Advertisement

ಆಳ್ವಾಸ್‌ ಕಾಲೇಜಿಗೆ ನ್ಯಾಕ್‌ “ಎ’ಗ್ರೇಡ್‌ ಮಾನ್ಯತೆ

10:21 AM Jun 16, 2019 | keerthan |

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್‌ ಕಾಲೇಜಿಗೆ ಯುಜಿಸಿ “ನ್ಯಾಕ್‌’ ಸಂಸ್ಥೆಯು “ಎ’ ಗ್ರೇಡ್‌ ಮಾನ್ಯತೆ ನೀಡಿದೆ. ಹೊಸ ಮಾನ್ಯತಾ ಕ್ರಮ ದಲ್ಲಿ ಸಿಜಿಪಿಎ 3.23 ಪಡೆದಿದ್ದು, ಈ ಮಾನ್ಯತೆ 5 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

21 ವರ್ಷಗಳ ಹಿಂದೆ 28 ವಿದ್ಯಾರ್ಥಿ ಗಳು, 2 ಕೋರ್ಸುಗಳೊಂದಿಗೆ ಆರಂಭ ವಾದ ಆಳ್ವಾಸ್‌ ಕಾಲೇಜು ಈಗ 18 ಪದವಿ, 22 ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಹೊಂದಿದ್ದು, ಮಂಗಳೂರು ವಿವಿಯ 210 ಕಾಲೇಜುಗಳ ಪೈಕಿ ಗರಿಷ್ಠ 4,260 ವಿದ್ಯಾರ್ಥಿಗಳನ್ನು ಹೊಂದಿದೆ. “ಎ’ ಗ್ರೇಡ್‌ ಮಾನ್ಯತೆಯಿಂದ ಸಂಶೋಧನ ಕಾರ್ಯಗಳಿಗೆ ಸಹಕಾರಿಯಾಗಲಿದ್ದು, ಕಾಲೇಜಿನ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಯಲ್ಲಿ ತೊಡ ಗಿಸಿಕೊಳ್ಳಲು ಅವಕಾಶ ನೀಡುತ್ತದೆ. ಮಾತ್ರವಲ್ಲದೆ ವಿಶ್ವದ ಪ್ರಮುಖ ಸಂಸ್ಥೆಗಳೊಂದಿಗೆ ಶೈಕ್ಷಣಿಕ-ಔದ್ಯಮಿಕ ಒಡಂಬಡಿಕೆಗಳನ್ನು ಮಾಡಿಕೊಳ್ಳಲು ರಹದಾರಿ ಆಗಲಿದೆ. ಇದರಿಂದ ವಿದ್ಯಾರ್ಥಿಗಳು ವೃತ್ತಿಪರ ತರಬೇತಿ ಪಡೆದು, ಉದ್ಯೋಗ ಪಡೆಯಲು ವೇದಿಕೆ ನಿರ್ಮಿಸಿದಂತಾಗುತ್ತದೆ ಎಂದವರು ವಿವರಿಸಿದರು.

ಪಠ್ಯಕ್ರಮ, ಶೈಕ್ಷಣಿಕ ಚಟುವಟಿಕೆ, ಸಂಶೋಧನೆ, ವಿಸ್ತರಣ ಕಾರ್ಯಕ್ರಮ ಗಳು, ಮೂಲ ಸೌಕರ್ಯಗಳು, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿ ಸರ್ವತೋಮುಖ ಅಭಿವೃದ್ಧಿ, ಆಡಳಿತ, ನಾಯಕತ್ವ, ನಿರ್ವಹಣೆ ಹಾಗೂ ವ್ಯಕ್ತಿಗತ ಮೌಲ್ಯಗಳು ಮತ್ತು ಅತ್ಯುತ್ತಮ ಕೆಲಸಗಳನ್ನು ಮೌಲ್ಯಮಾಪನ ಮಾಡಿ ಮಾನ್ಯತೆ ಯನ್ನು ಎರಡನೆಯ ಅವಧಿಗೆ ನೀಡಲಾಗಿದೆ. ವಿಶೇಷವಾಗಿ ಶೈಕ್ಷಣಿಕ, ಕ್ರೀಡಾ, ಸಾಂಸ್ಕೃತಿಕ ಹಾಗೂ ಬುಡಕಟ್ಟು ಮತ್ತು ವಿಶೇಷ ಮಕ್ಕಳಿ ಗಾಗಿ ದತ್ತು ಸ್ವೀಕಾರ, ಸಿಎ, ಸಿಎಸ್‌, ಸಿಪಿಟಿ, ಕ್ಯಾಟ್‌, ಬ್ಯಾಂಕಿಂಗ್‌, ಐಪಿಸಿಸಿ ಇತ್ಯಾದಿ ವೃತ್ತಿಪರ ಅಲ್ಲದೆ ಹಲವು ಆಡಳಿತ ಸೇವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಮೂಲಕ ದೂರದೃಷ್ಟಿ, ಬದ್ಧತೆ, ಆಡಳಿತಾತ್ಮಕವಾಗಿ ತೊಡಗಿಸಿ ಕೊಳ್ಳು ವಿಕೆ ಇತ್ಯಾದಿ ಕಾರಣಗಳು “ನ್ಯಾಕ್‌’ ಮನ್ನಣೆಗೆ ಪೂರಕವಾಗಿವೆ. ಪ್ರಾಚಾರ್ಯ ಡಾ| ಕುರಿಯನ್‌, ಸಂಯೋಜಕಿ ಮೌಲ್ಯ ಜೀವನ್‌ರಾಂ ಸಹಿತ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಹಳೆವಿದ್ಯಾರ್ಥಿಗಳೂ ಈ ಸಾಧನೆಯ ಹಿನ್ನೆಲೆಯಲ್ಲಿದ್ದಾರೆ ಎಂದರು. ಪ್ರಾಚಾರ್ಯ ಡಾ| ಕುರಿಯನ್‌, ಪಿಆರ್‌ಒ ಡಾ| ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next