Advertisement

ವಿಶ್ವ ವಿದ್ಯಾಲಯಗಳಿಗೆ ನ್ಯಾಕ್‌ ಮಾನ್ಯತೆ ಕಡ್ಡಾಯ

01:38 PM Aug 30, 2022 | Team Udayavani |

ಕಲಬುರಗಿ: ಮುಂಬರುವ ದಿನಗಳಲ್ಲಿ ನ್ಯಾಕ್‌ ಮಾನ್ಯತೆ ಹೊಂದುವುದು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ, ವಿವಿಗಳಿಗೆ ಕಡ್ಡಾಯವಾಗಲಿದೆ. ಅದಕ್ಕಾಗಿ ಅತ್ಯಂತ ಜಾಗರೂಕವಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ|ಬಟ್ಟು ಸತ್ಯನಾರಾಯಣ ಹೇಳಿದರು.

Advertisement

ಗುಲ್ಬರ್ಗ ವಿವಿಯಲ್ಲಿ ಸೋಮವಾರ ಆಯೋಜಿಸಿದ್ದ ನ್ಯಾಕ್‌ ಕುರಿತು ಒಂದು ದಿನದ ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನ್ಯಾಕ್‌ ಮಾನ್ಯತೆ ಎನ್ನುವುದು ಸರಕಾರದ ಅಭಯವೂ ಇದ್ದಂತೆ. ಆ ಮುಖೇನ ವಿವಿಗಳಲ್ಲಿ ನಡೆಯುವ ಎಲ್ಲ ಶೈಕ್ಷಣಿಕ ಕಾರ್ಯಗಳಿಗೆ ಒಳ್ಳೆಯ ಅರ್ಹತೆ ಮತ್ತು ಇಲ್ಲಿ ಶಿಕ್ಷಣ ಪಡೆದು ವಿದ್ಯಾರ್ಥಿಗಳಿಗೆ ದೇಶದ ಉದ್ದಗಲಕ್ಕೂ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ವಿಶೇಷ ಗಮನಿಕೆ ಸಿಗುತ್ತದೆ. ನ್ಯಾಕ್‌ ಪಡೆದುಕೊಳ್ಳಲು ದಾಖಲೆಗಳು ಅತ್ಯಂತ ಮಹತ್ವದ ಪಾತ್ರವಹಿಸಲಿವೆ. ಆ ನಿಟ್ಟಿನಲ್ಲಿ ಗುವಿವಿ ಅಡಿಯಲ್ಲಿ ಬರುವ ಎಲ್ಲ ಕಾಲೇಜುಗಳ ಮಾಹಿತಿ, ವಿದ್ಯಾರ್ಥಿಗಳ ಪ್ರಗತಿ, ಶಿಕ್ಷಕರ ಶೈಕ್ಷಣಿಕ ಅರ್ಹತೆ ಮತ್ತು ಕಲಿಕೆಯ ಗುಣಮಟ್ಟದ ದಾಖಲೆಗಳನ್ನು ಸಜ್ಜು ಮಾಡುವುದೇ ದೊಡ್ಡ ಚಾಲೆಂಜ್‌ ಎಂದರು.

ಅಧ್ಯಕ್ಷತೆ ವಹಿಸಿದ್ದ ಗುವಿವಿ ಕುಲಪತಿ ಪ್ರೊ| ದಯಾನಂದ ಅಗಸರ್‌ ಮಾತನಾಡಿ, ನಾವು ಈಗಾಗಲೇ ಬಹುತೇಕ ಕೆಲಸವನ್ನು ಪೂರ್ಣ ಮಾಡಿದ್ದೇವೆ. ಖಂಡಿತವಾಗಿ ಈ ಬಾರಿ ನ್ಯಾಕ್‌ 4ನೇ ಸೈಕಲ್‌ ತಲುಪಲಿದ್ದೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ನ್ಯಾಕ್‌ ಹೊಂದಲು ಈಗಾಗಲೇ ವಿವಿ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಅನುಭವ ಮತ್ತು ತಿಳಿವು ಇರುವ ಪ್ರೋಫೆಸರ್‌ಗಳು ಇದ್ದಾರೆ. ಎಲ್ಲ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಡಿಸೆಂಬರ್‌ ಒಳಗೆ ನಾವು ನ್ಯಾಕ್‌ ಮಾನ್ಯತೆಗೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ ಎಂದರು.

ಗುಲ್ಬರ್ಗ ವಿವಿ ಕುಲಸಚಿವ ಪ್ರೊ| ವಿ.ಟಿ. ಕಾಂಬಳೆ ಸ್ವಾಗತಿಸಿದರು. ಐಕ್ಯೂಐಸಿ ನಿರ್ದೇಶಕ ಪ್ರೊ| ಬಿ.ಆರ್‌. ಕೆರೂರ್‌ ಪ್ರಾಸ್ತಾವಿಕ ಮಾತನಾಡಿದರು. ಉಪ ನಿರ್ದೇಶಕ ಡಾ.ಸುರೇಶ ಜಂಗೆ ವಂದಿಸಿದರು. ಗುಲ್ಬರ್ಗ ವಿವಿ ವ್ಯಾಪ್ತಿಯ ಮಹಾವಿದ್ಯಾಲಯಗಳ ಪೈಕಿ ಸುಮಾರು 170 ಜನ ಪ್ರಾಚಾರ್ಯರು, ಐಕ್ಯೂಐಸಿ ನಿರ್ದೇಶಕರು ಪಾಲ್ಗೊಂಡಿದ್ದರು. ವಿದ್ಯಾವಿಷಯಕ್‌ ಸದಸ್ಯ ರಮೇಶ ಧುತ್ತರಗಿ, ಪ್ರೊ| ಚಂದ್ರಕಾಂತ ಕೆಳಮನಿ, ನ್ಯಾಕ್‌ ಸಹಾಯಕ ಸಲಹೆಗಾರ ಡಾ. ಡಿ.ಕೆ.ಕಾಂಬ್ಳೆ ಇತರರು ಇದ್ದರು.

Advertisement

ಕಳೆದ ಬಾರಿಯಂತೆ ಈ ಬಾರಿಯೂ ನಾವು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಅರ್ಹ ಸಿಬ್ಬಂದಿ, ಪ್ರಾಧ್ಯಾಪಕರು ಇದ್ದು, ಹಲವಾರು ಚಟುವಟಿಕೆಗಳ ಮೂಲಕ ಶೈಕ್ಷಣಿಕ ಪ್ರಗತಿ ದಾಖಲಿಸಲಾಗಿದೆ. ಆ ಆಧಾರದಲ್ಲಿ ನಾವು ನ್ಯಾಕ್‌ ಸಮಿತಿಯ ಸೈಕಲ್‌ ತಲುಪುತ್ತೇವೆ ಎನ್ನುವ ಭರವಸೆ ನನಗಿದೆ. ಪ್ರೊ| ದಯಾನಂದ ಅಗಸರ್ಗುವಿವಿ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next