Advertisement

Actress: “ಇಸ್ರೇಲ್‌ನಲ್ಲಿ ನನ್ನ ಸಂಬಂಧಿಗಳು ಭೀಕರವಾಗಿ ಹತ್ಯೆಯಾಗಿದ್ದಾರೆ..” ಭಾವುಕರಾದ ನಟಿ

05:15 PM Oct 10, 2023 | Team Udayavani |

ಮುಂಬಯಿ: ಇಸ್ರೇಲ್‌ – ಪ್ಯಾಲೆಸ್ತೀನ್‌ ಯುದ್ಧದಿಂದ ಅಪಾರ ಹಾನಿ ಆಗುವುದರ ಜೊತೆಗೆ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಕಡೆ ಗುಂಡಿನ ಸದ್ದು, ಇನ್ನೊಂದೆಡೆ ದುಃಖದ ಕೂಗು. ಎರಡೂ ಕೂಡ ಯುದ್ಧ ಭೂಮಿಯಲ್ಲಿ ಕೇಳುತ್ತಿದೆ.

Advertisement

ಬಾಲಿವುಡ್‌ ನಟಿಯೊಬ್ಬರು ಇಸ್ರೇಲ್‌ಗೆ ತೆರಳಿ ಕೆಲಕಾಲ ಅಲ್ಲಿ ಸಿಲುಕಿಕೊಂಡು ವಾಪಾಸ್‌ ಆಗಿದ್ದರು. ಇದೀಗ ಮತ್ತೊಬ್ಬ ನಟಿಯ ಕುಟುಂಬದ ಸದಸ್ಯರು ಯುದ್ಧದಲ್ಲಿ ಪ್ರಾಣತೆತ್ತಿದ್ದಾರೆ.

ಹಿಂದಿ ಕಿರುತೆರೆ ನಟಿಯಾಗಿರುವ, ʼನಾಗಿನ್ʼ ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದಿರುವ  ಮಧುರಾ ನಾಯ್ಕ್ ಅವರು ತನ್ನ ಸೋದರ(ಕಸಿನ್) ತಂಗಿ ಮತ್ತು ಸೋದರ ಮಾವನವರು ಭೀಕರವಾಗಿ ಕೊಲೆಯಾಗಿದ್ದಾರೆ ಎಂದು ತನ್ನ ಪೋಸ್ಟ್‌ ನಲ್ಲಿ ಹೇಳಿದ್ದಾರೆ.

ಇಸ್ರೇಲ್‌ನಲ್ಲಿ ಅವರ ಮಕ್ಕಳ ಕಣ್ಣುಗಳ ಮುಂದೆಯೇ ಇಬ್ಬರನ್ನು ಕೊಲ್ಲಲಾಯಿತು ಎಂದು ಅವರು ಹೇಳಿದ್ದಾರೆ. ಇಸ್ರೇಲ್‌ನಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

“ನನ್ನ ಸಹೋದರಿ ಮತ್ತು ಅವಳ ಪತಿಯನ್ನು ಪ್ಯಾಲೆಸ್ತೀನ್ ಉಗ್ರರು ಮಕ್ಕಳ ಮುಂದೆ ಬರ್ಬರವಾಗಿ ಹತ್ಯೆ ಮಾಡಿದ್ದಾರೆ” ಎಂದು ಇನ್ಸ್ಟಾಗ್ರಾಮ್‌ ನಲ್ಲಿ ಬರೆದುಕೊಂಡಿದ್ದಾರೆ.

Advertisement

ಭಾರತದಲ್ಲಿ ವಾಸಿಸುತ್ತಿರುವ , ಯಹೂದಿ (ಪೂರ್ವಜರು ವಲಸೆ ಬಂದಿದ್ದರು) ಆಗಿರುವ ಮಧುರಾ ತನ್ನ ಸಹೋದರಿ ಹತ್ಯೆ ವಿಚಾರ ಹಂಚಿಕೊಂಡ ಬಳಿಕ ಅನೇಕರು ನಟಿ ಯಹೂದಿ ಆಗಿರುವುದಕ್ಕೆ ಅವರ ಮೇಲೆ ನಾನಾ ಕಮೆಂಟ್ ಮಾಡುತ್ತಿದ್ದಾರೆ ಎಂದು ಮಧುರಾ ಹೇಳಿದ್ದಾರೆ.

ನಾನು ಯಾವುದೇ ರೀತಿಯ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ ಮತ್ತು ಇಸ್ರೇಲ್‌ನಲ್ಲಿರುವ ಜನರಿಗಾಗಿ ಮತ್ತು ಬಲಿಪಶುಗಳ ಕುಟುಂಬಗಳಿಗಾಗಿ ಪ್ರಾರ್ಥಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕಸೌತಿ ಜಿಂದಗಿ ಕೇ, ಉತ್ತರಾನ್, ಪ್ಯಾರ್ ಕಿ ಯೇ ಏಕ್ ಕಹಾನಿ, ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂನ್? ಮುಂತಾದ ಸೀರಿಯಲ್‌ ನಲ್ಲಿ ಮಧುರಾ ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next