Advertisement

ಚಿನ್ನೇಗೌಡ ವಾಣಿಜ್ಯ ಮಂಡಳಿ ಅಧ್ಯಕ್ಷ

06:00 AM Jun 27, 2018 | |

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ
ಎಸ್‌. ಎ. ಚಿನ್ನೇಗೌಡ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅವರು ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಬುಧವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಂಗಳವಾರ ಬೆಳಗ್ಗೆ 11 ಗಂಟೆಗೆ ಚುನಾವಣೆ ಪ್ರಕ್ರಿಯೆ ನಡೆಯಿತು. ವಿತರಕ ವಲಯದಿಂದ ಅಧ್ಯಕ್ಷ ಸ್ಥಾನಕ್ಕೆ ಚಿನ್ನೇಗೌಡರು ಸ್ಪರ್ಧಿಸಿದ್ದರು. ಅವರ ವಿರುದಟಛಿ ಸುರೇಶ್‌ (ಮಾರ್ಸ್‌) ಸ್ಪರ್ಧೆಗಿಳಿದಿದ್ದರು. ಚಿನ್ನೇಗೌಡರು 551 ಮತಗಳನ್ನು ಪಡೆದರೆ, ಸುರೇಶ್‌ (ಮಾರ್ಸ್‌) 317 ಮತಗಳನ್ನು ಮಾತ್ರ ಪಡೆದು ಪರಾಭವ ಗೊಂಡರು. ಚಿನ್ನೇಗೌಡರು 234 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.  

Advertisement

ಈ ಬಾರಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರ್ಮಾಪಕರ ವಲಯದಿಂದ ಕರಿಸುಬ್ಬು, ವಿತರಕರ ವಲಯದಿಂದ ಕೆ.ಮಂಜು ಸ್ಪರ್ಧಿಸಿ, ಗೆಲುವು ಸಾಧಿಸಿದರೆ, ಪ್ರದರ್ಶಕರ ವಲಯದಿಂದ ಅಶೋಕ್‌ ಅವರು ಅವಿರೋಧ ಆಯ್ಕೆಯಾದರು. ಇನ್ನು, ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಿರ್ಮಾಪಕರ ವಲಯದಿಂದ ಭಾ.ಮ.ಹರೀಶ್‌, ವಿತರಕರ ವಲಯದಿಂದ ಶಿಲ್ಪಾ ಶ್ರೀನಿವಾಸ್‌ ಅವರು ಗೆಲುವು ಪಡೆದರು. ಪ್ರದರ್ಶಕರ ವಲಯದಿಂದ ಸುಂದರ್‌ರಾಜ್‌ ಅವಿರೋಧ ಆಯ್ಕೆಯಾದರು. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಎಂ. ವೀರೇಶ್‌ ಅವರು ಜಯಸಿಂಹ ಮುಸುರಿ ಅವರ ವಿರುದ್ಧ ಗೆಲುವು ಸಾಧಿಸಿದರು. ನೂತನ ಮಂಡಳಿ ಬುಧವಾರ (ಇಂದು) ಬೆಳಗ್ಗೆ 11 ಕ್ಕೆ ಅಧಿಕಾರ ವಹಿಸಿಕೊಳ್ಳಲಿದೆ.

ನಂತರ ಮಾತನಾಡಿದ ಎಸ್‌.ಎ. ಚಿನ್ನೇಗೌಡ, “ಕಳೆದ 30 ವರ್ಷಗಳಿಂದ ವಾಣಿಜ್ಯ ಮಂಡಳಿಯ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡಿದ್ದೆ. ಈಗ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಕಂಡಿದ್ದೇನೆ. ಅಧ್ಯಕ್ಷನಾಗಿ ಕನ್ನಡ ಚಿತ್ರರಂಗ ಮತ್ತು ವಾಣಿಜ್ಯ ಮಂಡಳಿಯ ಘನತೆ ಉಳಿಸುವ ಕೆಲಸ ಮಾಡುತ್ತೇನೆ. ಮುಂಬರುವ ದಿನಗಳಲ್ಲಿ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸದ್ಯಕ್ಕೆ ಕನ್ನಡ ಚಿತ್ರಂಗವು ಸಂಕಷ್ಟ ಎದುರಿಸುತ್ತಿದ್ದು, ಸ್ಟಾರ್‌ ನಟರುಗಳು ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳಲ್ಲಾದರೂ ನಟಿಸಿದರೆ, ಚಿತ್ರರಂಗವು ಚಟುವಟಿಕೆಯಿಂದರಲು ಸಾಧ್ಯ’ ಎಂದು ಈ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next