ್ ಕಿರಣಕೆರೆ ಪರಿಕಲ್ಪನೆಯಲ್ಲಿ ಈ ಪ್ರಸಂಗ ಮೂಡಿ ಬರಲಿದೆ. ನವರಾತ್ರಿಯಂದು ಶ್ರೀಕ್ಷೇತ್ರ ಕಟೀಲಿನಲ್ಲಿ ಶ್ರೀ ಶೀರೂರು ಶ್ರೀಪಾದರು, ಅರ್ಚಕರಾದ ಆಸ್ರಣ್ಣರು, ನವ ಕನ್ನಿಕಾ ಮುತ್ತೈದೆಯರ ಉಪಸ್ಥಿತಿಯಲ್ಲಿ ವೀಳ್ಯ ಪ್ರದಾನ ಪೂರೈಸಿ, ಪ್ರಸಂಗ ರಚನೆಗೆ ಸಿದ್ಧತೆ ನಡೆಸಿದೆ.
ಸಮಾಜಮುಖಿ ಕಾರ್ಯಕ್ರಮ ಗಳನ್ನು ಸಂಘಟಿಸುವ ಮುನ್ನೋಟವನ್ನು ಇರಿಸಿಕೊಂಡು ಹುಟ್ಟಿದ ಉಡುಪಿಯ “ಸುಶಾಸನ’ ಸತ್ವಪೂರ್ಣ ಸಂದೇಶಗಳಿಂದ ಸಮಾಜವನ್ನು ನೇರ್ಪುಗೊಳಿಸಲು ವಾš¾ಯ ಲೋಕದ ಪ್ರಬಲ ಹಾಗೂ ಪರಿಣಾಮಕಾರಿ ಕಲಾಮಾಧ್ಯಮವಾದ ತಾಳಮದ್ದಳೆಯನ್ನು ಆಯ್ದುಕೊಂಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಸ್ತುತಗೊಂಡ ಪ್ರೊ| ಕಿರಣಕೆರೆ ಪರಿಕಲ್ಪಿತ ಕಾಶ್ಮೀರ ವಿಜಯದ ಯಶಸ್ಸೇ ನಾರೀ ಶಕ್ತಿಯ ಸಂಕಲ್ಪಕ್ಕೆ ಕಾರಣವಾಯಿತು ಎಂದು ಸಂಯೋಜಕ ಸುಧಾಕರ ಆಚಾರ್ಯ ತಿಳಿಸಿದ್ದಾರೆ.