ನಂಜನಗೂಡು : ದುಷ್ಕರ್ಮಿಗಳ ತಂಡವೊಂದು ಯುವನಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾದ ಘಟನೆ ತಾಲೂಕಿನ ಹಡೆಯಾಲ ಸಮೀಪದ ಈರೆಗೌಡನ ಹುಂಡಿ ಬಳಿಯ ನಿರ್ಜನ ಪ್ರದೇಶದಲ್ಲಿ ರವಿವಾರ ನಡೆದಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ದಾರಿ ಹೋಕರು ಕಂಡು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ, ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಹುಲ್ಲಹಳ್ಳಿ ಪಿಎಸ್ ಐ ಮಹೇಶ್ ಕುಮಾರ್ ರಕ್ತದ ಮಡುವಿನಲ್ಲಿ ಬಿದ್ದು ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಯುವನನ್ನು ಕೂಡಲೇ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿವರ : ಗುಂಡ್ಲುಪೇಟೆಯಿಂದ ಇಬ್ಬರು ವ್ಯಕ್ತಿಗಳ ಜೊತೆ ಈ ಯುವಕನೂ ಒಂದೇ ಬೈಕ್ ನಲ್ಲಿ ಬಂದಿದ್ದಾನೆ ಎನ್ನಲಾಗಿದೆ. ಹಡೆಯಾಲ ಸಮೀಪದ ಈರೆಗೌಡನ ಹುಂಡಿ ಬಳಿಯ ನಿರ್ಜನ ಪ್ರದೇಶಕ್ಕೆ ಬಂದ ವೇಳೆ ಯುವಕನ ಕತ್ತು ಹಾಗೂ ಹಿಮ್ಮಡಿಗಳನ್ನ ಕೊಯ್ದು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ :ನೀರಾವರಿ ಯೋಜನಾ ಕಾಮಗಾರಿ ವಿಳಂಬತೆಗೆ ದಂಡ ಹಾಕಲು ನಿರ್ಧಾರ: ಕಾರಜೋಳ
ಗಂಭೀರ ಗಾಯಗೊಂಡ ಯುವಕ ಕೂಗಲಾಗದೆ, ನಡೆಯಲೂ ಆಗದೆ ತೆವಳಿಕೊಂಡೆ ನಾಗಣಾಪುರ ಮುಖ್ಯರಸ್ತೆಗೆ ಬಂದಿದ್ದಾನೆ. ಈ ವೇಳೆ ಜಮೀನಿಗೆ ತೆರಳುತ್ತಿದ್ದ ಅಲ್ಲಿನ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಕಂಡು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಈ ವೇಳೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ ಐ ಮಹೇಶ್ ಕುಮಾರ್ ಗಾಯಗೊಂಡು ನರಳುತ್ತಿದ್ದ ಯುವಕನನ್ನ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಿ ಅಲ್ಲಿ ಅತನ ಚಿಕೀತ್ಸೆಗೆ ಎಲ್ಲ ಕ್ರಮ ಕೈಗೊಂಡರು.